May 16, 2024

Bhavana Tv

Its Your Channel

ಅಂಗನವಾಡಿ ಮಕ್ಕಳಿಗೆ ಸಾರ್ವಜನಿಕ ಸ್ಥಳಗಳ ಪರಿಚಯ

ರೋಣ ; ನರೇಗಲ್ಲ ಸಮೀಪದ ಜಕ್ಕಲಿ ಗ್ರಾಮದ ಅಂಗನವಾಡಿ ೨೮೩ ಕೇಂದ್ರದ ಕಾರ್ಯಕರ್ತೆ ಗೀತಾ ಮೇಟಿ ಇವರು ಗುರುವಾರ ಮಕ್ಕಳಿಗೆ ಸಾರ್ವಜನಿಕ ತಿಳುವಳಿಕೆ ಮೂಡಿಸುವ ಸಲುವಾಗಿ ಗ್ರಾಮದ ಸಾರ್ವಜನಿಕ ಸ್ಥಳಗಳಾದ ಗ್ರಂಥಾಲಯ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸ್ಥಳಗಳಿಗೆ ಮಕ್ಕಳನ್ನು ಕರೆದೊಯ್ದು ಗ್ರಂಥಾಲಯದಲ್ಲಿರುವ ಹಲವಾರು ದಿನಪತ್ರಿಕೆಗಳು ಮತ್ತು ಪುಸ್ತಕಗಳನ್ನು ಪರಿಚಯಿಸಿ ಚಿತ್ರಗಳನ್ನು ತೊರಿಸಿ ಪಾಠ ಮಾಡಿದರು. ಗದಗ ಜಿಲ್ಲೆಯ ನಕಾಶೆಯಲ್ಲಿ ರೋಣ ತಾಲೂಕಿನ ಜಕ್ಕಲಿ ಗ್ರಾಮವು ಎಲ್ಲಿ ಬರುತ್ತದೆ ಅದರ ಸುತ್ತ ಮುತ್ತಲಿನ ಊರುಗಳು ಯಾವುವು ಎಂಬುದರ ಬಗ್ಗೆ ವಿವರಣೆ ನೀಡಿದರು. ಬಳಿಕ ಬ್ಯಾಂಕಲ್ಲಿ ವ್ಯವಹಾರ ಹೇಗೆಲ್ಲಾ ನಡೆಯುತ್ತಿದೆ ಎನ್ನುವ ಕುರಿತು ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಕೆವಿಜಿ ಬ್ಯಾಂಕ್ ವ್ಯವಸ್ಥಾಪಕ ಸಿ. ಎಚ್. ಸೋಮಯ್ಯ, ಎಂ. ಶ್ರೀಶಾ,
ಕ್ಯಾಷಿಯರ್ ಜಿ. ಸುರೇಶ್ ಬಾಬು, ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರಪ್ಪ ವಾಲಿ, ಸದಸ್ಯೆ ಸಂತೋಷ ಕೋರಿ, ಪಿಡಿಒ ಎಸ್. ಎಸ್. ರಿತ್ತಿ, ಕಾರ್ಯದರ್ಶಿ ಈರಣ್ಣ ಪತ್ತಾರ, ಪತ್ರಕರ್ತ ಸಂಗಮೇಶ ಮೆಣಸಿಗಿ, ಗ್ರಂಥಾಲಯ ಮೇಲ್ವಿಚಾರಕ ಅಶೋಕ್ ಮುಕ್ಕಣ್ಣವರ, ರೇಖಾ ಆನೇಹೊಸೂರು ಇದ್ದರು.

ವರದಿ;- ವೀರಣ್ಣ ಸಂಗಳದ ರೋಣ

error: