March 22, 2023

Bhavana Tv

Its Your Channel

ಹಿಂದೂರಾಷ್ಟ್ರ ಜಾಗೃತಿ ಸಭೆ ಭಟ್ಕಳ ಮುಟ್ಟಳ್ಳಿಯ ಗಣೇಶ ಸಭಾ ಭವನದಲ್ಲಿ

ಭಟ್ಕಳ: ಸನಾತನ ಸಂಸ್ಥೆಯ ವಕ್ತಾರರಾದ ಶರತ್ ಕುಮಾರ್ ಹಿಂದೂ ರಾಷ್ಟ್ರ ಜಾಗ್ರತಿ ಸಭೆಯನ್ನು ಉದ್ದೇಶಿ ಮಾತನಾಡಿ ದೇಶದ ಬಾಹ್ಯ ಶತ್ರುಗಳಿಗೆ ಸಹಾಯ ಮಾಡುವವರು ದೇಶದ ಬಾಹ್ಯ ಶತ್ರುಗಳಿಗೆ ಸಹಾಯ ಮಾಡುವ, ಅವರ ರಕ್ಷಣೆ ಮಾಡುವ ದೇಶದ ಆಂತರಿಕ ಶತ್ರುಗಳ ನಾಶವಾಗದೇ, ಬಾಹ್ಯ ಶತ್ರುಗಳ ಮೇಲೆ ವಿಜಯ ಅಸಾದ್ಯ, ಕಾಶ್ಮೀರದಲ್ಲಿ ಸೈನಿಕರ ಮೇಲೆ ಕಲ್ಲು ತೂರಾಟ ಮಾಡುವವರು ಸೈನಿಕರನ್ನು ಅತ್ಯಾಚಾರಿಗಳು ಎನ್ನುವ ಸಾಹಿತಿಗಳು !ದೇಶ ವಿರೋಧಿ ಘೋಷಣೆ ಕೂಗುವ ದೇಶದ್ರೋಹಿಗಳು !ಭಯೋತ್ಪಾಕರ ರಕ್ಷಣೆಗೆ ನ್ಯಾಯಾಲಯದ ಕದ ತಟ್ಟುವ ತಥಾಕಥಿತ ಜಾತ್ಯಾತೀತವಾದಿಗಳು !ಪಾಕಿಸ್ಥಾನದ ಪರವಾಗಿ ಹೇಳಿಕೆ ನೀಡುವ ರಾಜಕಾರಣಿಗಳು !ದೇಶ ವಿರೋಧಿ ಲೇಖನ ಬರೆಯುವ ಹಿಂದೂ ವಿರೋಧಿ ಮಾದ್ಯಮಗಳಂತಹ ಬಾಹ್ಯ ಶತ್ರುಗಳಿಗೆ ಸಹಾಯ ಮಾಡುವ ಇಂತಹ ಆಂತರಿಕ ಶತ್ರುಗಳ ಮೇಲೆ ಕಠೋರ ಶಿಕ್ಷೆ ನೀಡಿದಾಗಲೇ ಪಾಕ್ ಪ್ರಚೋದಿತ ಭಯೋತ್ಪಾದನೆ ಸರ್ವ ನಾಶವಾಗಲು ಸಾಧ್ಯ.ಇದು ಕೇವಲ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದಿಂದ ಮಾತ್ರ ಸಾದ್ಯ ಎಂದು ಹೇಳಿದರು

ಸಂಸ್ಥೆಯ ವಕ್ತಾರ ಧನ್ಯ ಕುಮಾರ್ ಜೈನ್ ಮಾತನಾಡಿ ನಮ್ಮ ದೇಶ ಅಖಂಡ ದೇಶ ಭರತ ಖಂಡವಾಗಿತ್ತು ಆದರೆ ಈ ಬಾಗ್ಲಾದೇಶ ಪಾಕಿಸ್ತಾನ ಭಾಂಗ್ಲಾದೇಶ ಹೀಗೆ ವಿವಿದ ದೇಶಗಳಾಗಿ ತುಂಡುತುAಡುಗಳಾಗಿ ಪರಿವರ್ತನೆಯಾಯಿತು ತುಂಡಾದ ಎಲ್ಲಾದೇಶಗಳು ಇಸ್ಲಾಂ ದೇಶವಾಯಿತು ಆದರೆ ಭಾರತ ಮಾತ್ರ ಜ್ಯಾತ್ಯಾತೀತ ರಾಷ್ಟ್ರವಾಯಿತು ಇದರ ಪರಿಣಾಮ ನಮ್ಮ ದೇಶದಲ್ಲಿ ನಿಂತು ಪ್ರತಿಭಟನೆಯ ನೇಪದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುವ ಮಟ್ಟಿಗೆ ಬಂದು ನಿಂತಿದೆ ಇದು ತುಂಬ ಖೇದಕರವಾದ ಸಂಗತಿಯಾಗಿದೆ ಎಂದು ಹೇಳೀದರು

ಕಾರ್ಯಕ್ರಮವನ್ನು ಉದ್ದೇಶಿಸಿ ಪುಂಡಲೀಕ್ ಪ್ರಭು ಮಾತನಾಡಿದರು
ಈ ಸಂದರ್ಬದಲ್ಲಿ ಸನಾತನ ಸಂಸ್ಥೆಯ ಮಂಗಲಾ ನಾಯ್ಕ, ಆರತಿ ಮೋಗೇರ್, ದಯಾನಂದ ಪ್ರಭು ,ವೆಂಕಟರಮಣ ನಾಯ್ಕ , ನಾರಾಯಣ ನಾಯ್ಕ, ಶಕುಂತಲಾ ನಾಯ್ಕ, ಮಾಧವ ನಾಯ್ಕ, ಕ್ರಷ್ಣ ನಾಯ್ಕ ,ಕೋಮಲಾ ಮೊಗೇರ್ , ಮುಂತದವರು ಉಪಸ್ಥಿತರಿದ್ದರು.

About Post Author

error: