October 5, 2024

Bhavana Tv

Its Your Channel

ಕರೋನಾ ಸೊಂಕಿತ ಆಸ್ಪತ್ರೆಯಿಂದ ಬಿಡುಗಡೆ,ವೈದ್ಯರ ಶ್ರಮಕ್ಕೆ ಫಲ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲಾದ ಮೊದಲ ಕೊರೋನಾ ಸೋಂಕಿತ, ಭಟ್ಕಳ ಮೂಲದ ಯುವಕ ಗುಣಮುಖನಾಗಿದ್ದಾನೆ. ಆತನನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಿಂದ ಸೋಮವಾರ ಬಿಡುಗಡೆ ಮಾಡಲಾಯಿತು.

ಭಟ್ಕಳ ಮೂಲದ ೨೨ ವರ್ಷದ ಈ ಯುವಕ, ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಮಾರ್ಚ್ ೧೯ರಂದು ಬಂದಿಳಿದಿದ್ದ. ಈ ವೇಳೆ ಪರೀಕ್ಷಿಸಿದಾಗ ಜ್ವರದ ಲಕ್ಷಣ ಕಂಡುಬAದಿದ್ದರಿAದ ವಿಮಾನ ನಿಲ್ದಾಣದಿಂದ ಈತನನ್ನು ನೇರವಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾರ್ಚ್ ೨೨ರಂದು ಈತನ ಗಂಟಲಿನ ದ್ರವದ ಪ್ರಯೋಗಾಲಯದ ವರದಿಯಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಕೊರೋನಾ ಸೋಂಕು ಪ್ರಕರಣ ದಾಖಲಾದಂತಾಗಿತ್ತು.

ಇದೀಗ ಯುವಕ ಗುಣಮುಖನಾಗಿದ್ದು, ಚಿಕಿತ್ಸೆ ನೀಡಿದ ವೈದ್ಯರು ತಮ್ಮ ಪ್ರಯತ್ನವು ಫಲ ನೀಡಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಯುವಕ ಡಿಸ್ಚಾರ್ಜ್ ಆಗುವುದರೊಂದಿಗೆ, ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೊರೋನಾ ಸೋಂಕಿತರ ಸಂಖ್ಯೆ ೧೧ಕ್ಕೆ ಇಳಿದಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಚಂದ್ರ ಬೈರಿ ಹೇಳಿದ್ದಾರೆ. ಇತರ ಎಲ್ಲ ರೋಗಿಗಳು ಆರೋಗ್ಯವಾಗಿದ್ದು, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ವೆನ್ಲಾಕ್ ಆಸ್ಪತ್ರೆಯಲ್ಲಿ ೨೫ಕ್ಕೂ ಹೆಚ್ಚು ವೈದ್ಯರು ಮತ್ತು ೩೦ಕ್ಕೂ ಹೆಚ್ಚು ದಾದಿಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

error: