
ಕೃಷ್ಣರಾಜಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರವಾದ ಹೊಸಹೊಳಲು ಗ್ರಾಮದ ಶ್ರೀ ಲಕ್ಷ್ಮೀನಾರಾಯಣಸ್ವಾಮಿಯವರ ಬ್ರಹ್ಮರಥೋತ್ಸವವು ಸಡಗರ ಸಂಭ್ರಮದಿAದ ಅದ್ದೂರಿಯಾಗಿ ಜರುಗಿತು…
ರಾಜ್ಯದ ಪೌರಾಢಳಿತ, ತೋಟಗಾರಿಕೆ ಹಾಗೂ ರೇಷ್ಮೆ ಖಾತೆಗಳ ಸಚಿವರಾದ ಕ್ಷೇತ್ರದ ಶಾಸಕ ಡಾ.ನಾರಾಯಣಗೌಡ ಮತ್ತು ತಹಶೀಲ್ದಾರ್ ಎಂ.ಶಿವಮೂರ್ತಿ ಉತ್ಸವಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು….
ಉಘೇ ಉಘೇ ಶ್ರೀನಿವಾಸ, ಉಘೇ ವೆಂಕಟರಮಣ, ಉಘೇ ಉಘೇ ಲಕ್ಷ್ಮೀ ನಾರಾಯಣ ಎಂಬ ಜಯಘೋಷಗಳು ಮುಗಿಲು ಮುಟ್ಟಿದ್ದವು…
ನಾಡಿನ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಶ್ರೀರಥದ ಕಳಸಕ್ಕೆ ಹಣ್ಣುಗಳನ್ನು ಎಸೆದು ಸಮರ್ಪಣೆ ಮಾಡಿ ಧನ್ಯತಾ ಮನೋಭಾವನೆಯನ್ನು ಸಮರ್ಪಿಸಿದರು…
ಪುರಸಭೆಯ ಮಾಜಿಅಧ್ಯಕ್ಷ ಹೆಚ್.ಕೆ.ಅಶೋಕ್, ಸದಸ್ಯರಾದ ಹೆಚ್.ಆರ್.ಲೋಕೇಶ್, ಹೆಚ್.ಡಿ.ಅಶೋಕ್, ಕಲ್ಪನಾ, ಕೆ.ಮಂಜುಳಾ, ಹೆಚ್.ಜೆ.ಶ್ರೀನಿವಾಸ್, ಗಂಟೆಗೋಪಾಲ್, ಜಿಲ್ಲಾ ಖಾದಿಬೋರ್ಡಿನ ಮಾಜಿಅಧ್ಯಕ್ಷ ಡಾ.ಶ್ರೀನಿವಾಸಶೆಟ್ಟಿ ಸೇರಿದಂತೆ ಸಾವಿರಾರು ಜನರು ರಥೋತ್ಸವದಲ್ಲಿ ಭಾಗವಹಿಸಿದ್ದರು….
ರಥೋತ್ಸವದ ಅಂಗವಾಗಿ ಹೊಸಹೊಳಲು ಜಾತ್ರೆಗೆ ಆಗಮಿಸಿದ್ದ ಭಕ್ತಾಧಿಗಳು ಹಾಗೂ ಸಾರ್ವಜನಿಕರಿಗೆ ಕುರುಹಿನಶೆಟ್ಟಿ ಸಮಾಜದ ಬಂಧುಗಳು ಪುಳಿಯೊಗರೆ, ಮೊಸರನ್ನ, ಮಜ್ಜಿಗೆ ಪಾನಕ ವಿತರಿಸಿ ಸಂಭ್ರಮಿಸಿದರು… ಸಬ್ ಇನ್ಸ್ಕ್ಟರ್ ಗಳಾದ ಬಿ.ಪಿ.ಬ್ಯಾಟರಾಯಗೌಡ ಮತ್ತು ಲಕ್ಷ್ಮಣ್ ಅವರ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು…..
ವರದಿ…ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ…
More Stories
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.
ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ