May 5, 2024

Bhavana Tv

Its Your Channel

ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡ “ಅಹೋ ರಾತ್ರಿ ಭಜನಾ ಕಾರ್ಯಕ್ರಮ.

ಭಟ್ಕಳ:ತಾಲ್ಲೂಕಿನ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಕಡವಿನಕಟ್ಟಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೋಮವಾರ ಭಕ್ತರ ಹರ್ಷೊಧ್ಘಾರಗಳ ನಡುವೆ ಶೃದ್ಧಾ ಭಕ್ತಿಯಿಂದ ವರ್ಷಂಪ್ರತಿ ನಡೆಯುವ ಕಾರ್ತಿಕ ಮಾಸದ ದೀಪೋತ್ಸವ ಹಾಗೂ “ಅಹೋ ರಾತ್ರಿ ಭಜನಾ ಕಾರ್ಯಕ್ರಮ”ನಡೆಯಿತು.ಕಾರ್ಯಕ್ರಮವನ್ನು ಮುಂಜಾನೆ 6:45 ಕ್ಕೆ ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಅಹೋ ರಾತ್ರಿ ಭಜನಾ ಕಾರ್ಯಕ್ರಮಗಳನ್ನು ದೀಪ ಬೆಳಗಿಸಿ ಜಾಲನೆ ನೀಡಿದರು.ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಕಾರ್ತಿಕ ಕೃಷ್ಣ ಅಮವಾಸ್ಯೆಯಂದು ಭಜನಾ ಕಾರ್ಯಕ್ರಮವನ್ನುಶ್ರೀ ಜಗನ್ಮಾತಾ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಕಡವಿನಕಟ್ಟಾ ಇವರ ಮುಂದಾಳತ್ವದಲ್ಲಿ ಆರಂಭಿಸಿದರು. ಹೊವಿನಿಂದ ಅಲಂಕೃತಗೊಂಡ ಶ್ರೀ ದುರ್ಗಾಪರಮೇಶ್ವರಿ‌ ದೇವಿಯನ್ನು ಬೆಳ್ಳಿ,ಮತ್ತು ಬಂಗಾರದ ಒಡವೆ ಗಳಿಂದ ಅಲಂಕರಿಸಿದ್ದರು. ಮಧ್ಯಾಹ್ನ ಮಹಾಪೂಜೆ ನಂತರ ಬಂದಿದ್ದ ಭಕ್ತರಿಗೆ ಪ್ರಸಾದ ಭೋಜನ ನಡೆಯಿತು.ನಂತರ ರಾತ್ರಿ ದೇವಸ್ಥಾನ ಒಳಗಡೆ,ಹಾಗೂ ಆವರಣದ ಸುತ್ತಮುತ್ತಲಿನಲ್ಲಿ ಬಂದಂತ ಎಲ್ಲಾ ಭಕ್ತಾದಿಗಳು ದೀಪವನ್ನು ಬೆಳಗಿಸಿದರು.ದೇವಸ್ಥಾನವನ್ನು ಸಂಪೂರ್ಣ ವಿದ್ಯುತ್ ಅಲಂಕಾರದಿಂದ ಕೊಡಿ ದವು- ಹೊರ ಒಳಭಾಗಗಳಲ್ಲಿ ಕಣ್ಣು ಕೂರೈಸುವಂತೆ ದೀಪಾಲಂಕಾರ ಮಾಡಲಾಗಿದವು.

ರಾತ್ರಿ ಯಿಂದ ಮುಂಜಾನೆ ತನಕ ಭಜನಾ ಕಾರ್ಯಕ್ರಮದಲ್ಲಿ ಭಾಗಿಯಾದ ತಂಡ ಗಳಾದ ಶ್ರೀ ವೀರಜಟ್ಕ ಭಜನಾ ಮಂಡಳಿ ತೆಂಗಿನಗುಂಡಿ,ದುರ್ಗಾಪರಮೇಶ್ವರಿ ಭಜನಾ ಮಂಡಳಿ ಮಹಿಳಾ ತಂಡ ಅಳ್ವೇಕೋಡಿ,ಶ್ರೀ ಈಶ್ವರ ಹಕ್ರೆ ಭಜನಾ ಮಂಡಳಿ,ಶ್ರೀ ವೀರಜಟ್ಕ ಭಜನಾ ಮಂಡಳಿ ಮಹಿಳಾ ತಂಡ ತೆಂಗಿನಗುಂಡಿ,ಬೆಳ್ನಿ,ಭಜನಾ ಮಂಡಳಿ ಬಂದರ,
ಶ್ರೀ ಸೀತಾರಾಮ ಭಜನಾ ಮಂಡಳಿ ಕರಿಕಲ್ ಭಾಗವಹಿಸಿದರು.ಮಂಗಳವಾರ ಮುಂಜಾನೆ 6-45 ಕ್ಕೆ”ಅಹೋ ರಾತ್ರಿ ಭಜನಾ ಕಾರ್ಯಕ್ರಮವನ್ನು ಸಂಪನ್ನಗೊಂಡಿತು.ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯದರ್ಶಿ ಪ್ರಕಾಶ ಭಟ,ದೇವಸ್ಥಾನದ ಆಡಳಿತ ಕಮೀಟಿ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.

error: