May 30, 2023

Bhavana Tv

Its Your Channel

ಬಡವರಿಗೆ ಊಟ ನೀಡುವ ಮುಖಾಂತರ “ಪರಶುರಾಮ” ಜಯಂತಿ ಯನ್ನು ಆಚರಣೆ ಮಾಡಿದ ಪರಶುರಾಮ ಸ್ಪೋರ್ಟ್ಸ್ ಕ್ಲಬ್

ಭಟ್ಕಳ: ಕೋವಿಡ್ ೧೯ ತುರ್ತು ಪರಿಸ್ಥಿತಿಯಲ್ಲಿ ತಮ್ಮ ಸ್ವಂತ ಹಣವನ್ನು ಹಾಗೂ ಕೇಲವು ದಾನಿಗಳ ಸಹಾಯದಿಂದ ಹಣ ಸಂಗ್ರಹಿಸಿ ಭಟ್ಕಳ ಸರ್ಪನಕಟ್ಟೆ ಸ್ಪೋರ್ಟ್ಸ್ ಕ್ಲಬ್ ಹಸಿದವರಿಗೆ ಅನ್ನ ನೀಡುತ್ತಿದೆ. ಭಟ್ಕಳ ತಾಲ್ಲೂಕಿನ ಶ್ರೇಷ್ಠ ಕಬಡ್ಡಿ ತಂಡ ಪರಶುರಾಮ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರು ಪರಶುರಾಮ ಜಯಂತಿಯoದು ಸರ್ಪನಕಟ್ಟೆ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅನ್ನ ದಾನ ಮಾಡುತ್ತಿದ್ದ ಅವರಿಗೆ ಒಂದು ದಿನದ ಅನ್ನದಾನದ ಸಂಪೂರ್ಣ ವೆಚ್ಚವನ್ನು ಭರಿಸುವ ಮುಖಾಂತರ ಪರಶುರಾಮ ಜಯಂತಿ ವಿಭಿನ್ನ ವಾಗಿ ಆಚರಣೆ ಮಾಡಿದ್ದಾರೆ. ಬಡವರಿಗೆ ಊಟವನ್ನು ನೀಡಿದ ಪರಶುರಾಮ ಸ್ಪೋರ್ಟ್ಸ್ ಕ್ಲಬ್ ಕಾರ್ಯಕ್ಕೆ ಸರ್ಪನಕಟ್ಟೆ ಸ್ಪೋರ್ಟ್ಸ್ ಕ್ಲಬ್ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಎರಡು ಸ್ಪೋರ್ಟ್ಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.

About Post Author

error: