April 26, 2024

Bhavana Tv

Its Your Channel

ಕೃಷ್ಣ ನಗರಿಯಲ್ಲಿ ಮುಂದುವರೆದ ಕರೋನಾ ಶಾಕ್ : ಒಂದೇ ದಿನ ೭೩ ಸೊಂಕಿತರು ಒಟ್ಟು ೨೬೦ ಸೊಂಕಿತರು.

ಉಡುಪಿ: ಜಿಲ್ಲೆಯಲ್ಲಿ ಇಂದು ಮತ್ತೆ ದೊಡ್ಡ ಪ್ರಮಾಣದಲ್ಲಿ ಹೊಸ ಸೋಂಕಿತರು ಪತ್ತೆಯಾಗಿದೆ. ಇಂದು ದಾಖಲೆಯ ೭೩ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು. ಜಿಲ್ಲೆಯ ಒಟ್ಟು ಕೋವಿಡ್-೧೯ ಸೋಂಕಿತರ ಸಂಖ್ಯೆ೨೬೦ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ ೭೩ ಪ್ರಕರಣಗಳ ಪೈಕಿ ೩೮ ಪ್ರಕರಣಗಳು ಸಂಪರ್ಕ ಪತ್ತೆಯಾಗಿಲ್ಲ. ಇವರು ಅನ್ಯರಾಜ್ಯದಿಂದ ಬಂದವರಲ್ಲ. ಇವರಿಗೆ ಸೊಂಕು ಹೇಗೆ ತಗುಲಿದೆ ಎನ್ನುವುದು ಮಾಹಿತಿ ಇಲ್ಲ. ಶಂಕರನಾರಯಣ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಓರ್ವರಿಗೆ ಕೋವಿಡ್-೧೯ ಸೋಂಕು ಇರುವುದು ದೃಢವಾಗಿದೆ. ಈ ಹಿನ್ನಲೆಯಲ್ಲಿ ಅವರು ವಾಸಿಸುತ್ತಿದ್ದ ಕೋಟತಟ್ಟು ಗ್ರಾಮ ಪಂಚಾಯತ್ ಕಚೇರಿ ಸಮೀಪದ ಮನೆಯ ೧೦೦ ಮೀಟರ್ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಈ ಮೊದಲು ಸೋಂಕು ದೃಢವಾಗಿದ್ದ ನಾಲ್ವರು ಪೊಲೀಸ್ ಸಿಬ್ಬಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

error: