
ಕುಮಟಾ : ತರಾತುರಿಯಲ್ಲಿ ಕಾಮಗಾರಿ 75% ಪೂರ್ಣವಾಗಿದೆ ಎಂದು ದಾಖಲಿಸಲು ಹೋಗಿ ಐ. ಆರ್. ಬಿಯ ಕಾಮಗಾರಿಯಿಂದ ಸಾಮಾನ್ಯ ಜನರು ಪ್ರಾಣ ಕಳೆದುಕೊಳ್ಳುವಂತೆ ಆಗಿದೆ.
ಹೌದು ಅವೈಜ್ಞಾನಿಕವಾಗಿ ರಸ್ತೆ ಪಕ್ಕದಲ್ಲಿ ಹೊಂಡ ತೋಡಿ, ರಾತ್ರಿ ಅದಕ್ಕೆ ಒಂದು ಸರಿಯಾದ ಭದ್ರತೆಯು ಒದಗಿಸದೆ ಹೋದ IRB ಯ ಸೋಗಲಾಡಿ ಅಧಿಕಾರಿಗಳ ವರ್ತನೆಗೆ, ಹಳದೀಪುರದ ಬಡ್ನಿಕೇರಿಯ ಲಕ್ಷ್ಮಿ ಕಣಿಯ ಮುಕ್ರಿ ಅನ್ನುವ ಸುಮಾರು 35 ವರ್ಷ ಪ್ರಾಯದ ಹೆಂಗಸು ಶನಿವಾರದಂದು ರಾತ್ರಿ 8 ರ ಸಮಯಕ್ಕೆ ಆ ಹೊಂಡಲ್ಲಿ ಬಿದ್ದು ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿದ್ದರು.
ಅವರು ಇಂದು ಬೆಳಿಗ್ಗೆ ಕೊನೆ ಉಸಿರು ಎಳೆದಿದ್ದಾರೆ ಎಂದು ವರದಿಯಾಗಿದೆ.
ಐ ಆರ್ ಬಿ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಶಾಹಿ ಧೋರಣೆ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
More Stories
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಭಟ್ಕಳದ ದಿ ನ್ಯೂ ಇಂಗ್ಲೀಷ ಪಿ ಯು ಕಾಲೇಜು ಶೇಕಡಾ 99.25% ಫಲಿತಾಂಶವನ್ನು ದಾಖಲಿಸಿದೆ.
ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ದಿನಕರ ಶೆಟ್ಟಿ ನಾಮಪತ್ರ ಸಲ್ಲಿಕೆ.
ದಾಖಲೆಯಿಲ್ಲದೆ ಸಾಗಿಸುತಿದ್ದ 51.20 ಲಕ್ಷ ನಗದು ವಶ