June 8, 2023

Bhavana Tv

Its Your Channel

ಕರೋನಾ ವಾರಿಯರ್ಸ ಆಗಿ ಕಾರ್ಯನಿರ್ವಹಿಸುವವರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ – ಕುಮುಟಾ ಹೊನ್ನಾವರ ಮಾಜಿ ಶಾಸಕಿ ಶಾರದಾ ಶೆಟ್ಟಿ

ಯೋಧರು ಗಡಿಯಲ್ಲಿ ನಿಂತು ದೇಶ ರಕ್ಷಣೆಗಾಗಿ ತೊಡಗಿರುವಮತೆ ಕರೋನಾ ಸೋಂಕು ಇಂದು ವಿಶ್ವದೆಲ್ಲಡೆ ಮಾರಕವಾಗಿರುವಾಗ ಆರೊಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿಗಳು ಕರೋನಾ ವಾರಿಯರ್ಸ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿಮ್ಮ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕುಮುಟಾ ಹೊನ್ನಾವರ ಮಾಜಿ ಶಾಸಕಿ ಶಾರದಾ ಶೆಟ್ಟಿ ಅಭಿಪ್ರಾಯಪಟ್ಟರು.
ತಾಲೂಕಿನ ಸಾಲ್ಕೋಡ್, ಕಡ್ಲೆ, ಹೊಸಾಕುಳಿ, ಮುಗ್ವಾ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಸಿಬ್ಬಂದಿಗಳಿಗೆ ಮಾಜಿ ಶಾಸಕಿ ಗುರುವಾರ ದಿನಬಳಕೆ ಸಾಮಗ್ರಿಗಳ ಕಿಟ್ ವಿತರಿಸಿದರು.
೪ ಗ್ರಾಮದ ೨೭ ಆಶಾ ಕಾರ್ಯಕರ್ತೆಯರು, ೧೦ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ೩೩ ಅಂಗನವಾಡಿ ಕಾರ್ಯಕರ್ತೆಯರಿಗೆ ಕಿಟ್ ವಿತರಿಸಿದರು.
ಕೊರೋನಾ ತಡೆಗೆ ಜಾರಿಯಾದ ಲಾಕ್ ಡೌನ್‌ನಿಂದ ಎಲ್ಲರೂ ಗೃಹಬಂಧನದಲ್ಲಿದ್ದರೆ, ಆರೋಗ್ಯ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಮಾತ್ರ ತಮ್ಮ ಜೀವದ ಹಂಗನ್ನು ತೊರೆದು ಸಾರ್ವಜನಿಕರಲ್ಲಿ ಕೊರೋನಾ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಜನ ಸಾಮಾನ್ಯರ ಆರೋಗ್ಯ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವ ಮೂಲಕ ಕೊರೋನಾ ವಿರುದ್ಧ ಸೈನಿಕರಂತೆ ಹೋರಾಡುತ್ತಿದ್ದಾರೆ. ಈ ಕೊರೋನಾ ಸೈನಿಕರಿಗೆ ನೆರವು ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಅವರು ದಿವಂಗತ ಮೋಹನ ಕೆ ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಸುಮಾರು ೭೦ಕ್ಕೂ ಅಧಿಕ ಕೊರೋನಾ ಸೈನಿಕರಿಗೆ ದಿನ ಬಳಕೆ ಸಾಮಗ್ರಿಗಳ ಕಿಟ್ ವಿತರಿಸಿದರು. ಈ ಮೂಲಕ ಕೊರೋನಾ ಸೈನಿಕರನ್ನು ಅಭಿನಂದಿಸಿ, ಪ್ರೋತ್ಸಾಹಿಸುವ ಕಾರ್ಯ ಮಾಡಿದರು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಸಂತೋಷ, ಕಾಂಗ್ರೇಸ್ ಮುಖಂಡರಾದ ರವಿಕುಮಾರ ಶೆಟ್ಟಿ, ವಿನಾಯಕ ಶೇಟ್ ಹಳದೀಪುರ, ಸಂದೇಶ ಶೆಟ್ಟಿ, ಗಜಾನನ ನಾಯ್ಕ, ಪರಮೇಶ್ವರ ನಾಯ್ಕ, ಸಂತೋಷ ವಿನೋದ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

About Post Author

error: