May 12, 2024

Bhavana Tv

Its Your Channel

ಗ್ರಾಮ ಪಂಚಾಯತ್ ಮಟ್ಟದಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಮುಖಾಂತರ ಪಕ್ಷ ಬಲಪಡಿಸೋಣ-ಬಿ ಎಂ ಕಿರಣ್

ಕಿಕ್ಕೇರಿ: ಗ್ರಾಮ ಪಂಚಾಯತ್ ಮಟ್ಟದಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಮುಖಾಂತರ ಪಕ್ಷ ಬಲಪಡಿಸೋಣ ಎಂದು ಕಾರ್ಯಕರ್ತರಲ್ಲಿ ಕರೆ ನೀಡಿದ ಜೆಡಿಎಸ್ ಯುವ ಹಾಗೂ ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷ ನಾಯಕ ಬಿ ಎಂ ಕಿರಣ್

ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿ ಪಟ್ಟಣದ ಕೆ ಎಸ್ ನರಸಿಂಹಸ್ವಾಮಿ ಸಮುದಾಯ ಭವನದ ಆವರಣದಲ್ಲಿ ಜೆ.ಡಿ.ಎಸ್ ಕಾರ್ಯಕರ್ತರ ಸಭೆ ಹಾಗೂ ನೊಂದಣಿ ಅಭಿಯಾನ ಮತ್ತು ವಿವಿಧ ಘಟಕಗಳ ಪದಾಧಿಕಾರಿಗಳ ಹಂಚಿಕೆ ಕಾರ್ಯಕ್ರಮವನ್ನು ಕಿಕ್ಕೇರಿ ಹೋಬಳಿ ಜೆಡಿಎಸ್ ಅಧ್ಯಕ್ಷ ಕಾಯಿ ಮಂಜೇಗೌಡ ಮತ್ತು ಜೆಡಿಎಸ್ ಪಕ್ಷದ ಯುವ ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಂ ಕಿರಣ್ ನೆಡೆಯಿತು

ನಂತರ ಬಿ.ಎಂ ಕಿರಣ್ ಮಾತನಾಡಿ ಪಕ್ಷದ ಬಲವರ್ಧನೆಗಾಗಿ ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪದಾಧಿಕಾರಿಗಳನ್ನು ನೇಮಿಸಿ ಪಕ್ಷದ ಏಳಿಗೆಗಾಗಿ ದುಡಿಯುವ ಕಾರ್ಯಕರ್ತರಿಗೆ ಜವಾಬ್ದಾರಿ ನೀಡುವ ಮುಖಾಂತರ ನಮ್ಮ ಪಕ್ಷದ ಮತ್ತಷ್ಟು ಬಲಪಡಿಸೋಣ ಎಂದು ಕಾರ್ಯಕರ್ತರಿಗೆ ಕರೆನೀಡಿದರು.

ಮನ್ ಮುಲ್ ನಿರ್ದೇಶಕ ಹೆಚ್ ಟಿ ಮಂಜು ಮಾತನಾಡಿ ಪ್ರತಿಯೊಂದು ಚುನಾವಣೆಯಲ್ಲಿ ಸೋಲು ಗೆಲುವು ಸರ್ವಸಾಮಾನ್ಯ ಆದರೆ ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಎದುರಾಳಿಯಾಗಿ ನಿಂತಿರುವುದು ಜಾತ್ಯಾತೀತ ಜನತಾದಳ. ಕೆಲವು ಪಕ್ಷಗಳು ಕೆಲ ಚುನಾವಣೆಯಲ್ಲಿ ಹಣದ ಹೊಳೆ ನಡೆದಿರಬಹುದು ಆದರೆ ಹಣಬಲದಿಂದ ಗೆಲುವು ಅಷ್ಟೇ ನಮ್ಮ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಅಳಿಸಲು ಯಾರಿಂದಲೂ ನಿಷ್ಠಾವಂತ ಕಾರ್ಯಕರ್ತರು ಇರುವವರೆಗೂ ಸಾಧ್ಯವಿಲ್ಲ 2023 ಕ್ಕೆ ನಮ್ಮ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವಿಗಾಗಿ ಮತ್ತು ಸರ್ವಾನುಮತ ದಿಂದ ನಮ್ಮ ನಾಯಕರಾದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರನ್ನು ಮುಖ್ಯ ಮಂತ್ರಿ ಆಗುವ ನಿಟ್ಟಿನಲ್ಲಿ ಪಕ್ಷ ಸಂಘಟಿಸೋಣ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು..

ಈ ಸಂದರ್ಭದಲ್ಲಿ ತಾಲೂಕು ಜೆ.ಡಿ.ಎಸ್ ಘಟಕದ ಅಧ್ಯಕ್ಷ ಜಾನಕಿರಾಮ್, ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮತ್ತು ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ರಾಜ್ಯ ನಿರ್ದೇಶಕರಾದ ಚೋಳೆನಹಳ್ಳಿ ಪುಟ್ಟಸ್ವಾಮಿಗೌಡ, ಕಿಕ್ಕೇರಿ ಹೋಬಳಿ ಘಟಕದ ಅದ್ಯಕ್ಷ ಕಾಯಿ ಮಂಜೇಗೌಡ, ಮಾಜಿ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ಕಿಕ್ಕೇರಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಬಿ ಶೇಖರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶಾರದಮ್ಮ ಕೃಷ್ಣೇಗೌಡ, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಶಂಭು, ಹೇಮಾವತಿ ಸಕ್ಕರೆ ಕಾರ್ಖಾನೆಯ ಮಾಜಿ ಸದಸ್ಯರಾದ ಉದಯಕುಮಾರ್, ಹಿರಿಯ ಮುಖಂಡ ರಾಮೇಗೌಡ, ಯುವ ಮುಖಂಡರಾದ ಸಾಸಲು ಮಹದೇವು, ಮಂಜು ( ಬಾರೆ), ದಬ್ಬೇಘಟ್ಟ ಅನಿಲ್, ರಾಜೇಶ್, ಶಿವಣ್ಣ ಕಾರ್ಯಕರ್ತರು ಸೇರಿದಂತೆ ಉಪಸ್ಥಿತರಿದ್ದರು

ವರದಿ: ಶಂಭು ಕಿಕ್ಕೇರಿ

error: