May 13, 2024

Bhavana Tv

Its Your Channel

ಶ್ರೀ ಆಂಜನೇಯ ಸ್ವಾಮಿ, ಶ್ರೀ ಚನ್ನಕೇಶವ ಸ್ವಾಮಿ, ಶ್ರೀ ಮಾರಮ್ಮ ದೇವಾಲಯ ಲೋಕಾರ್ಪಣೆಗೊಳಿಸಿದ ಮಾಜಿ ಸಚಿವ ಹೆಚ್ ಡಿ ರೇವಣ್ಣ

ಕಿಕ್ಕೇರಿ: ದೇವಾಲಯಗಳು ನಮ್ಮ ಪರಂಪರೆಯ ಸಂಕೇತ ಪ್ರತಿ ಗ್ರಾಮಗಳಲ್ಲಿಯೂ ದೇವಾಲಯದ ನಿರ್ಮಾಣ ಆಗಬೇಕು ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಬಗ್ಗೆ ತಿಳಿಸಬೇಕು ಎಂದು ಮಾಜಿ ಸಚಿವರಾದ ಹೆಚ್ ಡಿ ರೇವಣ್ಣ ತಿಳಿಸಿದರು

ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿ ಹೋಬಲಿಯ ಗೊಡೇಹೊಸಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಶ್ರೀ ಆಂಜನೇಯ ಸ್ವಾಮಿ, ಶ್ರೀ ಚನ್ನಕೇಶವ ಸ್ವಾಮಿ, ಶ್ರೀ ಮಾರಮ್ಮ ನವರ ಮೂರು ದೇವಾಲಯಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿ ನನ್ನ ತಂದೆಯ ಹಾಗೂ ನನ್ನ ರಾಜಕೀಯ ಜೀವಕ್ಕೆ ಹೆಚ್ಚು ಶ್ರಮ ವಹಿಸಿದವರು ಎಂದರೇ ಗೊಡೇಹೊಸಳ್ಳಿ ಗ್ರಾಮಸ್ಥರು, ಮೊನ್ನೆ ಕೆ ಆರ್ ಪೇಟೆಗೆ ಕುಮಾರಸ್ವಾಮಿ ಮತ್ತು ನಾನೂ ಒಗ್ಗೂಡಿ ರಸ್ತೆ ಅಭಿವೃದ್ಧಿಗಾಗಿ 110 ಕೋಟಿ ಮಂಜುರಾತಿ ಮಾಡಿದ್ದೇವೆ ಹಾಗೂ ತಾಲ್ಲೂಕಿಗೆ ಇಂಜಿನಿಯರಿAಗ್ ಕಾಲೇಜು, ಎಂ ಎಸ್ ಘಟಕಗಳು, ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ನಮ್ಮಿಂದಲೇ ಆಗಿದೆ.. ಅಲ್ಲದೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದು, ರೈತರಿಗಾಗಿ ಕುಮಾರಣ್ಣ ಎಷ್ಟೇ ಸಮಸ್ಯೆಗಳು ಇದ್ದರು ರೈತರ ಸಾಲ ಮನ್ನ ಮಾಡಿ ಕೊಟ್ಟ ಮಾತಿನಂತೆ ನೆಡೆದುಕೊಂಡರು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜನರೇ ಉತ್ತರ ನೀಡುತ್ತಾರೆ ಎಂದರು..

ನAತರ ವಿಧಾನ ಪರಿಷತ್ ಸದಸ್ಯ ಸೂರಾಜ್ ರೇವಣ್ಣ ಮಾತನಾಡಿ ದೇವಾಲಯ ಅಭಿವೃದ್ಧಿಗೆ ಸದಾ ನಮ್ಮ ಬೆಂಬಲ ಇರುತ್ತದೆ ನಮ್ಮ ತಂದೆ ಹೇಳುವ ಹಾಗೇ ಹೊಳೆನರಸೀಪುರ ಹಾಗೂ ಕೆ ಆರ್ ಪೇಟೆ ಎರಡು ಕಣ್ಣುಗಳು ಇದ್ದಾಂಗೆ ನಾವು ಮಾಡಿರುವ ಅಭಿವೃದ್ಧಿಗಳು ಏನೆಂದು ಇಡೀ ತಾಲ್ಲೂಕಿನ ಜನತೆಗೆ ಗೊತ್ತಿದೆ ನಾವು ಅಧಿಕಾರದಲ್ಲಿ ಇದ್ದಾಗ ನೀಡದ ರೈತರ ಸಾಲ ಮನ್ನ ಎಷ್ಟೂ ರೈತರಿಗೆ ಅನೂಕೂಲವಾಗಿ ಎಂದರು..

ಕಾರ್ಯಕ್ರಮದಲ್ಲಿ ರಾಜ್ಯ ಸಹಾಕರ ಮಂಡಲಿಯ ನಿರ್ದೇಶಕ ಸಿ.ಎನ್ ಪುಟ್ಟಸ್ವಾಮಿ ಗೌಡ್ರು, ಟಿ.ಎ.ಪಿ.ಎಂ.ಸ್ ಅಧ್ಯಕ್ಷ ಬಿ.ಎಲ್ ದೇವರಾಜು, ಮನ್ ಮುಲ್ ನಿರ್ದೇಶಕ ಹೆಚ್ ಟಿ ಮಂಜು, ಎಂ.ಡಿ.ಸಿ.ಸಿ ಬ್ಯಾಕ್ ಉಪಾದ್ಯಕ್ಷ ಆಶೋಕ್, ಪುರಸಬೆ ಸದಸ್ಯ ಬಸ್ ಸಂತೋಷ್, ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಂ ಕಿರಣ್, ತಾಲ್ಲೂಕು ಜೆ.ಡಿ.ಎಸ್ ಯುವ ಘಟಕದ ಅದ್ಯಕ್ಷ ಅಶ್ವಿನ್ ಕುಮಾರ್, ಕಿಕ್ಕೇರಿ ಹೋಬಳಿ ಘಟಕದ ಅಧ್ಯಕ್ಷ ಕಾಯಿ ಮಂಜೇಗೌಡ, ಮನ್ ಮುಲ್ ಮಾಜಿ ಅಧ್ಯಕ್ಷ ಚನ್ನಿಂಗೇಗೌಡ್ರು, ಮುಖಂಡರಾದ ಕೋಟಹಳ್ಳಿ ಶ್ರೀನಿವಾಸ್, ಜವರಾಯಿಗೌಡ್ರು, ಚನ್ನಕೇಶವ, ಸಕಲೇಶಪುರ ತಾಲ್ಲೂಕು ಪಂಚಾಯತ್ ಇ ಓ ಹರೀಶ್, ಗ್ರಾಮದ ಹಿರಿಯ ಮುಖಂಡರು, ಸೇರಿದಂತೆ ಸಾವಿರಾರು ಗ್ರಾಮಸ್ಥರುಗಳು ಭಾಗವಹಿಸಿದರು..

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: