November 14, 2024

Bhavana Tv

Its Your Channel

ಮೆ.೩ರ ತನಕ ಭಟ್ಕಳದಲ್ಲಿಕಟ್ಟುನಿಟ್ಟಿನ ನಿಯಮ ಮುಂದುವರೆಯಲಿದೆ.

ಮೆ.೩ರ ತನಕ ಭಟ್ಕಳದಲ್ಲಿಕಟ್ಟುನಿಟ್ಟಿನ ನಿಯಮ ಮುಂದುವರೆಯಲ್ಲಿದ್ದು, ರಂಜಾನ್ ಹಬ್ಬಕ್ಕೂ ಇದರಿಂದ ವಿನಾಯಿತಿ ಇಲ್ಲ ಎಂದು ಉ.ಕ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ಅವರು ಗುರುವಾರ ಭಟ್ಕಳಕ್ಕೆ ಆಗಮಿಸಿ ಹಿರಿಯ ಅಧಿಕರಿಗಳ ಸಭೆ ನಡೆಸಿ ಮಾತನಾಡಿದರು. ಭಟ್ಕಳದ ತಂಜೀA ಸಂಸ್ಥೆ ರಮ್ಜಾನ್ ಹಬ್ಬಕ್ಕಾಗಿ ತಮಗೆ ದಿನದಲ್ಲಿ ಕನಿಷ್ಟ ೨ ಗಂಟೆಯಾದರೂ ವಿನಾಯಿತಿ ನೀಡಬೇಕು ಎಂದು ಮನವಿ ಸಲ್ಲಿಸಿದ್ದರು. ಮನವಿಯನ್ನು ನಯವಾಗಿ ತಿರಸ್ಕರಿಸಿದ ಸಚವರು ಮೆ. ೩ರತನಕ ನಿಯಮದಲ್ಲಿ ಯಾವುದೆ ಬದಲಾವಣೆ ಸಾದ್ಯವಿಲ್ಲ. ಮುಸ್ಲಿಂ ಮಾತ್ರವಲ್ಲದ ಹಿಂದೂ, ಕ್ರಿಶ್ಚಿಯನ್, ಸಿಖ್ ಸೇರಿದಂತೆ ಯಾವುದೆ ಧರ್ಮದ ಸಾರ್ವಜನಿಕವಾಗಿ ಧಾರ್ಮಿಕ ಆಚರಣೆಗೆ ಅವಕಾಶವಿಲ್ಲ. ಅಲ್ಲಿಯವರೆಗೂ ಈ ಹಿಂದಿನ ನಿಯಮಗಳೆ ಜಾರಿಯಲ್ಲಿರಲಿದೆನಂತರದ ದಿನಗಳಲ್ಲಿ ಜಿಲ್ಲೆಯ ಮತ್ತು ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿ, ರಾಜ್ಯ ಮತ್ತು ಜಿಲ್ಲೆಗಳ ಬೆಳವಣಿಗೆಗಳನ್ನು ಗಮನಿಸಿ ಚರ್ಚೆ ನಡೆಸಿ ತಿಳಿಸಲಾಗುವದು ಎಂದರು. ಏ.೨೬, ೨೭ರೊಳಗೆ ನಮ್ಮ ಉತ್ತರ ಕನ್ನಡ ಜಿಲ್ಲೆ ಕರೊನಾ ಮುಕ್ತವಾಗಲು ಎಲ್ಲಾ ಹೋರಾಟ ನಡೆಸುತ್ತಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಶಾಸಕ ಸುನೀಲ ನಾಯ್ಕ, ಜಿ.ಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಲ್ಲಾ ಆರೋಗ್ಯಾಧಿಕಾರಿ ಅಶೋಕ ಕುಮಾರ, ನೂಡಲ್ ಅಧಿಕಾರಿ ಡಾ. ಶರದ್ ನಾಯಕ, ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ, ಟಿಎಚ್‌ಒ ಡಾ. ಮೂರ್ತಿರಾಜ್ ಭಟ್, ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಇದ್ದರು

error: