May 8, 2024

Bhavana Tv

Its Your Channel

ಲಾಕ್ ಡೌನ್ ನಿಮಿತ್ತ ಚೆಕ್‌ಪೋಸ್ಟಗಳಲ್ಲಿ ಆಂಬ್ಯುಲೆನ್ಸ್ಗಳಿಗೆ ಅಡ್ಡಿ-ಕಿರಿಕಿರಿ ಶಾಸಕ ದಿನಕರ ಶೆಟ್ಟಿ ಹಾಗೂ ಉಪವಿಭಾಗಾಧಿಕಾರಿ ಅಜಿತ್ ಎಂ. ರೈ ಅವರಿಗೆ ಮನವಿ.

ಕುಮಟಾ ; ಲಾಕ್ ಡೌನ್ ನಿಮಿತ್ತ ಚೆಕ್‌ಪೋಸ್ಟಗಳಲ್ಲಿ ಆಂಬ್ಯುಲೆನ್ಸ್ಗಳಿಗೆ ಉಂಟಾಗುತ್ತಿರುವ ಅಡ್ಡಿ-ಕಿರಿಕಿರಿ ತಪ್ಪಿಸಬೇಕು ಇಲ್ಲವೇ ಲಾಕ್ ಡೌನ್ ಮುಗಿಯುವವರೆಗೆ ಆಂಬ್ಯುಲೆನ್ಸ್ ಸೇವೆಯನ್ನು ಸ್ಥಗಿತಗೊಳಿಸಲು ಅನುಮತಿ ನೀಡಬೇಕು ಎಂದು ತಾಲೂಕಿನ ಖಾಸಗಿ ಆಂಬ್ಯುಲೆನ್ಸ್ ಚಾಲಕ-ಮಾಲಕರು ಭಾನುವಾರ ಶಾಸಕ ದಿನಕರ ಶೆಟ್ಟಿ ಹಾಗೂ ಉಪವಿಭಾಗಾಧಿಕಾರಿ ಅಜಿತ್ ಎಂ. ರೈ ಅವರಿಗೆ ಮನವಿ ಸಲ್ಲಿಸಿದರು.

ತಾಲೂಕಿನ ಒಟ್ಟೂ ೧೨ ಆಂಬ್ಯುಲೆನ್ಸ್ ಮೂಲಕ ರೋಗಿಗಳನ್ನು ಒಂದೆಡೆಯಿAದ ಇನ್ನೊಂದೆಡೆ ಸಂಚಾರ ಸೇವೆ ಒದಗಿಸುತ್ತಿದ್ದೇವೆ. ತುರ್ತು ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಘಟ್ಟದ ಮೇಲ್ಭಾಗದ ಹಾಗೂ ಉಡುಪಿ, ಮಂಗಳೂರಿನ ದೊಡ್ಡ ಆಸ್ಪತ್ರೆಗಳಿಗೆ ಸಾಗಬೇಕಾಗಾದ ಹೊಳೆಗದ್ದೆ ನಾಕಾ, ಶಿರೂರು ಚೆಕ್ ಪೋಸ್ಟಗಳಲ್ಲಿ ಮುಂದಕ್ಕೆ ಸಂಚಾರ ನಿರಾಕರಿಸಲಾಗುತ್ತದೆ. ನಮ್ಮೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳಲಾಗುತ್ತಿದೆ. ರೋಗಿಗಳ ಸ್ಥಿತಿಗತಿ, ವೈದ್ಯರ ಪ್ರಮಾಣಪತ್ರ ತೋರಿಸಿದರೂ ಅನುಮತಿ ನೀಡುತ್ತಿಲ್ಲ. ಶನಿವಾರ ಶಿರಸಿಯ ಟಿಎಸ್‌ಎಸ್ ಆಸ್ಪತ್ರೆಗೆ ರೋಗಿ ಸಾಗಿಸುವಾಗ ನಿಲೇಕಣಿ ಚೆಕ್ ಪೋಸ್ಟನಲ್ಲಿ ಅನುಮತಿಸದೇ ತೊಂದರೆ ನೀಡಿದ್ದರು. ಚೆಕ್‌ಪೋಸ್ಟಗಳಲ್ಲಿ ಕಿರುಕುಳ ತಪ್ಪಿಸಿದರೆ ಮಾತ್ರ ನಾವು ಆಂಬ್ಯುಲೆನ್ಸ ಸೇವೆ ಮುಂದುವರೆಸಬಹುದಾಗಿದೆ ಎಂದು ಮನವಿಯಲ್ಲಿ ತಿಳಿಸಿದರು.
ಕೂಡಲೇ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿದ ಶಾಸಕ ಶೆಟ್ಟಿ, ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು, ಉಡುಪಿ ಜಿಲ್ಲೆಗಳಿಗೆ ತೆರಳುವುದು ಅನಿವಾರ್ಯ. ತುರ್ತು ಪರಿಸ್ಥಿತಿಯಲ್ಲಿ ಬರುವ ಪ್ರತಿಯೊಂದು ರೋಗಿಯೂ ಕರೊನಾ ಸೋಂಕು ಇಲ್ಲವೆಂದು ದೃಢೀಕರಣ ತರುವುದು ಅಸಾಧ್ಯ ಎಂದು ಸಮಸ್ಯೆ ಮನದಟ್ಟು ಮಾಡಿದರು. ಒಂದೊಮ್ಮೆ ಆಂಬ್ಯುಲೆನ್ಸಗಳಿಗೆ ಅನುಮತಿ ನಿರಾಕರಿಸಿದರೆ ಲಾಠಿ ಹಿಡಿದು ಚೆಕ್ ಪೋಸ್ಟಗೆ ಬಂದು ನಿಲ್ಲುತ್ತೇನೆ. ಜಿಲ್ಲೆಯ ಯಾವುದೇ ರೋಗಿ ಶಿರೂರು ಚೆಕ್ ಪೋಸ್ಟನಲ್ಲಿ ಅನುಮತಿ ನಿರಾಕರಣೆಯಿಂದ ಚಿಕಿತ್ಸೆ ಸಿಗದೇ ಮೃತರಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಶವ ಇಟ್ಟು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಬಳಿಕ ಜಿಲ್ಲಾಧಿಕಾರಿ ಜಿ.ಜಗದೀಶ ಉತ್ತರ ಕನ್ನಡ ಜಿಲ್ಲೆಯ ಆಂಬ್ಯುಲೆನ್ಸಗಳಿಗೆ ಅನುಮತಿ ನೀಡಿ, ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡುವ ಭರವಸೆ ನೀಡಿದ್ದಾರೆ. ಸಮಸ್ಯೆ ಬಗೆಹರಿದಿದೆ ಎಂದು ಶಾಸಕ ಶೆಟ್ಟಿ ಆಂಬ್ಯುಲೆನ್ಸ ಚಾಲಕ-ಮಾಲಕರಿಗೆ ತಿಳಿಸಿದರು. ಈ ವೇಳೆ ಉಪಸ್ಥಿತರಿದ್ದ ಉಪವಿಭಾಗಾಧಿಕಾರಿ ಅಜಿತ್ ಎಂ.ರೈ ಕೂಡಾ ಆಂಬ್ಯುಲೆನ್ಸ ಚಾಲಕ-ಮಾಲಕರಿಗೆ ಎಲ್ಲ ರೀತಿಯ ಸಹಕಾರದ ಭರವಸೆ ನೀಡಿದರು. ಆಂಬ್ಯುಲೆನ್ಸ ಚಾಲಕ – ಮಾಲಕರಾದ ಭಾಸ್ಕರ ನಾಯ್ಕ, ಉಲ್ಲಾಸ, ಚಂದ್ರು ನಾಯ್ಕ, ಮಣಿಕಂಠ ನಾಯ್ಕ, ಸಂಜು, ಜಾನು, ಕೃಷ್ಣ ಗೌಡ ಇನ್ನಿತರರು ಇದ್ದರು.

error: