April 26, 2024

Bhavana Tv

Its Your Channel

ಹನಿ ಹೀರಲು ಹೋದ ಜ್ಯೋತಿಷಿ ವಿಲವಿಲ – ಮಾಟ ಮಂತ್ರ ತಂತ್ರಗಾರಿಕೆಯ ಚತುರ ವಶೀಕರಣ ಸ್ಪೆಷಲಿಸ್ಟ್ ಅನ್ನು ಬಲೆಗೆ ಕೆಡವಿದ ಮಾಯಾಂಗನೆ – ಮಂಗಳೂರಿನಲ್ಲೊOದು ಹನಿಟ್ರ‍್ಯಾಪ್

ಮಂಗಳೂರು : ಪೌರೋಹಿತ್ಯ ಹಾಗೂ ಜ್ಯೋತಿಷ್ಯ ವೃತ್ತಿ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಪೂಜೆ ಮಾಡಿಸುವ ನೆಪದಲ್ಲಿ ಮನೆಗೆ ಕರೆಸಿ ದಂಪತಿಗಳು ಹನಿಟ್ರ‍್ಯಾಪ್ ಮಾಡಿದ ಪ್ರಕರಣವನ್ನು ಮಂಗಳೂರು ಸಿಸಿಬಿ ಪೊಲೀಸರು ಜ 21 ರಂದು ಭೇದಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾದ ದಂಪತಿಗಳೆAದು ಹೇಳಿಕೊಳ್ಳುತ್ತಿರುವ ಮಹಿಳೆ ಹಾಗೂ ಪುರುಷನನ್ನು ಬಂಧಿಸಿದ್ದಾರೆ
ಚಿಕ್ಕಮಗಳೂರು ಮೂಲದ ಜ್ಯೋತಿಷಿ ಕಂ ಪುರೋಹಿತ ದಂಪತಿಗಳು ರೂಪಿಸಿದ ಹನಿಟ್ರ‍್ಯಾಪ್ ಖೆಡ್ಡಾಕ್ಕೆ ಬಿದ್ದಾತ. ಈತ ಹನಿ ಹೀರಲು ಹೋಗಿ ಬರೋಬ್ಬರಿ 49 ಲ.ರೂ ಕಳಕೊಂಡಿದ್ದಾನೆ.


ಕೊಡಗಿನ ಸೋಮವಾರ ಪೇಟೆ ಮೂಲದ ನಿವಾಸಿ ಭವ್ಯ(30) ಮತ್ತು ಹಾಸನ ಜಿಲ್ಲೆಯ ಅರಕಲಗೂಡು ನಿವಾಸಿ ಕುಮಾರ್ ಅಲಿಯಾಸ್ ರಾಜು(35) ಬಂಧಿತರು. ಆರೋಪಿಗಳಿಬ್ಬರು ಕಳೆದೆರಡು ವರ್ಷಗಳಿಂದ ಜೊತೆಯಾಗಿ ವಾಸಿಸುತ್ತಿದ್ದರು. ಪ್ರಸ್ತುತ ಅವರಿಬ್ಬರು ಮಂಗಳೂರಿನ ಮೇರಿಹಿಲ್ ಬಳಿಯ ಅಪಾರ್ಟ್ಮೆಂಟ್ ನಲ್ಲಿ ಲೀಸಿಗೆ ಮನೆ ಬಾಡಿಗೆ ಪಡೆದು ವಾಸವಿದ್ದರು.
ಆರೋಪಿಗಳ ಪೈಕಿ ಭವ್ಯಾ ಎಂಬಾಕೆಗೆ ಈ ಹಿಂದೆ ವಿವಾಹವಾಗಿದ್ದು ಅದರೇ ಆಕೆ ಪತಿಯನ್ನು ತೊರೆದಿದ್ದಳು. ಬಳಿಕ ಆಕೆ ಇನ್ನೊಬ್ಬ ಆರೋಪಿ ಕುಮಾರ್ ನ ಸಂಪರ್ಕಕ್ಕೆ ಬಂದಿದ್ದಳು. ಆರೋಪಿಗಳಿಬ್ಬರು ವಿಲಾಸಿ ಜೀವನದ ಬೆನ್ನುಹತ್ತಿ ಹನಿಟ್ರ‍್ಯಾಪ್ ದಂಧೆಗಿಳಿದಿದ್ದರು.

ಹನಿಟ್ರ‍್ಯಾಪ್ ಗೆ ಮಿಕ ಹುಡುಕುತ್ತಿದ್ದ ಈ ಖತರ್ನಾಕ್ ಜೋಡಿಯ ಕಣ್ಣಿಗೆ ಬಿದ್ದದ್ದು ಹಣದ ಕುಳ ಹಾಗೂ ಹೆಣ್ಣು ಮಕ್ಕಳಿಗೆ ಜೊಲ್ಲು ಸುರಿಸುವ ಚಿಕ್ಕಮಗಳೂರು ಮೂಲದ ವಶೀಕರಣ ಸ್ಪೆಷಲಿಷ್ಟ್ ಜ್ಯೋತಿಷಿ ಹಾಗೂ ಪುರೋಹಿತ. ಲೋಕದ ಭವಿಷ್ಯ ಹೇಳುತ್ತೇನೆ ಅಂತಾ ಹೇಳಿಕೊಳ್ಳುತ್ತಿದ್ದ ಈ ಜ್ಯೋತಿಷಿ ಈ ಮಾಯಾಂಗನೆ ಬೀಸಿದ ಮಾಯಜಾಲಕ್ಕೆ ಸಿಲುಕಿ ತನ್ನ ಭವಿಷ್ಯವನ್ನೆ ಹಾಳುಗೆಡವಿಕೊಂಡಿದ್ದಾನೆ

ಈ ಪುರೋಹಿತ ಕಂ ಜ್ಯೋತಿಷಿ ತನಗೆ ಗೊತ್ತಿದೆ ಎಂದು ಹೇಳಿಕೊಳುತ್ತಿದ್ದ ಮಾಟ, ಮಂತ್ರ, ತಂತ್ರ, ವಶೀಕರಣ ವಿದ್ಯೆಗಳೆನ್ನೆಲ್ಲ ಮೀರಿಸುವ ವಶೀಕರಣ ಸ್ಪೆಷಲಿಷ್ಟ್ ಆಗಿ ಈ 30ರ ಹರೆಯದ ಮಹಿಳೆ ಮೂಡಿ ಬಂದಿದ್ದಾಳೆ. ಈಕೆಯ ಕುಡಿನೋಟ, ಒನಪು, ವೈಯಾರಕ್ಕೆ ಮರುಳಾಗಿ ಆಕೆಯ ವಶವಾಗಿದ್ದಾನೆ.
ಇದೆಲ್ಲ ಹೀಗೆ ಶುರುವಾಯಿತು
ವರ್ಷಗಳ ಹಿಂದೆ ಒಂದು ದಿನ ಆರೋಪಿಗಳಿಬ್ಬರು ಚಿಕ್ಕಮಗಳೂರಿನ ಜ್ಯೋತಿಷಿಯನ್ನು ಭೇಟಿಯಾಗುತ್ತಾರೆ. ದಂಪತಿಗಳ ಮಧ್ಯೆ ಕಲಹವಿದೆ, ಮನೆಯಲ್ಲಿ ಸಮಸ್ಯೆಯಿದೆ ದೋಷ ನಿವಾರಣೆ ಮಾಡಿ ಕೊಡಬೇಕೆಂದು ಕೋರುತ್ತಾರೆ. ಆ ವೇಳೆ ಮನೆಗೆ ಬಂದು ಪೂಜೆ ಮಾಡಿ ದೋಷ ಪರಿಹರಿಸುವುದಾಗಿ ಜ್ಯೋತಿಷಿ ಭರವಸೆ ನೀಡಿದ್ದಾರೆ. ಅದರಂತೆ ಇವರಿರುವ ಮಂಗಳೂರಿನ ಮನೆಗೆ ಭೇಟಿ ನೀಡಿ ಪೂಜೆ ಪುನಸ್ಕರ ಮಾಡಿದ ಜ್ಯೋತಿಷಿಯನ್ನು ತನ್ನತ್ತ ಸೆಳೆಯುವಲ್ಲಿ ಆರೋಪಿ ಮಹಿಳೆ ಭವ್ಯಾ ಯಶಸ್ವಿಯಾಗುತ್ತಾಳೆ.

ಪೂಜೆ ಮುಗಿಸಿಕೊಂಡು ಹೋದ ಬಳಿಕವು ಮಹಿಳೆ ಹಾಗೂ ಪುರೋಹಿತರ ಮಧ್ಯೆ ಪೋನಿನಲ್ಲಿ ಸಂಪರ್ಕ ಮುಂದುವರಿಯುತ್ತದೆ. ಇದು ಇನ್ನಷ್ಟು ಆತ್ಮೀಯವಾಗಿ ಒಂದು ದಿನ ಪುರೋಹಿತರು ಮಧು ಹೀರಲು ಭವ್ಯಾಳ ಮನೆಗೆ ಬರುತ್ತಾರೆ. ಅದಕ್ಕೆ ಕಾಯುತ್ತಿದ್ದ ಆರೋಪಿಗಳಿಬ್ಬರು ಆ ಕ್ಷಣಗಳನ್ನು ವಿಡಿಯೋ ಚಿತ್ರಿಕರಿಸಿಕೊಳ್ಳುತ್ತಾರೆ. ಅದರ ಜತೆಗೆ ಆರೋಪಿ ಮಹಿಳೆ ಹಾಗೂ ಪುರೋಹಿತರ ನಡುವಿನ ಪೋನ್ ಸಂಭಾಷಣೆಯನ್ನು ಆರೋಪಿಗಳು ರೆಕಾರ್ಡ್ ಮಾಡಿಕೊಂಡಿರುತ್ತಾರೆ..

ಬೇರೆ ಬೇರೆ ಹೆಸರಿನಲ್ಲಿ ಬ್ಲ್ಯಾಕ್ ಮೇಲ್

ಇದಾದ ಬಳಿಕ ನಡೆದದ್ದೆ ಬ್ಲ್ಯಾಕ್ ಮೇಲ್. ವಿಡಿಯೋ ಹಾಗೂ ಆಡಿಯೋ ದಾಖಲೆಗಳನ್ನು ಮುಂದಿಟ್ಟು ಕಳೆದ ಆಗಷ್ಟ್ ತಿಂಗಳಿನಿAದ ಆರೋಪಿಗಳು ಹಣ ಪೀಕಿಸಲು ಶುರು ಮಾಡುತ್ತಾರೆ. ಹಣ ನೀಡಲು ಹಿಂದೇಟು ಹಾಕಿದಾಗ ಆಡಿಯೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವ, ಮಾಧ್ಯಮಗಳಿಗೆ ನೀಡುವ ಹಾಗೂ ಅತ್ಯಾಚಾರ ಕೇಸ್ ನೀಡುವ ಬೆದರಿಕೆಯನ್ನು ಕೂಡ ಒಡ್ಡುತ್ತಾರೆ. ಇಷ್ಟು ಮಾತ್ರವಲ್ಲದೇ ಪೊಲೀಸ್ ಅಧಿಕಾರಿ, ಪತ್ರಕರ್ತರು, ಮಹಿಳಾ ಸಂಘಟನೆಗಳ ಮುಖಂಡರು, ರಾಜಕೀಯ ನಾಯಕರ ಹೆಸರಿನಲ್ಲಿ ಪುರೋಹಿತರಿಗೆ ಕರೆ ಮಾಡಿ ಬೆದರಿಕೆ ಒಡ್ಡುತ್ತಾರೆ.
ಇಷ್ಟೆಲ್ಲ ಮಾಡಿ ಬರೋಬ್ಬರಿ 49 ಲ.ರೂ. ನಷ್ಟು ಹಣವನ್ನು ಸುಲಿಗೆ ಮಾಡುತ್ತಾರೆ. ಇದರಲ್ಲಿ 15 ಲಕ್ಷ ರೂಪಾಯಿ ಹಣ ನಗದು ರೂಪದಲ್ಲಿ ಪಡೆದಿದ್ದರೇ, ಉಳಿದ 34 ಲ. ರೂಪಾಯಿಯನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಇಷ್ಟು ಹಣ ನೀಡಲು ಜ್ಯೋತಿಷಿ ತನ್ನ ಆಪ್ತರಲ್ಲಿ ಸಾಲ ಕೂಡ ಮಾಡಿಕೊಂಡಿದ್ದಾನೆ.ಮತ್ತು ಹಣಕ್ಕೆ ಬೇಡಿಕೆಯಿಟ್ಟಾಗ ಕಂಗಾಲಾದ ಜ್ಯೋತಿಷಿ ಆತ್ಮಹತ್ಯೆಗೂ ಯತ್ನಿಸಿದ್ದಾನೆ. ಮತ್ತೆ ಕೊನೆಯದಾಗಿ ಧೈರ್ಯ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸಿದ್ದರಿಂದ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ತನಿಖೆ ನಡೆದಿತ್ತು. ಪೊಲೀಸರ ತಂಡ ದಂಪತಿ ಎನ್ನಲಾಗಿರುವ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 37 ಸಾವಿರ ಮೌಲ್ಯದ ಎರಡು ಚಿನ್ನದ ರಿಂಗ್, ನಗದು ಹಣ 31 ಸಾವಿರ ರೂ., ನಾಲ್ಕು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದೆ.

ಆರೋಪಿಗಳು ಇದೇ ರೀತಿ ಹಲವು ವ್ಯಕ್ತಿಗಳನ್ನು ಹನಿಟ್ರ‍್ಯಾಪ್ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ದಂಧೆಯಲ್ಲಿ ಬಂಧಿತ ಆರೋಪಿಗಳಿಗೆ ಇನ್ನು ಕೆಲವು ಮಂದಿ ಸಹಕರಿಸಿರುವ ಅನುಮಾನಗಳಿದ್ದು ತನಿಖೆ ಆ ನಿಟ್ಟಿನಲ್ಲೂ ಸಾಗಿದೆ.

ಸುಲಿಗೆ ಮಾಡಿದ ಹಣದಲ್ಲಿ ಆರೋಪಿಗಳು ಮಂಗಳೂರಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಮೊದಲು ಸಣ್ಣ ಬಾಡಿಗೆ ಮನೆಯಲ್ಲಿದ್ದವರು, ಕೃತ್ಯ ಎಸಗಿದ ಬಳಿಕ ಪಡೆದ ಹಣದಲ್ಲಿ ಹತ್ತು ಲಕ್ಷ ಕೊಟ್ಟು ಮೇರಿಹಿಲ್ ನಲ್ಲಿ ಫ್ಲ್ಯಾಟ್ ಲೀಸಿಗೆ ಪಡೆದಿದ್ದರು. ಅಲ್ಲದೆ, ಆ ಮನೆಗೆ ಏಳು ಲಕ್ಷ ಮೌಲ್ಯದ ಮನೆ ಸಾಮಗ್ರಿಗಳನ್ನು ಖರೀದಿಸಿದ್ದರು. ಓಡಾಡಲು ಹೊಸ ದ್ವಿಚಕ್ರ ವಾಹನವನ್ನು ಖರೀದಿಸಿರುವುದು ತನಿಖೆ ಯಲ್ಲಿ ತಿಳಿದುಬಂದಿದೆ.

ಆರೋಪಿಗಳ ಪೈಕಿ ಭವ್ಯಳನ್ನು ಕೋರ್ಟಿಗೆ ಹಾಜರುಪಡಿಸಿದ್ದು ಐದು ದಿನಗಳ ಪೊಲೀಸ್ ಕಸ್ಟಡಿ ಪಡೆಯಲಾಗಿದೆ. ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್ ಐ ರಾಜೇಂದ್ರ ಬಿ., ಪ್ರದೀಪ ಟಿ.ಆರ್ ಪಾಲ್ಗೊಂಡಿದ್ದರು. ಪ್ರಕರಣ ಹಾಗೂ ತನಿಖೆಯ ವಿವರವನ್ನು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಮಾಧ್ಯಮಗಳಿಗೆ ನೀಡಿದ್ದಾರೆ

error: