November 14, 2024

Bhavana Tv

Its Your Channel

ಕರೋನಾ ಸಂಕಷ್ಟದ ಸಮಯದಲ್ಲಿ ದೇವಾಲಯದ ಆಡಳಿತ ಮಂಡಳಿಯಿOದ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಚೆಕ್ ವಿತರಣೆ.

ಹೊನ್ನಾವರ ; ಕರೋನಾ ಸಂಕಷ್ಟದ ಸಮಯದಲ್ಲಿ ಸಾರ್ವಜನಿಕರಿಗೆ ಸರ್ಕಾರ ಹಲವು ರೀತಿಯಲ್ಲಿ ನೆರವಾಗುತ್ತಿದೆ. ಸರಕಾರಕ್ಕೆ ಆರ್ಥಿಕ ಸಹಾಯ ಬೇಕಾಗಿದೆ, ಸರ್ಕಾರಕ್ಕೆ ಆರ್ಥಿಕ ಸಹಾಯ ಮಾಡುವ ಉದ್ದೇಶದಿಂದ ಹೊನ್ನಾವರ ತಾಲೂಕಿನ ನಗರೆ ಬೇರೊಳ್ಳಿ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಆಡಳಿತ ಕಮೀಟಿಯವರು ಪ್ರಧಾನಮಂತ್ರಿ ಪರಿಹಾರ ನಿಧಿಗೆ ೨೫,೦೦೦/-ರೂಪಾಯಿ ಮೊತ್ತದ ಚೆಕ್ ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಮೂಲಕ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಮಂಡಲ ಅಧ್ಯಕ್ಷ ರಾಜೇಶ ಭಂಡಾರಿ, ಅರ್ಚಕರಾದ ಅನಂತ ಭಟ್, ಮುಖಂಡರಾದ ಹರೀಶ ಪ್ರಭು, ಗಣಪತಿ ನಾಯ್ಕ ಬಿಟಿ, ಪ್ರಮೋದ ಜೋಶಿ, ಸೀತಾರಾಮ ನಾಯ್ಕ, ಅಶೋಕ ನಾಯ್ಕ, ಚಂದ್ರು ನಾಯ್ಕ ಹಾಗೂ ಮುಖಂಡರು ಉಪಸ್ಥಿತರಿದ್ದರು.

error: