May 23, 2024

Bhavana Tv

Its Your Channel

ಕೃಷ್ಣರಾಜಪೇಟೆ ತಾಲ್ಲೂಕಿನ ಹೇಮಗಿರಿಯ ಬಿಜಿಎಸ್ ಪಬ್ಲಿಕ್ ಸ್ಕೂಲ್ ನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ . ದ್ರೋಣ್ ಪ್ರತಾಪ್ ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದರು….

ಕೃಷ್ಣರಾಜಪೇಟೆ ; ಇಂದಿನ ಮಕ್ಕಳೇ ನಾಳಿನ ಭವ್ಯಭಾರತ ದೇಶದ ಸತ್ಪ್ರಜೆಗಳಾದ್ದರಿಂದ ವಿದ್ಯಾರ್ಥಿಗಳು ಬಾಲ್ಯದಿಂದಲೇ ವೈಜ್ಞಾನಿಕ ಮನೋಭಾವನೆ, ಸೃಜನಶೀಲತೆ ಹಾಗೂ ಸಾಧಿಸುವ ಛಲವನ್ನು ಮೈಗೂಡಿಸಿಕೊಂಡು ಮಾದರಿಯಾಗಿ ಮುನ್ನಡೆಯಬೇಕು…ಸಾಧ್ಯವಾದಷ್ಟೂ ಮಟ್ಟಿಗೆ ಮೊಬೈಲ್ ಫೋನನ್ನು ಬಳಸದೇ ಪುಸ್ತಕಗಳು ಹಾಗೂ ಪತ್ರಿಕೆಗಳನ್ನು ಓದುವ ಪ್ರಬಂಧಗಳನ್ನು ಬರೆಯುವ ಹವ್ಯಾಸವನ್ನು ಜೀವನದುದ್ದಕ್ಕೂ ಅಳವಡಿಕೊಂಡು ಪ್ರಗತಿಯ ಪಥದಲ್ಲಿ ಸಾಗಬೇಕು ಎಂದು ಕರೆ ನೀಡಿದ ಪ್ರತಾಪ್ ನನ್ನೆಲ್ಲಾ ಸಾಧನೆಗೆ ನನ್ನ ತಂದೆತಾಯಿಗಳ ಪ್ರೋತ್ಸಾಹ ಹಾಗೂ ಆಶೀರ್ವಾದವೇ ಮುಖ್ಯಕಾರಣವಾಗಿದೆ. ಆದ್ದರಿಂದ ದೇವಾಲಯಗಳಿಗೆ ಹೋಗಿ ದೇವರನ್ನು ಹುಡುಕದೇ ತಂದೆತಾಯಿಗಳನ್ನು ಪೂಜಿಸಿ ಗೌರವಿಸಿ ತಂದೆತಾಯಿಗಳಲ್ಲಿ ದೇವರ ದರ್ಶನ ಮಾಡಬೇಕು ಎಂದು ದ್ರೋಣ್ ಪ್ರತಾಪ್ ಕರೆ ನೀಡಿದರು….
ನನಗಿನ್ನೂ ೨೨ವಯಸ್ಸು, ಆದರೂ ನಾನು ಕಲಿತು ಸಾಧನೆ ಮಾಡಬೇಕಾದದ್ದು ಇನ್ನೂ ಹೆಚ್ಚಿದೆ. ಆದ್ದರಿಂದ ನಾನು ವಿಶ್ವದ ಯುವವಿಜ್ಞಾನಿಗಳ ಪಟ್ಟಿಗೆ ಸೇರಿದ್ದರೂ ವಿದ್ಯಾರ್ಥಿಯಂತೆ ಏನನ್ನಾದರೂ ಕಲಿಯಬೇಕು, ಇನ್ನೂ ಹೆಚ್ಚಿನ ಸಾಧನೆ ಮಾಡಬೇಕೆಂದು ಒಂದಿಲ್ಲೊAದು ಹೊಸ ಹೊಸ ಪ್ರಯೋಗವನ್ನು ಮಾಡುತ್ತಲೇ ಇರುತ್ತೇನೆ. ಆದ್ದರಿಂದ ವಿದ್ಯಾರ್ಥಿಗಳು ಹಾಗೂ ಯುವಜನರು ಸೋಲಿಗೆ ಹೆದರಿ ಪಲಾಯನವಾದವನ್ನು ಅನುಸರಿಸದೇ ಸತತವಾದ ಪ್ರಯತ್ನ ಹಾಗೂ ಅಭ್ಯಾಸದಿಂದ ಸೋಲನ್ನೇ ಗೆಲುವನ್ನಾಗಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಪ್ರತಾಪ್ ಟಿಪ್ಸ್ ನೀಡಿದರು…

ಹೇಮಗಿರಿ ಶಾಖಾ ಮಠದ ವ್ಯವಸ್ಥಾಪಕ ಡಾ.ಜೆ.ಎನ್.ರಾಮಕೃಷ್ಣೇಗೌಡ, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಡಾ.ಕೆ.ಆರ್.ನೀಲಕಂಠ, ಮುಖ್ಯ ಶಿಕ್ಷಕಿ ಪವಿತ್ರ, ಪ್ರಾಂಶುಪಾಲರಾದ ಪ್ರಸಾದೇಗೌಡ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು… ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಯುವವಿಜ್ಞಾನಿ ಪ್ರತಾಪ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು…

ಇದೇ ಸಂದರ್ಭದಲ್ಲಿ ಹೇಮಗಿರಿಯ ಬಿಜಿಎಸ್ ಪಬ್ಲಿಕ್ ಸ್ಕೂಲ್ ವತಿಯಿಂದ ದ್ರೋಣ್ ಪ್ರತಾಪ್ ಅವರನ್ನು ಸಂಸ್ಥೆಯ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಸನ್ಮಾನಿಸಿ ಗೌರವಿಸಿದರು….

error: