ಕುಮುಟಾ ; ತಾಲೂಕಿನ ಹೆಗಡೆಯ ಶಿವಪುರದಲ್ಲಿರುವ ಕೂಲಿಕಾರರ ಕಷ್ಟಕ್ಕೆ ನೆರವಾದ ಮಿತ್ರಧ್ವಯರಾದ ಕುಮಟಾದ ಉದ್ಯಮಿ ಚೇತನ್ ಶೇಟ್ ಹಾಗೂ ಚಾರ್ಟರ್ಡ್ ಎಕೌಂಟೆಂಟ್ ಯೋಗೀಶ್ ಕಾಮತ
ಲಾಕ್ ಡೌನ್ ಆದಾಗಿನಿಂದ ಕೂಲಿಕಾರರ ಜೀವನ ಹೇಳತೀರದು… ಕೂಲಿ ಮಾಡಿ ಅದೇ ದಿನದ ದುಡಿಮೆ ಇಂದ ಜೀವನ ಸಾಗಿಸುತ್ತ ಇದ್ದವರು ಈಗ ಕೆಲಸವಿಲ್ಲದೇ ಪರದಾಡುವ ಪರಿಸ್ಥಿತಿ ಎದುರಾಗಿದೆ ಅಂಥವರ ಪಾಲಿಗೆ ಕೆಲವರು ದೇವರಂತೆ ಕಾಣುತ್ತಾರೆ.. ಕಷ್ಟದ ಸಮಯದಲ್ಲಿ ನೆರವಾದವರನ್ನು ಮರೆಯಲು ಸಾಧ್ಯವಿಲ್ಲ.. ಹಾಗೆಯೇ ಕುಮಟಾದ ಮಹಾಲಸಾ ದ ಉದ್ಯಮಿ ಚೇತನ್ ಶೇಟ್ ಹಾಗೂ ಜಿಲ್ಲೆಯ ಪ್ರಸಿದ್ಧ ಚಾರ್ಟರ್ಡ್ ಎಕೌಂಟೆಂಟ್ ಎನಿಸಿಕೊಂಡಿರುವ ಜಿ ಎಸ್ ಕಾಮತ್ ರವರ ಸುಪುತ್ರ ಯೋಗೀಶ್ ಕಾಮತ ರವರು ಬಡವರಿಗೆ ನೆರವಾಗಬೇಕು ಎಂಬ ಉದ್ದೇಶದಿಂದ ಮನೆಯ ಅಡಿಗೆಗೆ ಬೇಕಾಗುವ ಎಲ್ಲ ಸಾಮಗ್ರಿ ಗಳನ್ನು ಒಳಗೊಂಡ ಉತ್ಯುತ್ತಮವಾದ ಕಿಟ್ ನ್ನು ಶಿವಪುರದ 60 ಮನೆಗಳಿಗೆ ವಿತರಿಸಿದರು.. ಈಗ ಭಾಗದಲ್ಲಿ ಎಲ್ಲರೂ ಕೂಡ ದಿನದ ಕೂಲಿ ಮಾಡಿ ಜೀವನ ಸಾಗಿಸುವಂಥವರು.. ಈ ಮಿತೃಧ್ವಯರ ಈ ಕಾರ್ಯಕ್ಕೆ ಉತ್ತಮ ಪ್ರಶಂಸೆ ಅಭಿನಂದನೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಗಣೇಶ ನಾಯ್ಕ, ಪ್ರಾತೇಶ ನಂಬಿಯಾರ, ಅಭಿಷೇಕ ತಲಗೇರಿ ಹಾಗೂ ಇತರರು ಉಪಸ್ಥಿತರಿದ್ದರು
More Stories
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಉತ್ತರ ಕನ್ನಡ ಹಾಗೂ ಭಟ್ಕಳ ಘಟಕ ವತಿಯಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ.
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಭಟ್ಕಳವತಿಯಿಂದ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಮೆರವಣಿಗೆ ಮೂಲಕ ಬಂದು ಸಹಾಯಕ ಆಯುಕ್ತರಿಗೆ ಮನವಿ.
ತುಳುನಾಡಿನ ಕಾರಣೀಕ ಮೆರೆದ ಕಲ್ಜಿಗ ಸಿನೇಮಾ, ಕಾಂತಾರದ ಬೆನ್ನಿಗೇ ಮತ್ತೊಂದು ಕಲಾತ್ಮಕ ಚಿತ್ರ ಕೊಟ್ಟ ಕರಾವಳಿ