December 5, 2024

Bhavana Tv

Its Your Channel

ಕರೋನಾ ಸುರಕ್ಷತೆಗಾಗಿ ಲಾಕ್ ಡೌನ್ , ಹೊನ್ನಾವರದಲ್ಲಿ ನಾಳೆ ಇಲ್ಲ ಸಡಿಲಿಕೆ ,

ಹೊನ್ನಾವರ ; ಕರೋನಾ ಸುರಕ್ಷತೆಗಾಗಿ ಲಾಕ್ ಡೌನ್ ಮುಂದುವರೆದಿದ್ದು ಉತ್ತರಕನ್ನಡದ ೧೧ ಸೊಂಕಿತರು ಗುಣಮುಖರಾಗಿದ್ದಾರೆ. ಇಂದಿಗೆ ಎರಡನೇ ಹಂತದ ಲಾಕ್ ಡೌನ ಪೂರ್ಣಗೊಂಡಿದ್ದು ಮೂರನೇ ಹಂತದ ಲಾಕ್ ಡೌನ ನಾಳೆಯಿಂದ ಜಾರಿಗೆ ಬರಲಿದ್ದು ಸ್ವಲ್ಪ ಮಟ್ಟಿನ ಸಡಿಲಿಕೆ ಕಾಣಬಹುದು ಎಂದು ಎಲ್ಲರ ನಿರಿಕ್ಷೆಯಾಗಿತ್ತು. ಇದಲ್ಲದೆ ಜಿಲ್ಲಾಧಿಕಾರಿಗಳು ತಾಲೂಕಿನ ಅಧಿಕಾರಿಗಳೊಂದಿಗೆ ಶನಿವಾರ ವಿಡಿಯೋ ಕಾನ್ಪರೆನ್ಸ ಮೂಲಕ ಮಾಹಿತಿ ನೀಡಿದ್ದು ಜಿಲ್ಲಾ ಉಸ್ತುವಾರಿ ಸಚೀವರೊಂದಿಗೆ ಚರ್ಚಿಸಿ ಮಂಗಳವಾರದಿಂದ ಯಾವ ರೀತಿಯಾಗಿ ಅನುಷ್ಟಾನ ಮಾಡಬೇಕು ಎನ್ನುವ ಮಾಹಿತಿ ತಿಳಿಸಲಾಗುವುದು ಎಂದು ತಿಳಿಸಿರುದರಿಂದ ನೂತನ ಆದೇಶ ಮಂಗಳವಾರದಿಂದ ಅನುಷ್ಟಾನಗೊಳ್ಳುವ ಸಾಧ್ಯತೆ ಇದೆ.
ಹೊರಜಿಲ್ಲೆಗೆ ಹೋಗುವವರಿಗೆ ಪಾಸ್ ಹಾಗು ಬಸ್ ವ್ಯವಸ್ಥೆ

ಹೊರಜಿಲ್ಲೆ ಹೋಗುವವರಿಗೆ ಪಾಸ್ ನೀಡುವ ಜೊತೆ ಹೊರ ಜಿಲ್ಲೆಯಿಂದ ಬರುವವರನ್ನು ತಪಾಸಣೆ ನಡೆಸಿ ಹೋಮ ಕ್ವಾರಟೈಂನ್ ಮಾಡಲಾಗುವುದು ಎಂದು ತಹಶೀಲ್ದಾರ ವಿವೇಕ ಶೆಣ್ವೆ ಮಾಹಿತಿ ನೀಡಿದ್ದಾರೆ.
ಹೊನ್ನಾವರ ಪಟ್ಟಣಕ್ಕೆ ಬರುವವರ ಮೇಲೆ ೩ ಕಡೆಗಳಲ್ಲಿ ನಿಗಾ ಮುಂದುವರಿಕೆ ಗೇರುಸೊಪ್ಪಾ ಚೆಕ್ ಪೊಸ್ಟನಲ್ಲಿಯೂ ನಿಗಾ
ಎರಡನೇ ಹಂತದಲ್ಲಿ ಲಾಕ್ ಡೌನ್ ವಿಸ್ತರಣೆ ಮಾಡಿದ ಬಳಿಕ ಪೋಲಿಸ್ ಇಲಾಖೆ ನಿಗಾ ವಹಿಸಿದ್ದು ಮೂರಕ್ಕೂ ಅಧಿಕ ಭಾಗದಲ್ಲಿ ಪೋಲಿಸ್ ಬ್ಯಾರಿಕೇಡ್ ಅಳವಡಿಸಿ ನಿಗಾ ವಹಿಸುತ್ತಿದ್ದು ಅನಾವಶ್ಯಕ ಓಡಾಡುವರಿಗೆ ತಡೆಯೊಡ್ಡಿದ್ದು ಇದನ್ನು ಸೋಮವಾರ ಮುಂದುವರೆಯಲಿದೆ ಎಂದು ಸಿಪಿಐ ವಸಂತ ಆಚಾರಿ ಮಾಹಿತಿ ನೀಡಿದ್ದಾರೆ.
ಪಟ್ಟಣದಲ್ಲಿ ಈ ಹಿಂದಿನಂತೆಯೇ ಇರಲಿದೆ ನಾಳೆ
ಹೊನ್ನಾವರ ಪಟ್ಟಣದಲ್ಲಿ ನಾಳೆಯಿಂದ ಎಲ್ಲಾ ಅಂಗಡಿಗಳು ತೆರೆಯಲಿದೆ ಎಂದು‌ ಕೆಲವರು ನಂಬಿದ್ದರು ಈ ಬಗ್ಗೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು ಸ್ಪಷ್ಟನೆ ನೀಡಿದ್ದು ಜಿಲ್ಲಾಧಿಕಾರಿಗಳು ಸೂಚಿಸಿದಂತೆ ನಾಳೆ ಈ ಹಿಂದಿನಂತೆ ಇರಲಿದೆ . ಎಲ್ಲಡೆ ಸಾಮಾಜಿಕ ಅಂತರ ಮಾಸ್ಕ ಕಡ್ಡಾಯವಾಗಿದೆ. ಸೋಮವಾರ ನೂತನ ಆದೇಶ ಬಂದಲ್ಲಿ ಮಂಗಳವಾರ ಅನುಷ್ಟಾನ ಗೊಳ್ಳಲಿದೆ ಎಂದರು.
ನಾಳೆಯೂ ಹೊನ್ನಾವರ ಪಟ್ಟಣದಲ್ಲಿ ಪಾಸ್ ಇದ್ದವರಿಗೆ ಮಾತ್ರ ಪೆಟ್ರೂಲ್
ಲಾಕ್ ಡೌನ್ ಘೋಷಣೆ ಬಳಿಕ ಪೆಟ್ರೂಲ್ ಪೂರೈಕೆ ಪಾಸ್ ಇದ್ದವರಿಗೆ ಮಾತ್ರ ನೀಡುತ್ತಾ ಬಂದಿದ್ದು ಸೋಮವಾರವು ಕೂಡಾ ಯಥಾ ಸ್ಥಿತಿ ಇರಲಿದೆ ಎನ್ನುವ ಮಾಹಿತಿ ಲಭ್ಯವಾಗಲಿದೆ.
ಸೋಮವಾರ ಬರುವ ಆದೇಶದ ಮೇಲೆ ಎಲ್ಲರ ಚಿತ್ತಮೂಡಿದ್ದು ಆದೇಶ ಬಂದ ಬಳಿಕ ಮೂರನೇ ಹಂತದ ಲಾಕ್ ಡೌನ್ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.

error: