July 14, 2024

Bhavana Tv

Its Your Channel

ಕೋರೋನಾ ವಾರಿಯರ್ಸ್ಗಳಾದ ಕ್ಷೇತ್ರದ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ ಸಹಿತ ಅಗತ್ಯ ಜೀವನೋಪಾಯದ ಕಿಟ್ ವಿತರಣೆ- ಶಾಸಕ ಸುನೀಲ ನಾಯ್ಕ

ಭಟ್ಕಳ: ಕೋರೋನಾ ಮಹಾಮಾರಿ ಕಡಿವಾಣಕ್ಕೆ ಮನೆ ಮನೆ ತೆರಳಿ ಜನರ ಆರೋಗ್ಯ ವಿಚಾರಣೆ, ಪರ ಊರಿನಿಂದ ಬಂದAತವರ ಬಗ್ಗೆ ಮಾಹಿತಿಗಳನ್ನು ಹೊತ್ತು ತಾಲೂಕಾಳಿತಕ್ಕೆ ತಿಳಿಸುವ ಕೋರೋನಾ ವಾರಿಯರ್ಸ್ಗಳಾದ ಕ್ಷೇತ್ರದ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ ಸಹಿತ ಅಗತ್ಯ ಜೀವನೋಪಾಯದ ಕಿಟ್ ನ್ನು ಶಾಸಕ ಸುನೀಲ ನಾಯ್ಕ ಬುಧವಾರದಂದು ಶಿರಾಲಿಯ ಅವರ ಕಾರ್ಯಾಲಯದಲ್ಲಿ ವಿತರಿಸಿದರು.

ಕಿಟ್ ವಿತರಿಸಿ ಮಾತನಾಡಿದ ಶಾಸಕ ಸುನೀಲ ನಾಯ್ಕ ‘ಆಶಾ ಕಾರ್ಯಕರ್ತೆಯರು ಕ್ಷೇತ್ರದಲ್ಲಿ ಯಾವುದೇ ಪ್ರಚಾರವಿಲ್ಲದೇ ಕೆಲಸ ಮಾಡುತ್ತಿದ್ದಾರೆ. ಅವರ ಸೇವೆಗೆ ಕ್ರತಜ್ಞತೆಯ ಸಲ್ಲಿಕೆ ಅಸಾಧ್ಯ. ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಅವರ ಸೇವೆಗೆ ಕ್ಷೇತ್ರದ ಜನರಿಂದ ಸಾವಿರ ನಮಸ್ಕಾರ ತಿಳಿಸಿದ ಅವರು ಕ್ಷೇತ್ರದ ಜನರು ಆಶಾ ಕಾರ್ಯಕರ್ತೆಯರೊಂದಿಗೆ ನಾವಿರಬೇಕು. ಅವರ ಕಾರ್ಯಕ್ಕೆ ನಾವು ಧೈರ್ಯ ತುಂಬಬೇಕು. ಆಶಾ ಕಾರ್ಯಕರ್ತೆಯರ ಜೊತೆಗೆ ಶಿಕ್ಷಕರನ್ನು ನೇಮಿಸಬೇಕೆಂಬ ಬಗ್ಗೆ ಜಿಲ್ಲಾಢಳಿತ ಜೊತೆಗೆ ಚರ್ಚಿಸಿದ್ದೆನೆ. ಹಗಲಿರುಳು ಸೇವೆ ಮಾಡುವ ಇವರ ಋಣ ತಿರಿಸಲು ಸಾಧ್ಯವಿಲ್ಲ. ಮುಂದಿನ ದಿನದಲ್ಲಿ ಸದನದಲ್ಲಿ ಆಶಾ ಕಾರ್ಯಕರ್ತೆಯ ಕೆಲಸದ ಭದ್ರತೆ, ಪ್ರೋತ್ಸಾಹ ಧನದ ಹೆಚ್ಚಳದ ವಿಚಾರವನ್ನು ಪ್ರಸ್ತಾಪಿಸಿ ಅವರ ಸೇವೆಗೆ ನಾನು ಸದಾ ಸಿದ್ದನಿದ್ದೇನೆ. ಮಾಜಿ ಶಾಸಕ ಮಂಕಾಳ ವೈದ್ಯ ಅವರು ಆಟೋ ಚಾಲಕರು, ಗೂಡ್ಸ ಹಾಗೂ ಕಾರು ಚಾಲಕ, ನಿರ್ವಾಹಕರಿಗೂ ದಿನಸಿ ತರಕಾರಿ ಕಿಟ್ ನೀಡಿದು ಸಂತಸವಾಗಿದ್ದು ಉತ್ತಮ ಕಾರ್ಯವನ್ನೇ ಮಾಡಿದ್ದಾರೆ ಎಂದರು.

ತಾಲೂಕಾ ಆರೋಗ್ಯಾಧಿಕಾರಿ ಡಾ.ಮೂರ್ತಿರಾಜ್ ಭಟ್ ಮಾತನಾಡಿ ‘ಒಬ್ಬರೇ ಈ ಕೋರೋನಾ ಹೋರಾಟ ಮಾಡಲು ಅಸಾಧ್ಯ. ಎಲ್ಲರ ಸಾಂಘಿಕ ಪ್ರಯತ್ನದಿಂದ ಕೋರೋನಾ ಮಹಾಮಾರಿ ಕಡಿವಾಣ ಮಾಡಲು ಸಾಧ್ಯ. ತೆರೆ ಮರೆಯಲ್ಲಿ ಕೆಲಸ ನಿರ್ವಹಿಸುವವರ ಮಧ್ಯೆ ತೀರಾ ಕಷ್ಟದ ಕೆಲಸದಲ್ಲಿ ಮನೆ ಮನೆ ತೆರಳಿ ಬಿಸಿಲು ಮಳೆಯೆನ್ನದೃ ಹಗಲಿರುಳು ಎಲ್ಲರ ಆರೋಗ್ಯ ವಿಚಾರಿಸಿ ಅಗತ್ಯ ಮಾಡಿ ಮಾಹಿತಿ ಪಡೆಯುವ ಆಶಾ ಕಾರ್ಯಕರ್ತೆಯರಿಗೆ ಎಷ್ಟೇ ಧನ್ಯವಾದ ಕೋರಿದರು ಕಡಿಮೆಯೇ ಸರಿ. ಇಲಾಖೆ ಅವರಿಗೆ ನೀಡಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಿದ್ದು ಅವರ ಕಾಳಜಿ ನಮ್ಮ ಮೇಲಿದೆ ಎಂದರು.

ಬಿಜೆಪಿ ಮಾಜಿ ತಾಲೂಕಾ ಮಂಡಲ ಅಧ್ಯಕ್ಷ ರಾಜೇಶ ನಾಯ್ಕ ‘ಕ್ಷೇತ್ರದಾದ್ಯಂತ ಜನರಿಗೆ ಅಗತ್ಯ ಕಿಟ್ ವಿತರಣೆ ಮಾಡಿದ್ದಾರೆ. ಇಂದು ಆಶಾ ಕಾರ್ಯಕರ್ತೆಯವರಿಗೆ ಮಾಸ್ಕ, ಕಿಟ್ ವಿತರಣೆಗೆ ಮಾಡಿದ್ದಾರೆ. ಕ್ಷೇತ್ರದ ಜನರಿಗೆ ಜೊತೆಗೆ ಕ್ಷೇತ್ರದ ಹೊರಗಿನ ಜನರಿಗೆ ಸಹಾಯ ಹಸ್ತ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆರ್ಥಿಕವಾಗಿ ಸಬಲರಾಗಿದ್ದರು ಮುಂದೆ ಬರಬೇಕು. ಮಾಜಿ ಶಾಸಕರ ಉತ್ತಮ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದೇವೆ ಎಂದರು.

ಇದೇ ಸಂಧರ್ಭದಲ್ಲಿ ಶಾಸಕ ಸುನೀಲ ನಾಯ್ಕ ಆಶಾ ಕಾರ್ಯಕರ್ತೆಯ ಸಮಸ್ಯೆಯನ್ನು ಆಲಿಸಿದ್ದು ಆಶಾ ಕಾರ್ಯಕರ್ತೆ ಗೀತಾ ನಾಯ್ಕ ಮಾತನಾಡಿ ‘ಭಟ್ಕಳದಲ್ಲಿ ಕಷ್ಟಪಟ್ಟು ಕೆಲಸ ಮಾಡಿದರೆ ಕೆಲವರು ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂಬ ಬೇಸರವಿದ್ದು, ಜನರ ಆರೋಗ್ಯ ಸರಿಯಿದ್ದರೆ ನಮ್ಮ ಕೆಲಸ ಕಡಿಮೆ ಈ ನಿಟ್ಟಿನಲ್ಲಿ ಜನರು ಸಹಕರಿಸಬೇಕು. ಕೆಲಸ ಮುಗಿಸಿ ಮನೆಗೆ ಬಂದರೆ ಮನೆಯಲ್ಲಿ ಉತ್ತಮ ಸಹಕಾರವಿದೆ ಆದರೆ ಊರಿನಲ್ಲಿ ಅಕ್ಕ ಪಕ್ಕದ ಮನೆಯಲ್ಲಿ ದೂರವಿಡುವ ಮಾತುಗಳು ನೋವುಂಟು ಮಾಡಿದೆ. ಜನರ ಸೇವೆಗೆ ಜೀವದ ಆಸೆ ಬಿಟ್ಟು ಕೆಲಸ ಮಾಡುತ್ತಿದ್ದೇವೆ ಜನರು ಸಹ ನಮಗೆ ಸಹಕರಿಸಿಬೇಕಿದೆ. ಇಲಾಖೆಯೂ ನಮಗೆ ಉತ್ತಮ ಸಹಕಾರ, ಸಾರಿಗೆ ವ್ಯವಸ್ಥೆ ಮಾಡಿದ್ದಾರೆ. ಸರಕಾರದಿಂದ ಶಾಸಕರು ಸೇವಾ ಭದ್ರತೆ ಪ್ರೋತ್ಸಾಹ ಧನ ಹೆಚ್ಚಿಸಿದ್ಧಲ್ಲಿ ಕೆಲಸ ಮಾಡಲು ಅನೂಕೂಲವಾಗಲಿದೆ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಭಟ್ಕಳ ಭಾಗದ ೧೦ ಹಾಗೂ ಹೊನ್ನಾವರ ಭಾಗದ ೧೦ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ ಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಭಟ್ಕಳ ಬಿಜೆಪಿ ತಾಲೂಕಾಧ್ಯಕ್ಷ ಸುಬ್ರಾಯ ದೇವಾಡಿಗ, ಹೊನ್ನಾವರ ಬಿಜೆಪಿ ತಾಲೂಕಾಧ್ಯಕ್ಷ
ಬಿಜೆಪಿ ಹಿರಿಯ ಮುಖಂಡ ಕ್ರಷ್ಣ ನಾಯ್ಕ ಆಸರಕೇರಿ, ಬಿಜೆಪಿ ಘಟಕದ ಪ್ರಮುಖರಾದ ಮೋಹನ ನಾಯ್ಕ, ಭಾಸ್ಕರ ದೈಮನೆ, ಶಾಸಕರ ಬೆಂಬಲಿಗರು, ಕಾರ್ಯಕರ್ತರು ಇದ್ದರು.

ಹಿರಿಯ ಆರೋಗ್ಯ ಸಹಾಯಕ ಈರಯ್ಯ ದೇವಾಡಿಗ ಪ್ರಾಸ್ತಾವಿಕವಾಗಿ ಕೋರೋನಾ ವೈರಸ್ ಬಗ್ಗೆ ಮಾಹಿತಿ ನೀಡಿದರು.

error: