September 16, 2024

Bhavana Tv

Its Your Channel

ತಬ್ಲಿಘಿ ಜಮಾತ್ ಸಂಘಟನೆಯ ಪಾಕಿಸ್ತಾನ್ ಪ್ರಾಂತ್ಯವೊಂದರ ಮುಖ್ಯಸ್ಥ ಕರೊನಾ ಸೋಂಕಿಗೆ ಬಲಿ

ಫೈಸಲಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಫೈಸಲಾಬಾದ್‌ನ ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನಾ ಸುಹೈಬ್ ರುಮಿ (69) ಕರೊನಾ ಸೋಂಕಿನಿಂದ ಬಳಲಿ ಸಾವನ್ನಪ್ಪಿದ್ದಾನೆ.

ಲಾಹೋರ್‌ನ ರೈವೈಂದ್‌ನಲ್ಲಿ ಕಳೆದ ತಿಂಗಳು ನಡೆದ ತಬ್ಲಿಘಿ ಜಮಾತ್‌ನಲ್ಲಿ ಸುಹೈಬ್ ಭಾಗವಹಿಸಿದ್ದ ಎನ್ನಲಾಗಿದೆ. ಆತನ ಕುಟುಂಬದಲ್ಲಿ ಐವರಿಗೆ ಕರೊನಾ ಪಾಸಿಟಿವ್ ಇದೆ. ತಬ್ಲಿ ಜಮಾತ್ ಸದಸ್ಯರಿಂದ ಸೋಂಕು ತಗುಲಿದವರ ಸಂಖ್ಯೆ 1,100ಕ್ಕೂ ಹೆಚ್ಚಾಗಿದೆ.

ಈ ನಡುವೆ, ಕರೊನಾ ಸೋಂಕು ಮತ್ತು ಸಾವಿನ ಕುರಿತು ಪಾಕಿಸ್ತಾನ ನಿಖರ ಮಾಹಿತಿ ನೀಡುತ್ತಿಲ್ಲ ಎಂಬ ಶಂಕೆಗೆ ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ ಮುರಾದ್ ಅಲಿ ಶಾ ಹೇಳಿಕೆ ಮತ್ತಷ್ಟು ಪುಷ್ಟಿ ನೀಡಿದೆ.

ಸಿಂಧ್ ಪ್ರಾಂತ್ಯದಲ್ಲಿ ಸರ್ಕಾರ ತಿಳಿಸಿರುವುದಕ್ಕಿಂತ ಹೆಚ್ಚಿನ ಜನರು ಅಸುನೀಗಿದ್ದಾರೆ ಎಂಬ ಅನುಮಾನ ಕಾಡುತ್ತಿದೆ. ಸೋಂಕಿತರನ್ನು ನಿಖರವಾಗಿ ಗುರುತಿಸಲು ಆಗುತ್ತಿಲ್ಲ. ಸಿಂಧ್ ಪ್ರಾಂತ್ಯದಲ್ಲಿ 41 ಸೋಂಕಿತರು ಸಾವನ್ನಪ್ಪಿದ್ದಾರೆ. ಇದರ ಹೊರತಾಗಿಯೂ ಆಸ್ಪತ್ರೆಗಳಿಗೆ ಅನೇಕ ಶವಗಳು ಬಂದಿವೆ. ಈ ಶವಗಳು ಕರೊನಾ ಪರೀಕ್ಷೆಗೆ ಒಳಪಟ್ಟಿಲ್ಲ ಎಂದು ತಜ್ಞರು ಹೇಳಿದ್ದಾರೆಂದು ಅವರು ತಿಳಿಸಿದ್ದಾರೆ.

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಕಳೆದ 15 ದಿನಗಳಲ್ಲಿ 300ಕ್ಕೂ ಜನರು ಆಸ್ಪತ್ರೆಗೆ ಬರುವ ಮೊದಲೇ ಸಾವನ್ನಪ್ಪಿದ್ದಾರೆ. ನ್ಯುಮೋನಿಯಾ ರೀತಿ ಕಾಯಿಲೆಯಿಂದ ಅವರು ಮೃತರಾಗಿದ್ದಾರೆ ಎಂದು ವರದಿಯಾಗಿದೆ.

source : dailyhunt

error: