
ಹೊನ್ನಾವರ : ಜಿಲ್ಲೆಯಲ್ಲಿ ಮಂಗನ ಕಾಯಿಲೆ ಉಪದ್ರವ ಮುಂದುವರಿದಿದ್ದು ಈ ಬೇಸಿಗೆಯಲ್ಲಿ ಒಟ್ಟಿಗೆ ೮೧ ಜನ ಮಂಗನ ಕಾಯಿಲೆ ಪೀಡಿತರಾಗಿದ್ದಾರೆ. ಅದರಲ್ಲಿ ಅತಿ ಹೆಚ್ಚು ಸಿದ್ಧಾಪುರದಲ್ಲಿ ೫೪, ಹೊನ್ನಾವರ ೧೬, ಜೋಯ್ಡಾ ೮, ಅಂಕೋಲಾ ೧, ಕುಮಟಾ ೧, ಭಟ್ಕಳ ೧. ಮಂಗನ ಕಾಯಿಲೆಗೆ ಈಗ ಉಳಿದಿರುವುದು ಆಸ್ಪತ್ರೆಗೆ ಸೇರುವುದೊಂದೇ ಆಗಿದೆ. ಕಾಡಿನಲ್ಲಿರುವವರು ಮುನ್ನೆಚ್ಚರಿಕೆಯಿಂದ ಇರಬೇಕು, ಜ್ವರ ಬಂದರೆ ಆಸ್ಪತ್ರೆಗೆ ಸೇರಬೇಕು. ಹೊನ್ನಾವರದ ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ ಕಳಿಸಲಾಗಿದೆ. ಸರ್ಕಾರ ಉಚಿತವಾಗಿ ಉನ್ನತ ಚಿಕಿತ್ಸೆಗೆ ಮಣಿಪಾಲದಲ್ಲಿ ವ್ಯವಸ್ಥೆ ಮಾಡಿದೆ. ಮಂಗನ ಕಾಯಿಲೆ ಲಕ್ಷಣ ಕಂಡುಬoದವರು ಕೂಡಲೇ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಬೇಕು, ಅಲ್ಲಿ ಚಿಕಿತ್ಸೆ ಸಾಧ್ಯವಿಲ್ಲವಾದರೆ ಮುಂದೆ ಕಳಿಸಿಕೊಡಲಾಗುವುದು. ದೊಡ್ಡ ಮಳೆಗಾಲ ಆರಂಭವಾಗುವವರೆಗೆ ಮಂಗನ ಕಾಯಿಲೆ ಲಕ್ಷಣ ನಿಲ್ಲುವ ಲಕ್ಷಣ ಇಲ್ಲ. ಕಾಡಿನ ಪ್ರದೇಶದಲ್ಲಿರುವವರು ಕಾಳಜಿ ವಹಿಸಬೇಕು ಎಂದು ಮಂಗನ ಕಾಯಿಲೆಯ ಜಿಲ್ಲಾ ಉಸ್ತುವಾರಿ ವೈದ್ಯ ಡಾ. ಸತೀಶ ಶೇಟ್ ಹೇಳಿದ್ದಾರೆ.
More Stories
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.
ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ