September 17, 2024

Bhavana Tv

Its Your Channel

ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೋಂಕಿತನಾದ ಆಟೋ ಚಾಲಕ

42 ವರ್ಷದ ಆಟೋ ಚಾಲಕ ಮೇ 1 ನೇ ತಾರೀಕು ಪಿ659 ಸಂಖ್ಯೆಯ 18ವರ್ಷದ ಸೋಂಕಿತೆಯನ್ನ ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಸೋಂಕಿತೆಯ ಮನೆಯ ಬಳಿಯೇ ಆಟೋ ಚಾಲಕನ ಮನೆಯೂ ಇದ್ದು ಕುಟುಂಬದವರಿಗೆ ಚಿರಪರಿಚಿತನಾಗಿದ್ದ. ಯುವತಿಗೆ ಜ್ವರ ಬಂದ ಹಿನ್ನಲೆಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವಾಪಾಸ್ ಮನೆಗೆ ಬಿಟ್ಟಿದ್ದು ಯುವತಿಗೆ ಮೇ 5 ರಂದು ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಆಕೆಯ ಸಂಪರ್ಕಕ್ಕೆ ಬಂದವರನ್ನ ಗುರುತಿಸುವಾಗ ಆಟೋ ಚಾಲಕನನ್ನ ಸಹ ಗುರುತಿಸಿ ಆತನ ಗಂಟಲು ದ್ರವವನ್ನ ಪರೀಕ್ಷೆಗೆ ಕಳುಹಿಸಲಾಗಿತ್ತು.

ಚಾಲಕನಿಗೂ ಕೊರೋನಾ ವೈರಸ್ ಸೋಂಕು ತಗುಲಿರುವುದು ಧೃಡಪಟ್ಟಿದೆ.

ಇಂದು ಆಟೋ ಚಾಲಕನಿಗೂ ಸೋಂಕು ದೃಢಪಟ್ಟಿದ್ದು, ಆತನ ಪತ್ನಿ ಹಾಗೂ ಮೂವರು ಮಕ್ಕಳನ್ನ ಕ್ವಾರಂಟೈನ್ ಮಾಡಲಾಗಿದೆ. ಚಾಲಕನ ಸಂಪರ್ಕದಲ್ಲಿ ಹಲವರು ಇರುವ ಹಿನ್ನಲೆಯಲ್ಲಿ ಎಲ್ಲರನ್ನ ಗುರುತಿಸುವ ಕಾರ್ಯಕ್ಕೆ ಇದೀಗ ತಾಲೂಕು ಆಡಳಿತ ಮುಂದಾಗಿದೆ. ಜೊತೆಗೆ ಆಟೋ ಚಾಲಕನ ಸಂಪರ್ಕದಲ್ಲಿ ಹಲವರು ಬಂದಿರುವ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ

error: