October 5, 2024

Bhavana Tv

Its Your Channel

ಹೊನ್ನಾವರ ರೋಟರಿ ಕ್ಲಬ್ ವತಿಯಿಂದ ಕೋವಿಡ್ ಯೋಧರಿಗೆ ಫೇಸ್ ಶೀಲ್ಡ್ ವಿತರಣೆ

ಹೊನ್ನಾವರದ ರೋಟರಿ ಕ್ಲಬ್ ಹೊನ್ನಾವರ ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರಿಗೆ ಸುಮಾರು೧೦೦ ಫೇಸ್ ಶೀಲ್ಡಗಳನ್ನು ವಿತರಿಸಿತು. ಕೊರೋನಾ ವೈರಾಣುವಿನ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿರುವ ವೈದ್ಯರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಚಪ್ಪಾಳೆ ತಟ್ಟುವುದರ ಮೂಲಕ ಗೌರವ ಸಲ್ಲಿಸಲಾಯಿತು.
ಅಲ್ಲದೇ ಹಗಲಿರುಳೂ ಲಾಕ್ ಡೌನನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುತ್ತಿರುವ ಪೋಲೀಸ ಸಿಬ್ಭಂದಿಗಳಿಗೂ ೫೦ ಫೇಸ್ ಶೀಲ್ಡಗಳನ್ನು ವಿತರಿಸಿತು. ಅವರಿಗೂ ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಲ್ಲಿಸಲಾಯಿತು.
ಅಲ್ಲದೇ ಸರ್ಕಾರಿ ಆಸ್ಪತ್ರೆಯ ೨೦ ದಿನಗೂಲಿ ನೌಕರರಿಗೆ ತಲಾ ೪೦೦ ರೂಪಾಯಿ ಮೌಲ್ಯದ ದಿನಸಿ ಸಾಮಾನುಗಳ ಪೊಟ್ಟಣಗಳನ್ನು ವಿತರಿಸಲಾಯಿತು.
ರೋಟರಿ ಕ್ಲಬ್ಬಿನ ಸದಸ್ಯರು ಅಧ್ಯಕ್ಷ- ಕಾರ್ಯದರ್ಶಿಗಳೊಂದಿಗೆ ಕೈ ಜೋಡಿಸಿ ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.

error: