
ಹೊನ್ನಾವರ:ಹಲವು ವರ್ಷ ಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ತಾಲ್ಲೂಕಿನ ಕೆಳಗಿನೂರು ಗ್ರಾಮಪಂಚಾಯತ ಕರುಣಾಲಯ ಟ್ರಸ್ಟ್ ನಿಂದ ತಾಲ್ಲೂಕಿನ ಹಲವೆಡೆಗಳಲ್ಲಿ ಆಹಾರ ಸಾಮಗ್ರಿಗಳ ಕಿಟ್‌ನ್ನು ವಿತರಿಸಿ ಜನರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಲಾಕಡೌನ ಹಿನ್ನೆಲೆಯಲ್ಲಿ ಕಡುಬಡವರು ಸಾಕಷ್ಟು ಸಂಕಷ್ಟಗಳಿಗೆ ಸಿಲುಕಿದ್ದು ಅಂತವರಿಗೆ ಕೆಳಗಿನೂರು ಗ್ರಾಮಪಂಚಾಯತ ಕರುಣಾಲಯ ಟ್ರಸ್ಟವತಿಯಿಂದ ಮಂಕಿ ಹಾಗೂ ಕಾಸರಕೋಡ ಸೇರಿದಂತೆ ಹಲವೆಡೆಗೆ ಸುಮಾರು ೨೫೦ಕ್ಕೂ ಹೆಚ್ಚಿನ ಕಿಟ್‌ಗಳನ್ನು ವಿತರಿಸಿದರು.ಈ ಸಂದರ್ಭದಲ್ಲಿ ಕರುಣಾಲಯ ಟ್ರಸ್ಟ್ ಅಧ್ಯಕ್ಷ ಲೂಕಾಸ್ ಫರ್ನಾಂಡೀಸ್ ಹಾಗೂ ಅವರ ಪತ್ನಿ ಗ್ರಾಮಪಂಚಾಯತ ಸದಸ್ಯೆ ಆಗ್ನೇಸ್ ಫರ್ನಾಂಡೀಸ್ ಈ ಸಮಾಜಮುಖಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.