May 12, 2024

Bhavana Tv

Its Your Channel

ಮೇ ತಿಂಗಳ ೩೧ನೇ ದಿನದಂದು ಮೀನುಗಾರಿಕೆ ಕೊನೆಗೊಳಿಸಲು ಎಲ್ಲಾ ಬೋಟ ಮಾಲಕರ ನಿರ್ಧಾರ

ಭಟ್ಕಳ:- ಮಾರ್ಚ೨೩ ರಿಂದ ಕರೋನಾ ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕಾಗಿ ಭಟ್ಕಳ ತಾಲೂಕು ಸಂಪೂರ್ಣ ಲಾಕಡೌನ್ ಆದ ಕಾರಣ, ನಮಗೆ ಮೀನುಗಾರಿಕೆ ಮಾಡಲು ಸಾಧ್ಯವಾಗಿರುವುದಿಲ್ಲ. ಈಗ ನಮ್ಮ ಬೋಟಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಲ್ಲಾ ಕೆಲಸಗಾರರು ತಮ್ಮ ತಮ್ಮ ರಾಜ್ಯಗಳಿಗೆ ಹಿಂತಿರುಗಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಆದೇಶ ಮಾಡಿದ್ದು ಈ ಆದೇಶದಿಂದ ನಮಗೆ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದು ಮೀನುಗಾರರ ಮುಖಂಡರಾದ ವಸಂತ ಖಾರ್ವಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದರು.

ಕೃಷಿ ಸಚಿವಾಲಯ ನವದೆಹಲಿ ಇವರ ಆದೇಶದ ದಿನಾಂಕ ೨೫-೫-೨೦೨೦ ರ ಅನ್ವಯ ಈ ಮೀನುಗಾರಿಕೆ ಅವಧಿಯನ್ನು ಜೂನ್೧೪ ರವರೆಗೆ ಮುಂದುವರೆಸಿದ್ದು. ಪಶ್ಚಿಮ ಕರಾವಳಿಯಲ್ಲಿ ಜೂನ್ ೧೫ ರಿಂದ ಜುಲೈ ೩೦ ರವರೆಗೆ ೪೭ ದಿನಗಳ ಮೀನುಗಾರಿಕೆ ನಿಷೇಧದ ಅವಧಿ ಎಂದು ಘೋಷಣೆ ಮಾಡಿರುತ್ತಾರೆ. ಆದರೆ ಈ ಹಿಂದಿನ ವರ್ಷಗಳಲ್ಲಿ ಮೀನುಗಾರಿಕೆಗೆ ನಿಷೇಧ ದಿನ ಜೂನ್ ೧ ರಿಂದ ಜುಲೈ ೩೦ ರವರೆಗೆ ಒಟ್ಟು ೬೦ ದಿನಗಳು ಇತ್ತು. ಪ್ರಸಕ್ತ ಮೀನುಗಾರಿಕೆ ಋತುವಿನಲ್ಲಿ ಕರಾವಳಿಯಲ್ಲಿ ಕಳೆದ ಜೂನ್ ತಿಂಗಳಿನಿAದ ಅಕ್ಟೋಬರ್ ತಿಂಗಳನರೆಗೂ ಹವಾಮಾನ ವೈಪರೀತ್ಯದ ಕಾರಣ ಮಳೆ ಮುಂದುವರೆದಿತ್ತು.ಆದ್ದರಿAದ ಮೀನುಗಾರಿಕ್ಕೆ ಸರಿಯಾಗಿ ಮಾಡಲು ಆಗಿರುವುದಿಲ್ಲ. ಈ ಸಮಯದಲ್ಲಿ ಯಾಂತ್ರೀಕೃತ ಮೀನುಗಾರಿಕೆ ಬೋಟಗಳು ಮೀನುಗಾರಿಕೆಗಾಗಿ ಸಮುದ್ರಕ್ಕೆ ಹೋದದ್ದೇ ಕಡಿಮೆ.
ನಂತರ ನವೆಂಬರ್ ತಿಂಗಳಿAದ ಹತ್ತಿರದ ಗೋವಾ ಹಾಗೂ ಕೇರಳ ರಾಜ್ಯ ಮೀನುಗಾರಿಕೆ ಲೈಟ್ ಫಿಶಿಂಗ್ ಮಾಡಲು ಶುರು ಮಾಡುವುದರಿಂದ ಕರ್ನಾಟಕದಲ್ಲಿ ಲೈಟ್ ಫಿಶಿಂಗ್ ಮಾಡಲು ಅವಕಾಶ ನೀಡಿದೇ ಇದ್ದ ಕಾರಣ ನಮಗೆ ಮೀನು ಹಿಡುವಳಿ ಇಲ್ಲದೇ ಎಲ್ಲಾ ಮಾಲೀಕರಿ ನಷ್ಟ ಅನುಭವಿಸುಂತಾಯಿತು.
ಈ ಹಿಂದಿನAತೆ ಮೇ ತಿಂಗಳ ೩೧ನೇ ದಿನದಂದು ಕೊನೆಗೊಳಿಸಲು ನಾವು ಎಲ್ಲಾ ಬೋಟ ಮಾಲಕರು ಸೇರಿ ನಿರ್ಧರಿಸಿದ್ದೆವೆ ಹಾಗೂ ಮೀನುಗಾರಿಕೆ ನಿಷೇದಿತ ಅವಧಿಯನ್ನು ಈ ಹಿಂದಿನAತೆ ಜೂನ್ ತಿಂಗಳ೧ರಿAದ ಜುಲೈ ತಿಂಗಳ ೩೦ರವರೆಗೆ(ಒಟ್ಟು೬೦ ದಿನಗಳು) ಇರುವಂತೆ ಮಾಡಬೇಕು ಎಂದು ಹೇಳಿದರು.

error: