April 26, 2024

Bhavana Tv

Its Your Channel

ಮಾಸ್ಕ ಇಲ್ಲದೆ ಓಡಾಡುವ ಜನರಿಗೆ ಭಟ್ಕಳ ಪುರಸಭೆ ಅಧಿಕಾರಿಗಳಿಂದ ದಂಡ.

ಭಟ್ಕಳ : ಸರ್ಕಾರದ ಆದೇಶದಂತೆ ಕೊರೊನಾ ಕಡಿವಾಣಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ತಾಲೂಕಿನಲ್ಲಿ ಅನಗತ್ಯವಾಗಿ ರಸ್ತೆಯಲ್ಲಿ ಓಡಾಡಿದ ೮ ಮಂದಿಯ ಮೇಲೆ ತಲಾ ರೂ. ೧೦೦ ರಂತೆ ಪುರಸಭೆ ದಂಡ ವಿಧಿಸಿದೆ.
ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕಿ ಸೋಜಿಯಾ ಸೋಮನ್ ಹಾಗೂ ಅವರ ಸಿಬ್ಬಂದಿ ಎರಡು ದಿನದಿಂದ ಮಾಸ್ಕ ಇಲ್ಲದೆ ಓಡಾಡುವ ಜನರಿಗೆ ದಂಡ ಹಾಕುವ ಕಾರ್ಯಾಚರಣೆಗೆ ಇಳಿದಿದೆ. ಮಾಸ್ಕ್ ಧರಿಸದೆ ರಸ್ತೆಯಲ್ಲಿ ಸುತ್ತಾಡುವವರನ್ನು ಹಿಡಿದು ತಲಾ ೧೦೦ ರೂ. ದಂಡ ಹಾಕಲಾಗಿದೆ.ಮೊದಲ ದಿನದಂದು ಪಟ್ಟಣದ ರಂಗೀಕಟ್ಟೆ, ತಾಲೂಕು ಪಂಚಾಯತ್ ಕಾರ್ಯಾಲಯ ಎದುರು ಹಾಗೂ ಮುಖ್ಯ ರಸ್ತೆಯಲ್ಲಿ ನಿಂತುಕೊoಡು ಮಾಸ್ಕ್ ಧರಿಸದೆ ಇರುವವರಿಗೆ ದಂಡ ವಿಧಿಸಿದ್ದಲ್ಲದೆ, ಅವರಿಗೆ ಒಂದೊAದು ಮಾಸ್ಕ್ನ ಉಚಿತವಾಗಿ ನೀಡಿ ಕಳುಹಿಸಿದರು. ೨ನೇ ದಿನದಂದು ಮಣ್ಕುಳಿ, ರಘುನಾಥ ರಸ್ತೆ, ಚೌಥನಿ, ಹೂವಿನಪೇಟೆ ರಸ್ತೆಯಲ್ಲಿ ಕಾರ್ಯಾಚರಣೆಗಿಳಿದು ದಂಡ ವಿಧಿಸಿ ಉಚಿತ ಮಾಸ್ಕ್ ವಿತರಿಸಿದ್ದಾರೆ.

error: