May 27, 2023

Bhavana Tv

Its Your Channel

ಮುಖ್ಯ ಮಂತ್ರಿ ಪರಿಹಾರ ನಿಧಿ ಚೆಕ್ ಮನೆ ಬಾಗಿಲಿಗೆ ತೆರಳಿ ವಿತರಿಸಿದ ಶಾಸಕ ಸುನೀಲ ನಾಯ್ಕ


ಲಾಕ್ ಡೌನ್ ಘೋಷಣೆ ಆಗುವ ಪೂರ್ವದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಬರುವ ಕಡುಬಡವರಿಗೆ ಸಲ್ಲಿಸಿದ ಮುಖ್ಯಮಂತ್ರಿ ಪರಿಹಾರ ನಿಧಿಯ ಅರ್ಜಿದಾರರಿಗೆ ಸಂಕಷ್ಟದ ನಡುವೆಯು ಮಂಜೂರು ಮಾಡಿಸಿಕೊಂಡು ಬಂದಿರುದಲ್ಲದೇ ಲಾಕ್ ಡೌನ್ ಇರುವ ಕಾರಣ ಫಲಾನುಭವಿಗಳು ಚೆಕ್ ಸ್ವೀಕರಿಸಲು ಕಛೇರಿಗೆ ಬರುವುದು ಅಸಾಧ್ಯವೆಂಬುದನ್ನು ಅರಿತು, ಅಂತಹ ಫಲಾನುಭವಿಗಳ ಚೆಕ್ ಗಳನ್ನು ಅವರ ಮನೆಗಳಿಗೆ ಭೇಟಿ ನೀಡಿ ಶಾಸಕ ಸುನೀಲ ನಾಯ್ಕ ರವಿವಾರ ವಿತರಿಸಿದರು. ನಂತರ ಮಾತನಾಡಿ ಆರ್ಥಿಕ ಸಂಕಷ್ಟದಲ್ಲಿ ಇರುವ ಫಲಾನುಭವಿಗಳಿಗೆ ಹಣ ಮಂಜೂರಾಗಿರುದರಿAದ ಕುಟುಂಬ ನಿರ್ವಹಣೆಗೆ ಕೊಂಚಮಟ್ಟಿಗೆ ಸಹಕಾರಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯು ಕರೋನ ಮುಕ್ತವಾಗಿರುವುದು ಸಂತೋಷದ ವಿಚಾರವಾದರೂ ಮುಂಜಾಗ್ರತಾ ಕ್ರಮವಾಗಿ ಇನ್ನೂ ಕೆಲವು
ದಿನಗಳು ಲಾಕ್‌ಡೌನ್‌ನ್ನು ಮುಂದುವರೆಸುವುದು ಅನಿವಾರ್ಯವಾಗಿದೆ.

ಫಲಾನುಭವಿಗಳ ವಿವರ.
ಬಳ್ಕೂರು ತಲಗೋಡಿನ ಗಜಾನನ ನಾಯ್ಕ್ – ೨೨,೦೯೦ ರೂಪಾಯಿ

ಬಳಕೂರಿನ ಹಲಸಿನಡಿಕೇರಿಯ ವಿದ್ಯಾ ವಿವೇಕ್ ಪೈ – ೫,೯೭೭ ರೂಪಾಯಿ

ಹೊಸಪಟ್ಟಣ ಕಳಸನಮೋಟೆಯ ಗೋವಿಂದ ಚಂದ್ರು ಗೌಡ – ೩೦೦೦೦ ರೂಪಾಯಿ

ನಗರೆ ಮುಗ್ವಾದ ಪಾರ್ವತಿ ಗೋವಿಂದ ನಾಯ್ಕ – ೮,೭೪೦ ರೂಪಾಯಿ

ಮುಗ್ವಾದ ಪ್ರಸಾದ ವಿ ಹೆಗಡೆ – ೬೧,೦೫೫ ರೂಪಾಯಿ

ಹಡಿನಬಾಳದ ಶ್ರೀಮತಿ ಆನ್ ಡುಮಿಂಗ್ ಲೋಪೇಸ್ – ೨೫೦೦೦ ರೂಪಾಯಿ

ಹೊಸಪಟ್ಟಣ ಕಳಸನಮೋಟೆಯ ಗಾಯತ್ರಿ ಜಯಂತ ಗೌಡ – ೮,೫೫೮ ರೂಪಾಯಿ

About Post Author

error: