May 14, 2024

Bhavana Tv

Its Your Channel

ಸಚಿವ ಕೆ ಸಿ ನಾರಾಯಣಗೌಡರಿಗೆ ಅಭಿನಂದನಾ ಕಾರ್ಯಕ್ರಮ

ಕಿಕ್ಕೇರಿ:- ತಾಲ್ಲೂಕಿನ ಅಭಿವೃದ್ಧಿಯೇ ನನ್ನ ಗುರಿ ಈಗಾಗಲೇ 1750 ಕೋಟಿ ಅನುದಾನವನ್ನು ತಾಲ್ಲೂಕಿಗೆ ನೀಡಿದ್ದು ಇನ್ನೂ 250 ಕೋಟಿ ಅನುದಾನ ತಾಲ್ಲೂಕಿಗೆ ಬರಲಿದ್ದು ರಾಜ್ಯದ ಎರಡನೇ ಶಿಕಾರಿ ಪುರದ ಕನಸ್ಸು ನನ್ನಸಾಗಲಿದೆ ಎಂದು ರೇಷ್ಮೆ, ಯುವ ಸಬಲೀಕರಣ, ಕ್ರೀಡಾ ಸಚಿವರಾದ ಕೆ.ಸಿ ನಾರಾಯಣಗೌಡ ರವರು ತಿಳಿಸಿದರಿ

ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಸೊಳ್ಳೇಪುರ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಹಾಗೂ ಗುತ್ತಿಗೆದಾರ ಎಸ್ ಆರ್ ಕೇಶವಮೂರ್ತಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬೋರಾಪುರ ಎಸ್ ಬಿ ಮಂಜುನಾಥ್, ಸೊಳ್ಳೇಪುರ ಗ್ರಾಮ ಪಂಚಾಯತಿ ಸದಸ್ಯ ಬಾಲಕೃಷ್ಣ, ಶಿಕ್ಷಕರಾದ ರವಿಕುಮಾರ್, ಕೆಂಪೇಗೌಡರ ಯುವಕರ ಸಂಘದ ಸದಸ್ಯರು ಮತ್ತು ಸೊಳ್ಳೇಪುರ ಗ್ರಾಮಸ್ಥರ ವತಿಯಿಂದ ಕೆ ಸಿ ನಾರಾಯಣಗೌಡರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು..

ಕಾರ್ಯಕ್ರಮದಲ್ಲಿ ಮಾತನಾಡಿದ ರೇಷ್ಮೆ ಮತ್ತು ಯುವ ಸಬಲೀಕರಣ, ಕ್ರೀಡಾ ಸಚಿವರಾದ ಕೆ ಸಿ ನಾರಾಯಣಗೌಡ ರವರು ತಾಲ್ಲೂಕಿನ ಅಭಿವೃದ್ಧಿಯೇ ನನ್ನ ಗುರಿ ಇಂದು ಒಂದು ವರ್ಷದಲ್ಲಿ ತಾಲ್ಲೂಕಿನ ಮನೆ ಮನೆ ಬಾಗಿಲಿಗೆ ಕಾವೇರಿ ನದಿಯ ಶುದ್ದ ಕುಡಿಯುವ ನೀರು ಸರಬರಾಜು ಆಗಲಿದ್ದು ಶುದ್ದು ನೀರಿನಲ್ಲೇ ಸ್ನಾನ ಮಾಡುವ ಯೋಗ ನಮ್ಮದಾಗಲಿದೆ, ಅಲ್ಲದೆ ಸೊಳ್ಳೇಪುರ ಗ್ರಾಮದ ಸಮುದಾಯ ಭವನವನ್ನು ಪೂರ್ಣಗೊಳ್ಳಿಸುವ ಜವಾಬ್ದಾರಿ ಸಹ ನಾನೇ ತೆಗೆದುಕೊಳ್ತೀನಿ, ಮತ್ತು ಮುಂದಿನ ವಾರದಲ್ಲಿ ಸೊಳ್ಳೇಪುರ ಗ್ರಾಮದ ರಸ್ತೆ ಗುದ್ದಲಿ ಪೂಜೆ ನೇರವೇರಲಿದ್ದು ಶೀಘ್ರವಾಗಿ ರಸ್ತೆ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು

ಸೊಳ್ಳೇಪುರದ ಕೆಂಪೇಗೌಡ ಯುವಕರ ತಂಡವು ನಮ್ಮ ಊರಿಗೆ ಕ್ರೀಡಾಂಗಣ ಅಗತ್ಯವಿದ್ದು ಹೊಳ ಮತ್ತು ಹೊರ ಕ್ರೀಡಾಂಗಣವನ್ನು ನಿರ್ಮಿಸಿಕೊಡುವಂತೆ ಮನವಿ ಮಾಡಿದರು..

ಕೂಡಲೇ ಸ್ಪಂದಿಸಿದ ಸಚಿವರು ಮನವಿಯನ್ನು ಸ್ಪೀಕರಿಸಿ ಯುವ ಪೀಳಿಗೆಗಾಗಿ ಕ್ರೀಡಾಂಗಣವನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರುs

ಕಾರ್ಯಕ್ರಮದಲ್ಲಿ ಮೂಡಾ ಅಧ್ಯಕ್ಷ ವಾಸಣ್ಣ, ಜಿಲ್ಲಾ ಆಪ್ ಕಾಂಮ್ಸ್ ಅಧ್ಯಕ್ಷ ಕೆ.ಜಿ ತಮ್ಮಣ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಬೋರಾಪುರ ಮಂಜಣ್ಣ, ಬಿ.ಜೆ.ಪಿ ಜಿಲ್ಲಾ ಕಾರ್ಯದರ್ಶಿ ದಬ್ಬೇಘಟ್ಟ ಭರತ್, ಕಿಕ್ಕೇರಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೇಶವಮೂರ್ತಿ, ಪಿ.ಎಲ್.ಡಿ ಮಾಜಿ ಅದ್ಯಕ್ಷ ಮಾದಾಪುರ ಶೇಖರ್, ಕಿಕ್ಕೇರಿ ಗ್ರಾಮ ಪಂಚಾಯತಿ ಸದಸ್ಯ ಬಾಲಕೃಷ್ಣ, ಮುಖಂಡರಾದ ದಬ್ಬೇಘಟ್ಟ ಬಾಲು, ಶಿಕ್ಷಕ ಎಸ್ ಎನ್ ರವಿ ಕುಮಾರ್, ಅಂಕನಹಳ್ಳಿ ಶಿವಣ್ಣ, ಸೇರಿದಂತೆ ಸ್ಥಳೀಯ ಮುಖಂಡರು, ಗ್ರಾಮಸ್ಥರುಗಳು ಇದ್ದರು

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: