ಹೊನ್ನಾವರ : ಕರೋನಾ ಸುರಕ್ಷತೆಗಾಗಿ ದೇಶದ್ಯಂತ ಲಾಕ್ ಡೌನ್ ನಿರ್ಮಾಣವಾಗಿತ್ತು. ಅದರಂತೆ ಹೊನ್ನಾವರ ತಾಲೂಕಿನಲ್ಲಿ ಸಾರ್ವಜನಿಕರು ಸಹಕಾರ ನೀಡಿದ್ದರು. ಕೆಲ ಸಾರ್ವಜನಿಕರು ಅನಾವಶ್ಯಕವಾಗಿ ದ್ವಿಚಕ್ರವಾಹನ ಮೂಕಲಕ ಓಡಾಟ ಮಾಡುವ ಮೂಲಕ ನಿಯಮವನ್ನು ಗಾಳಿಗೆ ತೂರುತ್ತಿದ್ದರು. ಅಕಲ್ಲದೇ ಪೋಲಿಸರ ಕಣ್ಣು ತಪ್ಪಿಸಿ ಓಡಾಟವನ್ನು ನಡೆಸುತ್ತಿದ್ದರು. ಒಮ್ಮೆ ಸಿಕ್ಕ ಬಿದ್ದರೆ ಮೆಡಿಕಲ್ ಶಾಪ್ ಔಷಧಿ ಕೊಳ್ಳಲು ಬಂದಿದ್ದೇನೆ ಎನ್ನುವ ಕಾರಣ ಮುಂದಿಡುತ್ತಿದ್ದರು. ಇದನ್ನು ಮನಗಂಡ ಹೊನ್ನಾವರ ಪೋಲಿಸರು ಪಟ್ಟಣಕ್ಕೆ ಬರುವ ಪ್ರಮುಖ ಮಾರ್ಗಗಳಾದ ಪ್ರಭಾತನಗರ, ಕಾಸರಕೋಡ್,ರಾಮತೀರ್ಥ ಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಿ ಪ್ರತಿಯೊರ್ವರನ್ನು ಕಾರಣ ಕೇಳಿಯೇ ಪಟ್ಟಣಕ್ಕೆ ಪ್ರವೇಶಿಸುವಂತೆ ಅನುವು ಮಾಡುತ್ತಿದ್ದಾರೆ. ಇದರಿಂದ ಪಟ್ಟಣಕ್ಕೆ ಅನಾವಶ್ಯಕವಾಗಿ ಬರುವವರು ನಿಂತಿದ್ದು ನಾಳೆಯಿಂದ ಪಟ್ಟಣದ ವಿವಿಧ ಭಾಗದಲ್ಲಿ ಪೋಲಿಸರು ಸಂಚಾರ ನಡೆಸಲಿದ್ದು ಪಟ್ಟಣ ನಿವಾಸಿಗಳ ಮೇಲೆಯೂ ಕಣ್ಣು ಇಡಲು ಇಲಾಖೆ ಸಜ್ಜಾಗುತ್ತಿದೆ ಎಂದು ಪೋಲಿಸ್ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
More Stories
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಉತ್ತರ ಕನ್ನಡ ಹಾಗೂ ಭಟ್ಕಳ ಘಟಕ ವತಿಯಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ.
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಭಟ್ಕಳವತಿಯಿಂದ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಮೆರವಣಿಗೆ ಮೂಲಕ ಬಂದು ಸಹಾಯಕ ಆಯುಕ್ತರಿಗೆ ಮನವಿ.
ತುಳುನಾಡಿನ ಕಾರಣೀಕ ಮೆರೆದ ಕಲ್ಜಿಗ ಸಿನೇಮಾ, ಕಾಂತಾರದ ಬೆನ್ನಿಗೇ ಮತ್ತೊಂದು ಕಲಾತ್ಮಕ ಚಿತ್ರ ಕೊಟ್ಟ ಕರಾವಳಿ