June 8, 2023

Bhavana Tv

Its Your Channel

ಭಟ್ಕಳ ಗುರುಕೃಪಾ ಪತ್ತಿನ ಸಹಕಾರಿ ಸಂಘದಿOದ ಪಿಗ್ಮಿ ಸಂಗ್ರಾಹಕರಿಗೆ ದಿನಸಿಕಿಟ್ ವಿತರಣೆ

ಭಟ್ಕಳ : ಕೊರೋನಾ ಲಾಕಡೌನ್‌ನಿಂದ ಸಂಕಷ್ಟದಲ್ಲಿರುವ ಸಂಘದ ೧೦ ಮಂದಿ ಪಿಗ್ಮಿ ಸಂಗ್ರಾಹಕರಿಗೆ ಮತ್ತು ಸಂಕಷ್ಟದಲ್ಲಿರುವ ೪೦ಕ್ಕೂ ಅಧಿಕ ಜನರಿಗೆ ಗುರುಕೃಪಾ ಪತ್ತಿನ ಸಹಕಾರಿ ಸಂಘದಿoದ ದಿನಸಿ ಕಿಟ್ ವಿತರಿಸಲಾಯಿತು.
ಸಂಘದಿoದ ಮುಖ್ಯಮಂತ್ರಿ ಪರಿಹಾರ ನಿಧಿಗೂ ೨೫ ಸಾವಿರ ರೂಪಾಯಿ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸುರೇಶ ನಾಯ್ಕ, ನಮ್ಮ ಸಂಘದಿoದ ೪೦ ಮಂದಿ ಬಡವರಿಗೆ ದಿನಸಿ ಕಿಟ್ ವಿತರಿಸಲಾಗಿದೆ. ಅದರಂತೆ ಸಂಕಷ್ಟದಲ್ಲಿರುವ ಪಿಗ್ಮಿ ಸಂಗ್ರಾಹಕರ ಗಮನಿಸಿ ಅವರಿಗೂ ಕೂಡ ಅಗತ್ಯ ದಿನಸಿ ಸಾಮಗ್ರಿಯುಳ್ಳ ಕಿಟ್ ವಿತರಿಸಲಾಗಿದೆ. ಅದಲ್ಲದೇ ಮುಖ್ಯಮಂತ್ರಿ ಪರಿಹಾರ ನಿಧಿಗೂ ಸಹ ೨೫ ಸಾವಿರ ರೂಪಾಯಿಯನ್ನು ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸುರೇಶ ನಾಯ್ಕ, ಪ್ರಧಾನ ವ್ಯವಸ್ಥಾಪಕ ವಾಸುದೇವ ನಾಯ್ಕ, ನಿರ್ದೇಶಕರಾದ ಮೋಹನ ನಾಯ್ಕ, ವೆಂಕಟೇಶ ನಾಯ್ಕ, ನಾರಾಯಣ ನಾಯ್ಕ, ಕುಮಾರ ನಾಯ್ಕ, ರಾಜೇಶ ನಾಯ್ಕ ಮುಂತಾದವರಿದ್ದರು.

About Post Author

error: