June 15, 2024

Bhavana Tv

Its Your Channel

ಮನೆಯಲ್ಲಿ ಹಾವು ನುಗ್ಗಿದೆ ಹಾವು ಹಿಡಿಯುವವರನ್ನು ಕಳುಹಿಸಿಕೋಡಿ,

ಭಟ್ಕಳ ; ಮನೆಯಲ್ಲಿ ಹಾವು ನುಗ್ಗಿದೆ ಹಾವು ಹಿಡಿಯುವವರನ್ನು ಕಳುಹಿಸಿಕೋಡಿ ಎಂದು ಸಹಾಯವಾಣಿಯಲ್ಲಿ ಕರೆ ಸ್ವೀಕರಿಸಿದ ಸಿಬ್ಬಂದಿ ಕ್ಷಣಕಾಲ ದಂಗಾದ ಘಟನೆ ಶನಿವಾರ ಭಟ್ಕಳ ತಹಸೀಲ್ದಾರ ಕಚೇರಿಯಲ್ಲಿ ನಡೆದಿದೆ.
ಭಟ್ಕಳ ಸಂಪೂರ್ಣ ಲಾಕ್ ಡೌನ್ ಆಗಿದ್ದರಿಂದ ತಾಲೂಕಾಡಳಿತ ಜನರ ಸಹಾಯಕ್ಕಾಗಿ ಸಹಾಯವಾಣಿ ತೆರೆದಿತ್ತು. ಅದರಲ್ಲಿ ಇಷ್ಟುದಿನ ಬರಿ ತರಕಾರಿ, ದಿನಸಿ, ಮೆಡಿಸಿನ್, ಆಸ್ಪತ್ರೆಗೆ ಹೋಗುವ ಪಾಸ್, ಅಂಬ್ಯಲೆನ್ಸ್ ವಿಚಾರವಾಗಿ ಕರೆಬರುತಿತ್ತು. ಆದರೆ ಶನಿವಾರ ಬೆಳಿಗ್ಗೆ ಮುಟ್ಟ್ಳ್ಳಿ ಪಂಚಾಯಿತಿ ವ್ಯಾಪ್ತಿಯ ತಲಾಂದನಿoದ ಮನೆಯ ಆವರಣದಲ್ಲಿ ನಾಗರಹಾವು ನುಗ್ಗಿದೆ. ಹಾವು ಹಿಡಿಯುವವರನ್ನು ಕಳುಹಿಸಿಕೋಡಿ ಎಂದು ಕರೆ ಬಂದಿದೆ. ಕರೆ ಸ್ವೀಕರಿಸಿದ ಮಹಿಳಾ ಸಿಬ್ಬಂದಿ ಕ್ಷಣ ಬೆಚ್ಚಿಬಿದ್ದಿದ್ದಾರೆ. ನಂತರ ತನ್ನ ಹಿರಿಯ ಅಧಿಕಾರಿಗಳ ಬಳಿ ಮಾತನಾಡಿ ಹಾವು ಹಿಡಿಯುವವರ ನಂಬರ ಕೊಟ್ಟಿದ್ದಾರೆ. ಆದರೆ ಅವರು ಪಾಸ್ ಇಲ್ಲದೆ ಶಿರಾಲಿಯಿಂದ ಬರುವದು ಕಷ್ಟವಾಗಿತ್ತು. ಸಹಾಯವಾಣಿ ನೊಡಲ್ ಅಧಿಕಾರಿ ವಾಸು ಮೊಗೇರ ಅರಣ್ಯ ಇಲಾಖೆಯವರನ್ನು ಸಂಪರ್ಕಿಸಿ ಹಾವು ಹಿಡಿಯುವವರನ್ನು ಮನೆಗೆ ಕಳುಹಿಸಿದ್ದಾರೆ. ಸುಮಾರು ೬ ಅಡಿಗೂ ಉದ್ದವಿದ್ದ ನಾಗರಹಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ.

error: