May 18, 2024

Bhavana Tv

Its Your Channel

ಬಜೆಟ್ ಪ್ರಕಟಿಸಿದ ಉ.ಕ ಜಿಲ್ಲಾ ಪಂಚಾಯತ ಅಧ್ಯಕ್ಷೆ ಜಯಶ್ರೀ ಮೊಗೇರ

ಕಾರವಾರ: ಉತ್ತರ ಕನ್ನಡ ಜಿಲ್ಲಾ ಪಂಚಾಯತಿಯ ೨೦೨೦- ೨೧ನೇ ಸಾಲಿನ ೧೦೩೬ ಕೋಟಿಯ ಬಜೆಟ್ ಅನ್ನು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜಯಶ್ರೀ ಮೊಗೇರ ಅವರು ಶುಕ್ರವಾರ ಪ್ರಕಟಿಸಿದರು.

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ವಿಶೇಷ ಸಾಮಾನ್ಯ ಸಭೆಯಲ್ಲಿ ಬಜೆಟ್ ನ ಕಿರು ಪರಿಚಯ ಮಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿ ಪ್ರಕಾರ ೨೦೨೦- ೨೧ನೇ ಸಾಲಿನ ಕರಡು ಯೋಜನೆಯನ್ನು ಸರ್ಕಾರದ ಅನುಮೋದನೆಗೆ ಸಲ್ಲಿಸಿದ್ದು, ಈಗಾಗಲೇ ಸರ್ಕಾರ ಈ ಬಗ್ಗೆ ಅಂತಿಮ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

ಅದರಂತೆ ಜಿಲ್ಲಾ ಪಂಚಾಯತಿ ಕಾರ್ಯಕ್ರಮಗಳ ವಿವಿಧ ಲೆಕ್ಕ ಶೀರ್ಷಿಕೆಯಡಿ ೩೧೫೪೪.೦೧ ಲಕ್ಷ ರೂ., ತಾಲೂಕು ಪಂಚಾಯತಿ ಕಾರ್ಯಕ್ರಮದ ವಿವಿಧ ಲೆಕ್ಕ ಶೀರ್ಷಿಕೆಯಡಿ ೭೨೦೩೧.೨೦ ಲಕ್ಷ ಹಾಗೂ ಗ್ರಾಮ ಪಂಚಾಯತಿ ಕಾರ್ಯಕ್ರಮಗಳಿಗೆ ೬೬ ಲಕ್ಷ ಅನುದಾನವನ್ನು ಒದಗಿಸಿದೆ ಎಂದು ಪ್ರಕಟಿಸಿದರು.

ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಅಧೀನ ಇಲಾಖೆಗಳ ಅಧಿಕಾರಿ ಮತ್ತು ನೌಕರರ ವೇತನಾಂಶಕ್ಕೆ ಜಿಲ್ಲಾ ವಲಯ ಲೆಕ್ಕ ಶೀರ್ಷಿಕೆಗಳಡಿ ೧೦೧೧೭.೯೩ ಲಕ್ಷ ರೂ., ಹೊರಮೂಲ ಸಿಬ್ಬಂದಿಗಳ ವೇತನಕ್ಕಾಗಿ ೮೦೮.೨೮ ಲಕ್ಷ, ದಿನಗೂಲಿ ನೌಕರರ ವೇತನಕ್ಕೆ ೭೭.೦೪ ಲಕ್ಷ ರೂ. ಮತ್ತು ಕಛೇರಿ ವೆಚ್ಚ ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗಾಗಿ ೨೦೫೪೦.೭೬ ಲಕ್ಷ ರೂ. ನಿಗದಿಪಡಿಸಲಾಗಿದೆ ಎಂದು ವಿವರಿಸಿದರು.

೨೦೨೦-೨೧ ನೇ ಸಾಲಿಗೆ ಸಂಬoಧಿಸಿದoತೆ ಶಿಕ್ಷಣ, ಗ್ರಾಮೀಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವಿಶೇಷ ಘಟಕ ಯೋಜನೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಪಶುಸಂಗೋಪನೆ ಮತ್ತು ಪಶುವೈದ್ಯ ಇಲಾಖೆ, ವಯಸ್ಕರ ಶಿಕ್ಷಣ, ಕ್ರೀಡೆ ಮತ್ತು ಯುವಜನ ಸೇವೆ, ಗ್ರಾಮೀಣ ನೀರು ಪೂರೈಕೆ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೌಷ್ಟಿಕ ಆಹಾರ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಸಾಮಾಜಿಕ ಅರಣ್ಯ, ಸಹಕಾರ, ಪ್ರದೇಶಾಭಿವೃದ್ಧಿ ಮತ್ತು ಇತರೆ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು, ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅನುದಾನ, ಸಣ್ಣ ನೀರಾವರಿ, ಗ್ರಾಮೋದ್ಯಮ ಮತ್ತು ಸಣ್ಣ ಉದ್ಯಮಗಳು, ರೇಷ್ಮೆ ಇಲಾಖೆ, ಸಚಿವಾಲಯ ಆರ್ಥಿಕ ಸೇವೆಗಳು, ಜಿಲ್ಲಾ ಯೋಜನಾ ಘಟಕ, ಕೈಮಗ್ಗ ಮತ್ತು ಜವಳಿ, ವಿಜ್ಞಾನ ಮತ್ತು ತಂತ್ರಜ್ಞಾನ, ನಾಗರಿಕರ ಕಲ್ಯಾಣ ಮತ್ತು ಇತರೆ ವಲಯಗಳಲ್ಲಿ ೨೦೨೦- ೨೧ನೇ ಸಾಲಿಗೆ ೨೦೧೯- ೨೦ನೇ ಸಾಲಿನಲ್ಲಿ ಒದಗಿಸಿದ ಅನುದಾನಕ್ಕಿಂತ ೧೭೬೯.೫೩ ಲಕ್ಷ ಹೆಚ್ಚಿಗೆ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ತಾಲೂಕು ಪಂಚಾಯತಗಳು ಮತ್ತು ಅವುಗಳ ಅಧೀನ ಇಲಾಖೆಗಳ ಅಧಿಕಾರಿ/ ಸಿಬ್ಬಂದಿ ವೇತನಾಂಶಕ್ಕೆ ೫೯೬೪೫.೨೦ ಲಕ್ಷ, ಹೊರ ಮೂಲ ಸಿಬ್ಬಂದಿಗಳ ವೆಚ್ಚಕ್ಕಾಗಿ ೧೪೨.೯೨ ಲಕ್ಷ ಮತ್ತು ಕಛೇರಿ ವೆಚ್ಚ ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗಾಗಿ ೧೨೮೪೩.೦೮ ಲಕ್ಷ ನಿಗದಿಪಡಿಸಲಾಗಿದೆ. ತಾಲೂಕು ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಅಡಿಯಲ್ಲಿ ಬರುವ ವಿವಿಧ ಇಲಾಖೆಗಳಿಗೆ ೨೦೨೦- ೨೧ನೇ ಸಾಲಿಗೆ ೨೦೧೯- ೨೦ನೇ ಸಾಲಿನಲ್ಲಿ ಒದಗಿಸಿದ ಅನುದಾನಕ್ಕಿಂತ ೬೪೭೫.೪೨ ಲಕ್ಷ ಹೆಚ್ಚಿಗೆ ಅನುದಾನ ಒದಗಿಸಲಾಗಿದೆ ಎಂದು ಹೇಳಿದರು.

೨೦೨೦- ೨೧ ನೇ ಸಾಲಿಗೆ ವಿವಿಧ ಲೆಕ್ಕ ಶೀರ್ಷಿಕೆ ಅಡಿಯಲ್ಲಿ ವಿವಿಧ ಇಲಾಖೆಗಳು, ತಾಲೂಕಿನ ಪಂಚಾಯತಿಗಳು ಹಾಗೂ ಗ್ರಾಮ ಪಂಚಾಯತಿಗಳು ಒದಗಿಸಿರುವ ಅನುದಾನದ ವಿವರಗಳನ್ನು ಹಾಗೂ ೨೦೨೦- ೨೧ನೇ ಸಾಲಿನ ಬಜೆಟ್ ಪತ್ರಕ್ಕೆ ಜಿಲ್ಲಾ ಪಂಚಾಯತಿಯ ಎಲ್ಲಾ ಸದಸ್ಯರು ಅನುಮೋದನೆ ನೀಡಿದರು.

error: