September 16, 2024

Bhavana Tv

Its Your Channel

ಸಂಕಷ್ಟದ ಸಮಯದಲ್ಲಿ ನೆರವಿಗೆ ಧಾವಿಸಿದ ಶಾಸಕ ದಿನಕರ ಶೆಟ್ಟಿ

ಕುಮಟಾ : ಕರೋನಾ ಮಹಾಮಾರಿಯಿಂದ ಒಂದಡೆ ದಿನಸಿ ಸೇರಿದಂತೆ ಇತರೆ ಅಗತ್ಯವಸ್ತುಗಳ ಸಾಮಗ್ರಿ ಕೊಳ್ಳಲು ಅನಾನೂಕೂಲದ ಪರಿಸ್ಥಿತಿ ಒಂದಡೆಯಾದರೆ ಇನ್ನೊಂದಡೆ ತಾವು ಬೆಳೆದ ಬೆಳೆಗಳು ಮಾರಾಟ ಮಾಡಲು ಪರಿಸ್ಥಿತಿ ಎಲ್ಲಡೆ ನಿರ್ಮಾಣವಾಗಿದೆ. ಅದರಲ್ಲೂ ತರಕಾರಿ ಬೆಳೆದು ಜೀವನ ನಡೆಸುವ ಗೋಕರ್ಣ ಭಾಗದ ಮಹಿಳೆಯಿಂದ ಪ್ರತಿನಿತ್ಯ ತರಕಾರಿ ಖರೀದಿಸಿ ಕ್ಷೇತ್ರದ ವಿವಿದಡೆ ಹಂಚಿಕೆ ಮಾಡುತ್ತಿರುವ ಶಾಸಕ ದಿನಕರ ಶೆಟ್ಟಿ ಇನ್ನೊಂದು ಹೆಜ್ಜೆ ಮುಂದಿಟ್ಟು ದಿನಸಿ ಸಾಮಗ್ರಿಗಳನ್ನು ವಿತರಣೆಮಾಡಲು ಮುಂದಾಗಿದ್ದಾರೆ. ತೀರಾ ಹಿಂದುಳಿದ ಬಡವರನ್ನು ಗುರುತಿಸಿ ಅಗತ್ಯವಸ್ತುಗಳನ್ನು ಕಿಟ್ ರೂಪದಲ್ಕಲಿ ತಯಾರಿಸಿ ಗ್ರಾಮಗಳಿಗೆ ಆಗಮಿಸಿ ವಿತರಣೆ ಮಾಡುತ್ತಿದ್ದಾರೆ. ಇದರಂತೆ ಹೊನ್ನಾವರ ತಾಲೂಕಿನ ಕಡತೋಕಾ ಪಂಚಾಯತ ವ್ಯಾಪ್ತಿಯ ೨೦೦ ಕುಟುಂಬಗಳಿಗೆ ಶುಕ್ರವಾರ ದಿನಸಿ ಸಾಮಗ್ರಿ ಕಿಟ್ ವಿತರಣೆ ಮಾಡಿ ಕರೋನಾ ಸುರಕ್ಷತೆಗಾಗಿ ಸರ್ಕಾರದ ನಿಯಮವನ್ನು ಪಾಲಿಸುವಂತೆ ಮನವಿ ಮಾಡಿದರು.

error: