March 21, 2023

Bhavana Tv

Its Your Channel

ಕರೋನಾ ಸಂಕಷ್ಟದಲ್ಲಿ ಹೆಸ್ಕಾಂನಲ್ಲಿ ಮೀಟರ್ ರೀಡರ್ ಆಗಿ ಸೇವೆ ಸಲ್ಲಿಸುವರಿಗೆ ದಿನಸಿ ಕಿಟ್ ವಿತರಿಸಿದ ಶಾಸಕರು

ಕರೋನಾ ಮಹಾಮಾರಿಯಿಂದ ಹಲವು ಉದ್ಯೋಗಳ ಮೂಲಕ ಸೇವೆ ಸಲ್ಲಿಸುವವರು ಭಯದಲ್ಲಿ ಹಲವರು ಕಾರ್ಯನಿರ್ವಹಿಸಿದರೆ, ಇನ್ನು ಹಲವರು ಕಾರ್ಯನಿರ್ವಹಿಸಲು ಸಾಧ್ಯವಾಗದೇ ದಿನನಿತ್ಯ ಜೀವನ ನಡೆಸಲು ಸಾಧ್ಯವಾಗುತ್ತಿರಲಿಲ ಅದರಲ್ಲಿ ಹೆಸ್ಕಾಂನಲ್ಲಿ ಮೀಟರ್ ರೀಡರ್ ಆಗಿ ಕಾರ್ಯನಿರ್ವಹಿಸುವವರು ಸೇರಿದ್ದಾರೆ. ಕಳೆದ ೨ ತಿಂಗಳಿನಿAದ ಮನೆಮನೆಗೆ ತೆರಳಿ ಬಿಲ್ ನೀಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಸಂಬಳವಿಲ್ಲದೆ ದಿನಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಇದನ್ನು ಮನಗಂಡ ಶಾಸಕ ಸುನೀಲ ನಾಯ್ಕ ಭಟ್ಕಳ ತಾಲ್ಲೂಕಿನ ವಿದ್ಯುಚ್ಛಕ್ತಿ ಮೀಟರ್ ರೀಡರ್ (ಹೆಸ್ಕಾಂ)ಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಲಾಯಿತು. ಭಟ್ಕಳ ತಾಲ್ಲೂಕಿನ ಮೀಟರ್ ರೀಡರ್‌ಗಳು ಹಾಜರಿದ್ದು ಕಿಟ್ ನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿಮೀಟರ್ ರೀಡರ್ ಸಂಘದ ಅಧ್ಯಕ್ಷರಾದ ಈಶ್ವರ ನಾಯ್ಕ, ಬಿಜೆಪಿ ಮುಖಂಡರಾದ ಕೃಷ್ಣ ನಾಯ್ಕ ಆಸರಕೇರಿ, ಶ್ರೀಕಾಂತ ನಾಯ್ಕ, ಭಟ್ಕಳ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಮಹೇಂದ್ರ ನಾಯ್ಕ ಮತ್ತು ಪಾಂಡುರAಗ ನಾಯ್ಕ ಉಪಸ್ಥಿತರಿದ್ದರು.

About Post Author

error: