March 27, 2025

Bhavana Tv

Its Your Channel

ಟೇಲರ್ ಅಂಗಡಿ ಇಟ್ಟು ಜೀವನ ನಡೆಸುವರಿಗೆ ಸರ್ಕಾರದಿಂದ ನೆರವು ಒದಗಿಸುವಂತೆ ತಹಶೀಲ್ದಾರ ಮೂಲಕ ಮನವಿ.

ಹೊನ್ನಾವರ; ಕರೋನಾ ಮಹಾಮಾರಿಯ ಸಂರಕ್ಷಣೆಗಾಗಿ ದೇಶಾದ್ಯಂತ ಲಾಕ್ ಡೌನ್ ಘೋಷಣೆ ಆದ ಬಳಿಕ ಟೇಲರಿಂಗ್ ವೃತ್ತಿ ನಂಬಿ ಬದುಕುವ ತಾಲೂಕಿನ ನೂರಕ್ಕೂ ಅಧಿಕ ಟೇಲರಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ವಿವಾಹ, ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯದೇ ಇರುವುದರಿಂದ ನಮ್ಮ ವೃತ್ತಿಗೂ ಹಿನ್ನಡೆ ಎದುರಾಗಿದ್ದು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದೇವೆ. ಸರ್ಕಾರ ಹಲವು ಕಾರ್ಮಿಕರನ್ನು ಗುರುತಿಸಿ ಸಹಾಯ ನೀಡಲು ಮುಂದಾಗಿದ್ದು ಅಸಂಘಟಿತ ಕಾರ್ಮಿಕರಾದ ನಮ್ಮನ್ನು ಗುರುತಿಸಿ ಆರ್ಥಿಕವಾಗಿ ನೆರವು ನೀಡಬೇಕು ಎಂದು ತಾಲೂಕ ಟೇರ‍್ಸ ಅಶೋಸಿಯೇಶನ್ ವತಿಯಿಂದ ತಹಶೀಲ್ಧಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ತಹಶೀಲ್ದಾರ ವಿವೇಕ ಶೇಣ್ವಿ ಮನವಿ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಟೇಲರ್ ಅಶೋಸಿಯೇಶನ್ ತಾಲೂಕ ಅಧ್ಯಕ್ಷರಾದ ಇಂತ್ರು ಬಡ್ತೂಲ್ ರೊಡ್ರಿಗೀಸ್ ಸದಸ್ಯರಾದ ರಮೇಶ ಕರ್ಕಿಕರ್, ಚಂದ್ರಶೇಖರ ನಾಯ್ಕ, ಮಹಮ್ಮದ್ ಸಾದಿಕ್, ಮಾದೇವ ನಾಯ್ಕ, ಶೈಲಾ ಗೌಡ, ಲೀನಾ ಲೋಫಿಸ್, ಈರಪ್ಪ ನಾಯ್ಕ, ದಯಾನಂದ ದೇಶಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.


error: