May 15, 2024

Bhavana Tv

Its Your Channel

ದಭ್ಬೇಘಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಅಶ್ವಿನಿ ಕೆಂಪರಾಜು ಆಯ್ಕೆ

ಕಿಕ್ಕೇರಿ:- ದಭ್ಬೇಘಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಬಿ.ಜೆ.ಪಿ.ಬೆಂಬಲಿತ ಅಭ್ಯರ್ಥಿ ಅಶ್ವಿನಿ ಕೆಂಪರಾಜು, ಹಾಗೂ ಉಪಾಧ್ಯಕ್ಷರ ಸ್ಥಾನಕ್ಜೆ ಜೆ.ಡಿ.ಎಸ್ ಬೆಂಬಲಿತ ಅಭ್ಯರ್ಥಿ ಪುಟ್ಟೇಗೌಡ್ರು ಗೆಲುವು ಸಾಧಿಸಿದರು

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ದಭ್ಬೇಘಟ್ಟ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷ ಸ್ಥಾನವು ತೆರವಾಗಿದ್ದ ಹಿನ್ನೆಲೆ ಇಂದು ಚುನಾವಣೆ ನಿಗದಿಯಾಗಿತ್ತು.

ಅಧ್ಯಕ್ಷರ ಸ್ಥಾನಕ್ಕೆ ಬಿ ಜೆ ಪಿ ಪಕ್ಷ ಬೆಂಬಲಿತ ಅಶ್ವಿನಿ ಕೆಂಪರಾಜು ರವರು ಹಾಗೂ ಕಾಂಗ್ರೆಸ್ ಬೆಂಬಲಿತ ಕುಮಾರಿಯವರು ನಾಮ ಪತ್ರ ಸಲ್ಲಿಕೆ ಮಾಡಿದರು ಆದರೆ ಜಿಲ್ಲಾ ಪಂಚಾಯತಿ ಮಾಜಿ ಉಪಾದ್ಯಕ್ಷರಾದ ಕೆ.ಎಸ್ ಪ್ರಭಾಕರ್ ನೇತೃತ್ವದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಅಶ್ವಿನಿ ಕೆಂಪರಾಜು ರವರು 11 ಮತಗಳನ್ನು ಪಡೆಯುವ ಮೂಲಕ ಜಯಬೇರಿ ಬಾರಿಸಿದರು

ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ಜೆ.ಡಿ.ಎಸ್ ಪಕ್ಷ ಬೆಂಬಲಿತ ಆಭ್ಯರ್ಥಿ ಪುಟ್ಟೇಗೌಡ್ರು ಹಾಗೂ ಬಿ.ಜೆ.ಪಿ ಬೆಂಬಲಿತ ಚನ್ನೇಗೌಡ್ರು ಸ್ಪರ್ಧೆ ಮಾಡಿದರು ಶ್ರೀ ಸುಬ್ರಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಹಾಗೂ ಜೆ.ಡಿ.ಎಸ್ ಪಕ್ಷದ ಪ್ರಭಾವಿ ನಾಯಕರಾದ ಬಿ.ಎಂ ಕಿರಣ್ ನೇತೃತ್ವದಲ್ಲಿ ಸ್ಪರ್ಧೆ ಮಾಡಿದ್ದ ಪುಟ್ಟೇಗೌಡ್ರು 9 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದರು

ನೂತನವಾಗಿ ಆಯ್ಕೆಯಾದ ಅಧ್ಯಕ್ಷೆಗೆ ಹಾಗೂ ನೂತನ ಉಪಾಧ್ಯಕ್ಷರಿಗೆ ಆ ಪಕ್ಷದರು ಪ್ರತ್ಯೇಕವಾಗಿ ಶುಭಕೋರಿ ಸಿಹಿ ತಿನ್ನಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಮಣಿಯಮ್ಮ, ಕುಮಾರಸ್ವಾಮಿ, ಲೋಕೇಶ್, ಇಂದ್ರಮ್ಮ, ಅನಿತಾ, ದೇವರಾಜು, ವಿನೋದಿನಿ, ತಾಯಮ್ಮ, ಕುಮಾರಿ, ಚನ್ನೇಗೌಡ, ಶಿವುಕುಮಾರ್, ನಾಗಮ್ಮ, ಕುಮಾರ್, ನಾಗರಾಜೇಗೌಡ, ಮಂಜುಳ, ಪಿ.ಡಿ.ಓ ಉಮಶಂಕರ್, ಕಾರ್ಯದರ್ಶಿ ಮಧು ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು..

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: