November 14, 2024

Bhavana Tv

Its Your Channel

ಶರಾವತಿ ಪತ್ತಿನ ಸಂಘದ ವತಿಯಿಂದ ಪಿಗ್ಮಿ ಸಂಗ್ರಹಕಾರರಿಗೆ ದಿನಸಿ ಕಿಟ್ ವಿತರಣೆ.

ಹೊನ್ನಾವರ: ತಾಲೂಕಿನ ಶರಾವತಿ ಪತ್ತಿನ ಸಮಘದ ಹೊನ್ನಾವರ ಪ್ರಧಾನ ಕಛೇರಿ ಹಾಗೂ ಮಂಕಿ ಶಾಖೆಯಲ್ಲಿ ಪಿಗ್ಮಿ ಸಂಗ್ರಾಹಕರಾಗಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಸೋಮವಾರ ದಿನಸಿ ಕಿಟ್ ವಿತರಿಸಲಾಯಿತು. ಕರೋನಾ ಸಂಕಷ್ಟ ಸಮಯದಲ್ಲಿ ದೇಶದ್ಯಂತ ಸುರಕ್ಷತಾ ದೃಷ್ಟಿಯಿಂದ ಲಾಕ್ ಡೌನ್ ಹಿನ್ನಲೆಯಲ್ಲಿ ಅಂಗಡಿ ಸೇರಿದಂತೆ, ಮನೆಗಳಿಗೆ ತೆರಳಿ ಪಿಗ್ಮಿ ಸಂಗ್ರಹಣೆ ಮಾಡುವುದು ಕಷ್ಟ ಸಾಧ್ಯವಾದರಿಂದ ಇದನ್ನೆ ನಂಬಿ ಜೀವನ ಸಾಗಿಸುತ್ತಿರುವವರಿಗೆ ನೆರವಾಗುವ ದೃಷ್ಟಿಯಿಂದ ಪತ್ತಿನ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಪಿಗ್ಮಿ ಸಂಗ್ರಹಕಾರಕರಿಗೂ ದಿನಸಿ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶರಾವತಿ ಪತ್ತಿನ ಸಂಘದ ಅಧ್ಯಕ್ಷ ರಾಜು ನಾಯ್ಕ ಮಂಕಿ ಉಪಾಧ್ಯಕ್ಷ ರಾಜೇಶ ಸಾಲೆಹಿತ್ತಲ್ ಬ್ರಾಂಚ್ ಮ್ಯಾನೇಜರ್ ಯೋಗೀಶ ನಾಯ್ಕ, ನಿರ್ದೆಶಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

error: