November 14, 2024

Bhavana Tv

Its Your Channel

ಗೋಲ್ ಶಾಲೆಯ ಪುಟಾಣಿಗಳಿಂದ ಕೊರೋನ ಜಾಗೃತಿ ಫಲಕಗಳು “

ಹೊನ್ನಾವರ ; ಗೋಲ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯು ಈ ಲಾಕ್ ಡೌನ್ ಸಮಯದಲ್ಲಿ ವಿನೂತನ ಪರಿಕಲ್ಪನೆಯ ಬೇಸಿಗೆ ಶಿಬಿರವನ್ನು ಆಯೋಜಿಸಿದೆ. ” ಪತಂಜಲಿ ಯೋಗ ಸಮಿತಿ”ಯ ಸಹಯೋಗದಲ್ಲಿ ಪ್ರತಿ ನಿತ್ಯ ” ಯೋಗಭ್ಯಾಸ” ದ ವಿಡಿಯೋಗಳನ್ನು ಚಿತ್ರೀಕರಿಸಿ ಪೋಷಕರೊಂದಿಗೆ ವಾಟ್ಸಪ್ ಮುಖಾಂತರ ಹಂಚಿಕೊಳ್ಳಲಾಗುತ್ತಿದೆ. ಮಕ್ಕಳೊಂದಿಗೆ ಪೋಷಕರು ವಿವಿಧ ಆಸನಗಳನ್ನು ಮಾಡುತ್ತ ಜೊತೆಗೆ ಪ್ರಾಣಾಯಾಮ, ಯೋಗದ ವಿವಿಧ ಲಾಭಗಳ ಬಗ್ಗೆ ತಿಳಿವಳಿಕೆಯನ್ನು ಪಡೆಯುತ್ತಿದ್ದಾರೆ. ಹಾಗೆಯೇ ಮನೆಯಲ್ಲಿಯೇ ಇರುವ ಹಲವಾರು ವಸ್ತುಗಳನ್ನು ಬಳಸಿ ‘ ಕಸದಿಂದ ರಸ ‘ ಪರಿಕಲ್ಪನೆಯಲ್ಲಿ ಮಕ್ಕಳು ದಿನಪತ್ರಿಕೆ, ಬಳಸಿ ಬಿಸಾಡಿದ ಪ್ಲಾಸ್ಟಿಕ್ ಬಾಟಲಿ, ಬೆಂಕಿ ಪೆಟ್ಟಿಗೆ ಇತ್ಯಾದಿಗಳಿಂದ ಆಕರ್ಷಕ ಪೇಂಟಿಂಗ್, ಕಲಾಕೃತಿಗಳನ್ನು ತಯಾರಿಸಿ ಸಂತೋಷ ಪಡುತ್ತಿದ್ದಾರೆ.
ಎಲ್ಲೆಡೆ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಗಳು ನಡೆಯುತ್ತಿವೆ. ಹಾಗೆಯೇ ಈ ವಿಶೇಷ ಆನ್‌ಲೈನ್ ಬೇಸಿಗೆ ಶಿಬಿರದಲ್ಲಿ ‘ ಕೋವಿಡ್ ಜಾಗೃತಿ ‘ಗಾಗಿ ಮಕ್ಕಳು ಪೋಸ್ಟರ್ ಗಳನ್ನು ತಯಾರಿಸಿದ್ದಾರೆ. ಹಾಗೆಯೇ ಕೊರೋನ ವಾರಿಯರ್ಸ್ ಗಳಾದ ಪೋಲಿಸ್, ಡಾಕ್ಟರ್ಸ್, ನರ್ಸ್ ಹಾಗೂ ಸ್ವಚ್ಛತಾ ಸಿಬ್ಬಂದಿ ಇವರೆಲ್ಲರಿಗೂ ಧನ್ಯವಾದಗಳನ್ನು ತಿಳಿಸುವಂತಹ ಫಲಕಗಳನ್ನು ಮಕ್ಕಳು ತಯಾರಿಸಿದರು. ಸುಮಾರು 2 ರಿಂದ 3000 ಜನರಿಗೆ ‘ ವಾಟ್ಸಪ್ ‘ ಮುಖಾಂತರ ವಿವಿಧ ಸಂದೇಶಗಳನ್ನು’ ಜಾಗೃತಿ ಫಲಕ ‘ ಗಳನ್ನು ಹಿಡಿದ ಪುಟಾಣಿಗಳ ಫೋಟೊಗಳನ್ನು ಕಳುಹಿಸಲಾಗಿದೆ. ಇದರಿಂದ ಮಕ್ಕಳಿಗೂ ಕೋವಿಡ್ – 19 ವೈರಸ್ ಬಗ್ಗೆ ಹೆಚ್ಚು ಮಾಹಿತಿ ತಿಳಿದುಕೊಳ್ಳಲು ಅನುವಾಗಿದೆ.

error: