May 5, 2024

Bhavana Tv

Its Your Channel

ಆಶಾ ಸುರಕ್ಷತೆ ದಿನದಂದೆ ಆಶಾ ಕಾರ್ಯಕರ್ತೆಯರಿಂದ ರಕ್ಷಣೆ ಜೊತೆ ಜ್ವಲಂತ ಸಮಸ್ಯೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ಮನವಿ.

ಹೊನ್ನಾವರ; ತಾಲೂಕಿನಲ್ಲಿ ಕರೋನಾ ವಿರುದ್ದ ಹಗಲಿರುಳು ಎನ್ನದೆ ಸಾರ್ವಜನಿಕ ಸೇವೆಗಾಗಿ ಪಣತೊಟ್ಟ ಆಶಾ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಶುಕ್ರವಾರ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚೀವರಿಗೆ ವಿವಿಧ ಭಾಗದಿಂದ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.
ಎಲ್ಲಡೆ ಕರೋನಾ ಮಹಾಮಾರಿಯು ಆರ್ಭಟದ ಮಧ್ಯೆ ರಾಜ್ಯದೆಲ್ಲಡೆಯಂತೆ ತಾಲೂಕಿನಲ್ಲಿಯೂ ೨ ತಿಂಗಳಿನಿoದಲೂ ಪ್ರಂಟ್ ಲೈನ್ ವಾರಿರ‍್ಸ ಆಗಿ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರು ಹಲವು ಸಮಸ್ಯೆಗಳ ಮಧ್ಯೆ ಜೀವನ ನಡೆಸುತ್ತಿದ್ದರು. ಮೇ ೨೯ರ ಆಶಾ ಸಂರಕ್ಷಣಾ ದಿನದಂದು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕರೆಯ ಮೇರೆಗೆ ಪ್ರಮುಖ ಸಮಸ್ಯೆ ಈಡೇರಿಕೆ ಜೊತೆ ಕರೋನಾ ಮುನ್ನೆಚ್ಚರಿಕೆಗಾಗಿ ವಿವಿಧ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಮನವಿಸಲ್ಲಿಸುವ ಮೂಲಕ ಪ್ರತಿಭಟನೆಗೆ ಕರೆ ನೀಡಲಾಗಿತ್ತು.
ಅದೇ ರೀತಿ ತಾಲೂಕಿನ ಎಲ್ಲಾ ಪ್ರಾಥಮಿಕ ಆರೊಗ್ಯ ಕೇಂದ್ರಗಳಲ್ಲಿಯೂ ಆಶಾ ಕಾರ್ಯಕರ್ತೆಯರು ಮನವಿ ಸಲ್ಲಿಸಿದರು. ಕರೋನಾ ಸಂದರ್ಭದಲ್ಲಿ ಮಾಹಿತಿ ಕಲೆ ಹಾಕುವ ಜೊತೆ ಜಾಗೃತಿ ಮೂಡಿಸಲು ಮನೆಗೆ ತೆರಳಿದಾಗ ಅವಾಚ್ಯ ಶಬ್ದದಿಂದ ನಿಂದನೆ ಜೊತೆ ದೈಹಿಕವಾಗಿ ಹಲ್ಲೆಗೆ ಒಳಗಾಗುತ್ತಿರುದರಿಂದ ಸೂಕ್ತ ರೀತಿಯಲ್ಲಿ ರಕ್ಷಣೆ ನೀಡಬೇಕು. ಕೋವಿಡ್ ೧೯ ನಿಯೋಜನೆಯಲ್ಲಿರುವ ಆಶಾ ಕಾರ್ಯಕರ್ತೆಯರಿಗೆ ವಿಶೇಷ್ ಪ್ಯಾಕೇಜ್ ಜೊತೆ ಮಾಸಿಕ ೧೦ ಸಾವಿರ ನೀಡುವ ಮೂಲಕ ಆರ್ಥಿಕವಾಗಿ ನೆರವಾಗಬೇಕು. ಮಾಸ್ಕ, ಸೈನಿಟೈಜರ್ ಮತ್ತು ಗ್ಲೋಸ್ ನೀಡುವ ಮೂಲಕ ಆರೊಗ್ಯ ಸುರಕ್ಷತೆ ಬಗ್ಗೆ ಗಮನಹರಿಸಬೇಕು. ಪಾನಮತ್ತರಾಗಿ ಹಲ್ಲೆ ಮಾಡಿದವರಿಗೆ ತಕ್ಕ ಶಿಕ್ಷೆ ನೀಡುವ ಜೊತೆ ರಾಜ್ಯದಲ್ಲಿ ಮಧ್ಯ ಮಾರಾಟ ನೀಷೇದ ಮಾಡಬೇಕು. ಕೊವಿಡ್ ೧೯ ಕತ್ಯರ್ವದ ಮಧ್ಯೆ ಸಾವನಪ್ಪಿದ್ದ ಆಶಾ ಕಾರ್ಯಕರ್ತೆಯರಿಗೆ ೫೦ ಲಕ್ಷ ವಿಮಾ ಸೌಲಭ್ಯ ಒದಗಿಸಬೇಕು ಎಂದು ಮನವಿ ಮಾಡಿದರು.
ತಾಲೂಕಿನ ೯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೂ ಈ ಬಗ್ಗೆ ಮನವಿ ನೀಡಿದ್ದು ಈ ಸಂದರ್ಬಧದಲ್ಲಿ ಪ್ರಾಥಮಿಕ ಆರೊಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಮೂಲಕ ಸಲ್ಲಿಕೆಯಾದರೆ, ಪಟ್ಟಣ ವ್ಯಾಪ್ತಿಯವರು ತಾಲೂಕ ಆಡಳಿತ ವೈದ್ಯಾಧಿಕಾರಿಗಳ ಬಳಿ ಮನವಿ ಸಲ್ಲಿಸಿದರು.

error: