May 14, 2024

Bhavana Tv

Its Your Channel

ಕೆ ಆರ್ ಪೇಟೆ ತಾಲ್ಲೂಕು ವರ್ತಕರ ಸಂಘವು ಜುಲೈ-೧೦ರಿಂದ ಮಧ್ಯಾಹ್ನ ೪ಗಂಟೆಯ ನಂತರ ತಮ್ಮ ಅಂಗಡಿ- ಮುಂಗಟ್ಟುಗಳನ್ನು ಸ್ವಯಂ ಪ್ರೇರಿತ ಬಂದ್ ಮಾಡಲು ನಿರ್ಧಾರ

ಕೃಷ್ಣರಾಜಪೇಟೆ ; ಪಟ್ಟಣದ ಮಿನಿವಿಧಾನ ಸೌಧದ ಸಭಾಂಗಣದಲ್ಲಿ ತಹಸೀಲ್ದಾರ್ ಎಂ.ಶಿವಮರ‍್ತಿ ಅವರು ಇಂದು ಕರೆದಿದ್ದ ತಾಲೂಕು ರ‍್ತಕರ ಸಂಘದ ಸಭೆಯಲ್ಲಿ ರ‍್ತಕರು ಕೊರೋನಾ ಮಹಾಮಾರಿ ಸೋಂಕು ನಿಯಂತ್ರಿಸುವುದಕ್ಕಾಗಿ ಜನ ಸಾಮಾನ್ಯರ ಆರೋಗ್ಯದ ಹಿತದೃಷ್ಠಿಯಿಂದ ಬೆಳಿಗ್ಗೆ ೦೫ ಗಂಟೆಯಿಂದ ಸಂಜೆ ೪ಗಂಟೆವರೆಗೆ ಮಾತ್ರ ವ್ಯವಹಾರ ಮಾಡಿ ನಂತರ ೪ಗಂಟೆಯ ನಂತರ ಎಲ್ಲಾ ದಿನಸಿ ಅಂಗಡಿಗಳು, ಹರ‍್ಡ್ವೇರ್ ಅಂಗಡಿಗಳು, ಬಟ್ಟೆ ಅಂಗಡಿಗಳು ಸೇರಿದಂತೆ ಇತರೆ ಎಲ್ಲಾ ಅಂಗಡಿಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಕೊರೋನಾ ಸೋಂಕು ತಡೆಗೆ ಸಹಕಾರ ನೀಡಬೇಕು, ಶನಿವಾರ ವಾರವೂ ವ್ಯವಹಾರ ಮಾಡಲು ಅವಕಾಶವಿದೆ, ಆದರೆ ಭಾನುವಾರ ಜನತಾ ರ‍್ಪ್ಯೂ ಇರುತ್ತದೆ ಇದಕ್ಕೆ ತಾಲೂಕಿನ ರ‍್ತಕರು ಸಹಕಾರ ನೀಡಿದರೆ ಶೇ.೫೦ರಷ್ಟು ಜನ ಸಾಂದ್ರತೆಯನ್ನು ತಡೆಯಲು ಸಾಧ್ಯವಾಗುತ್ತದೆ. ಹಾಗಾಗಿ ರ‍್ತಕರು ಇದಕ್ಕೆ ಸಹಕಾರ ನೀಡಬೇಕು ಎಂದು ತಹಸೀಲ್ದಾರ್ ಎಂ.ಶಿವಮರ‍್ತಿ ಮತ್ತು ಸಬ್‌ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ ಅವರು ಮನವಿ ಮಾಡಿದರು.

ಈ ಮನವಿಗೆ ಸ್ಪಂದಿಸಿದ ತಾಲೂಕು ರ‍್ತಕರ ಸಂಘದ ಅಧ್ಯಕ್ಷ ಡಾ.ಕೆ.ಎಸ್.ರಾಜೇಶ್ ಮತ್ತು ಗೌರವಾಧ್ಯಕ್ಷ ಅರವಿಂದ್ ಕಾರಂತ್ ಅವರು ೪ಗಂಟೆಯ ನಂತರ ರ‍್ತಕರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಕೋರೋನಾ ಹಾವಳಿಗೆ ಕಡಿವಾಣ ಹಾಕಲು ಕೃಷ್ಣರಾಜಪೇಟೆ ತಾಲೂಕು ಆಡಳಿತಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ನಿಗಧಿತ ಅವಧಿಯಲ್ಲಿ ಅಂಗಡಿಗಳಿಗೆ ವ್ಯಾಪಾರಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕುಗಳನ್ನು ಧರಿಸಿ ಬಂದು ವ್ಯಾಪಾರ ಮಾಡಬೇಕು. ಮಾಸ್ಕು ಹಾಕದೇ ಇರುವ ಗ್ರಾಹಕರಿಗೆ ಯಾವುದೇ ಸಾಮಾನು ಕೊಡುವುದಿಲ್ಲ ಹಾಗಾಗಿ ಗ್ರಾಹಕರು ಕಡ್ಡಾಯವಾಗಿ ಮಾಸ್ಕುಗಳನ್ನು ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯವಹಾರ ಮಾಡಬೇಕು. ಹಾಗಾಗಿ ಕೊರೋನಾ ಸೋಂಕು ತಡೆಗೆ ಕೇವಲ ಸರಕಾರದಿಂದ ಮಾತ್ರ ಸಾಧ್ಯವಿಲ್ಲ ಜನ ಸಮುದಾಯ, ರ‍್ತಕರ ಸಹಕಾರ ತುಂಬಾ ಅಗತ್ಯವಿದೆ ಇದನ್ನು ಎಲ್ಲರೂ ರ‍್ಥ ಮಾಡಿಕೊಂಡು ತಾಲೂಕಿನ ಎಲ್ಲಾ ರ‍್ತಕರು ಸಂಜೆ ೪ಗಂಟೆಯ ನಂತರ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಕೋರೋನಾ ಸೋಂಕು ತಡೆಗೆ ನಮ್ಮ ಅಲ್ಪ ಕಾಣಿಕೆಯನ್ನು ಸಲ್ಲಿಸಬೇಕು ಎಂದು ತಾಲೂಕು ರ‍್ತಕರ ಸಂಘದ ಎಲ್ಲಾ ಸದಸ್ಯರು ಮನವಿ ಮಾಡಿದರು.

ಈಗಾಗಲೇ ತಾಲೂಕಿನ ಚಿನ್ನಬೆಳ್ಳಿ ರ‍್ತಕರು ಮಧ್ಯಾಹ್ನ ೦೨ ಗಂಟೆಯ ನಂತರ ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಕೊರೋನಾ ಸೋಂಕು ತಡೆಗೆ ಸಹಕಾರ ನೀಡುತ್ತಿದ್ದಾರೆ ಇದೇ ಎಲ್ಲಾ ರ‍್ತಕರು ಸಂಜೆ ೦೪ ಗಂಟೆಗೆ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಕೋರೋನಾ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ಡಾ.ರಾಜೇಶ್ ಮತ್ತು ಅರವಿಂದ್ ಕಾರಂತ್ ಮನವಿ ಮಾಡಿದರು.
ಈ ನಿಯಮಗಳು ಅಗತ್ಯ ಸೇವೆಗಳಾದ ಆಸ್ಪತ್ರೆ ಹಾಗೂ ಮೆಡಿಕಲ್ ಸ್ಟೊರ‍್ ಗಳಿಗೆ ಅನ್ವಯಿಸುವುದಿಲ್ಲ. ಈ ಎರಡು ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳನ್ನು ಸಂಜೆ ೪ಗಂಟೆಯವರೆಗ ಮಾತ್ರ ಲಭ್ಯವಿರುತ್ತದೆ. ನಂತರ ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಕೋರೋನಾ ವೈರಸ್ ನಿಯಂತ್ರಣಕ್ಕೆ ತಾಲೂಕು ಆಡಳಿತಕ್ಕೆ ಸಹಕಾರ ನೀಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ರ‍್ತಕರ ಸಂಘದ ಪದಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಪುರಸಭೆಯ ಮುಖ್ಯಾಧಿಕಾರಿ ಸತೀಶ್‌ಕುಮಾರ್, ಸಬ್‌ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ, ಸಚಿವರ ಆಪ್ತ ಸಹಾಯಕ ದಯಾನಂದ್, ಕೃಷ್ಣರಾಜಪೇಟೆ ತಾಲೂಕು ರ‍್ತಕರ ಸಂಘದ ಅಧ್ಯಕ್ಷ ಡಾ.ಕೆ.ಎಸ್.ರಾಜೇಶ್, ಕೆ.ಆರ್.ಚಂದ್ರಶೇಖರ್, ಕೆ.ಪಿ.ಜಯಂತ್, ಕೆ.ಎನ್.ರಮೇಶ್, ಕೆ.ಬಿ.ನಂದೀಶ್, ಹರಿಹರಪುರ ರಾಜೇಶ್, ನಾಗೇಂದ್ರ, ವರದರಾಜು, ಸೇರಿದಂತೆ ತಾಲೂಕು ರ‍್ತಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ವರದಿ: ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ.

error: