
ಕುಮಟಾ : ಪ್ರಧಾನ ಮಂತ್ರಿ ಜನ್ ಧನ್ ಖಾತೆಗೆ ಕೇಂದ್ರ ಸರ್ಕಾರ ದಿಂದ ೫೦೦ ರೂ ಜಮಾ ಮಾಡಲಾದ ಹಣ ಪಡೆಯಲು ಮಹಿಳೆಯರು ಬ್ಯಾಂಕ್ ಎದುರು ಪರದಾಡುತ್ತಿರುವ ದೃಶ್ಯ ಗುರುವಾರ ಕುಮಟಾದಲ್ಲಿ ಕಂಡು ಬಂತು.
ಕೋವಿಡ್೧೯ ನಿಮಿತ್ತ ಸಂಪೂರ್ಣ ಭಾರತ ಲಾಕ್ ಡೌನ್ ಅದ ಹಿನ್ನೆಲೆಯಲ್ಲಿ ಬಡ ಜನತೆ ಸಂಕಷ್ಟ ಅನುಭವಿಸಬಾರದೆಂಬ ಸದುದ್ದೇಶ ಹೊಂದಿ ಪ್ರಧಾನಿ ನರೇಂದ್ರ ಮೋದಿಯರು ಜನ್ ಧನ್ ಖಾತೆ ಹೊಂದಿರುವವರಿಗೆ ತಲಾ ೫೦೦ ರೂ ಗಳನ್ನು ಅವರವರ ಬ್ಯಾಂಕ್ ಗಳಿಗೆ ಜಮಾ ಮಾಡಲಾಗಿತ್ತು. ಬ್ಯಾಂಕ್ ನಲ್ಲಿ ಜಮಾ ಅದ ಹಣವನ್ನು ತಕ್ಷಣ ಪಡೆದುಕೊಳ್ಳದಿದ್ದಲ್ಲಿ ಹಣ ಮರಳಲಿದೆ ಎನ್ನುವ ವದಂತಿ ಹಬ್ಬಿದ್ದರಿಂದ ಮಹಿಳೆಯರು ಕಂಗಾಲಾಗಿ ಬ್ಯಾಂಕ್ ಗಳ ಎದುರು ಮುಗಿಬಿದ್ದರು. ಇದರಿಂದಾಗಿ ಕೆಲ ಸಮಯ ಉದ್ವಿಘ್ನ ವಾತಾವರಣ ನಿರ್ಮಾಣವಾಯಿತು. ತಕ್ಷಣ ಪೊಲೀಸ್‌ರು ಸ್ಥಳಕ್ಕೆ ಆಗಮಿಸಿ ಮಹಿಳೆಯರ ಮನವಲಿಸಿದರು. ಯಾವುದೇ ಕಾರಣಕ್ಕೂ ನಿಮ್ಮ ಖಾತೆಗೆ ಜಮಾ ಆದ ಹಣ ಮರಳುವುದಿಲ್ಲ. ಯಾರೊಬ್ಬರೂ ಆತಂಕ ಪಡುವುದು ಬೇಡ. ಆದರೆ ಬ್ಯಾಂಕ್ ಎದುರು ಗುಂಪುಗೂಡಿ ನಿಲ್ಲ ಬಾರದು ಸಾಮಾಜಿಕ ಅಂತರ ಕಾಯ್ದುಕೊಂಡು ನಿಮ್ಮ ಹಣ ಪಡೆದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು. ಇದರಿಂದ ಮಹಿಳೆಯರು ಸಮಾಧಾನಗೊಂದು ಹಣ ಪಡೆದುಕೊಂಡರು.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.