May 19, 2024

Bhavana Tv

Its Your Channel

ಪೋಟೋಗ್ರಾಫರ್ ಸಂಘದ ವತಿಯಿಂದ ತಹಶೀಲ್ದಾರರಿಗೆ ಮನವಿ.


ಮಂಡ್ಯ: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಠದಲ್ಲಿರುವ ಛಾಯಾಗ್ರಾಹಕರಿಗೆ ಸರ್ಕಾರದ ವತಿಯಿಂದ ಸಹಾಯಧನ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಪಡಿತರ ಕಿಟ್ ವಿತರಿಸುವಂತೆ ಕೃಷ್ಣರಾಜಪೇಟೆ ತಾಲ್ಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ತಹಶೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಒಂದೂವರೆ ತಿಂಗಳಿನಿAದಲೂ ಕೊರೋನಾ ಮಹಾಮಾರಿಯ ಅಟ್ಟಹಾಸದ ಹಿನ್ನೆಲೆಯಲ್ಲಿ ವೃತ್ತಿನಿರತ ಛಾಯಾಗ್ರಾಹಕರು ಹಾಗೂ ಪೋಟೋ ಸ್ಟುಡಿಯೋಗಳ ಮಾಲೀಕರು ಕೆಲಸವಿಲ್ಲದೇ ಸ್ಟುಡಿಯೋಗಳಿಗೆ ಬೀಗಜಡಿದು ತಮ್ಮ ತಮ್ಮ ಮನೆಗಳಲ್ಲಿಯೇ ಇದ್ದಾರೆ. ಮನೆ ಹಾಗೂ ಅಂಗಡಿಗಳ ಬಾಡಿಗೆಯನ್ನು ಕಟ್ಟಿಕೊಂಡು ಜೀವನ ನಡೆಸಲಾಗದೇ ತೀವ್ರವಾದ ಸಂಕಷ್ಠದಲ್ಲಿರುವ ಫೋಟೋಗ್ರಾಫರ್‌ಗಳಿಗೆ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ಕಾರ್ಮಿಕ ಸಚೀವರು ಆಟೋ, ಟ್ಯಾಕ್ಸಿಗಳ ಚಾಲಕರು ಸೇರಿದಂತೆ ದುಡಿಯುವ ಶ್ರಮಿಕ ವರ್ಗಗಳಿಗೆ ೫ಸಾವಿರ ರೂಗಳ ವಿಶೇಷ ಪ್ಯಾಕೇಜನ್ನು ಘೋಷಿಸಿದಂತೆ ಛಾಯಾಗ್ರಾಹಕರಿಗೆ ಸಹಾಯ ಹಸ್ತವನ್ನು ಚಾಚಿ ಸುಗಮವಾಗಿ ಜೀವನ ನಡೆಸುವಂತೆ ಅನುವು ಅಡಿಕೊಡಬೇಕು ಎಂದು ತಾಲ್ಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಶ್ರೀಕಾಂತ್ ಒತ್ತಾಯಿಸಿ ತಹಶೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳು ಮತ್ತು ಛಾಯಾಗ್ರಾಹಕರಾದ ನಾಗೇಶ್, ಮಂಜುನಾಥ್, ಸೈಯ್ಯದ್ ಖಲೀಲ್, ಗುಂಡಣ್ಣ, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

error: