May 14, 2024

Bhavana Tv

Its Your Channel

ಸುಬಾಹು ಆ್ಯಾಪ್ ಬಳಕೆ ಕುರಿತು ಪುರಸಭೆಯ ಸದಸ್ಯರು ಹಾಗೂ ಪುರ ಪ್ರಮುಖರ ಸಭೆಯು ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು …

ಕೃಷ್ಣರಾಜಪೇಟೆ ; ಪಟ್ಟಣದ ಟೌನ್ ಪೋಲಿಸ್ ಠಾಣೆಯ ಆವರಣದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಕೊರೋನಾ ನಿಯಂತ್ರಣಕ್ಕಾಗಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಸುಬಾಹು ಆ್ಯಾಪ್ ಬಳಕೆ ಕುರಿತು ಪುರಸಭೆಯ ಸದಸ್ಯರು ಹಾಗೂ ಪುರ ಪ್ರಮುಖರ ಸಭೆಯು ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು …

ಕೃಷ್ಣರಾಜಪೇಟೆ ಪಟ್ಟಣವು ಮಂಡ್ಯ ಜಿಲ್ಲೆಯಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದ್ದು ಪಟ್ಟಣದಲ್ಲಿ ಸುಗಮ ಸಂಚಾರ, ಕಾನೂನು ಸುವ್ಯವಸ್ಥೆಯ ಪಾಲನೆ ಹಾಗೂ ಕೊರೋನಾ ಮಹಾಮಾರಿಯ ಅಟ್ಟಹಾಸವನ್ನು ಮಟ್ಟಹಾಕಿ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪುರಪ್ರಮುಖರು ಹಾಗೂ ಪುರಸಭೆಯ ಸದಸ್ಯರು ಪೋಲಿಸ್ ಇಲಾಖೆಯು ಜಾರಿಗೆ ತಂದಿರುವ ಸುಬಾಹು ಆ್ಯಾಪ್ ಬಗ್ಗೆ ತಿಳಿದುಕೊಂಡು ಅದನ್ನು ಸದ್ಬಳಕೆ ಮಾಡಿಕೊಂಡು ಮನೆಯ ಕಳ್ಳತನವಾಗುವುದನ್ನು ತಪ್ಪಿಸಬೇಕು ಎಂದು ಬ್ಯಾಟರಾಯಗೌಡ ಕಿವಿಮಾತು ಹೇಳಿದರು…
ಕೊರೋನಾ ಮಹಾಮಾರಿಯ ಅಟ್ಟಹಾಸವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಂಗಡಿ ಮುಂಗಟ್ಟುಗಳು ಹಾಗೂ ಹೋಟೆಲ್ ಗಳ ಮಾಲೀಕರು ಮಧ್ಯಾಹ್ನವೇ ತಮ್ಮ ವ್ಯಾಪಾರ, ವ್ಯವಹಾರವನ್ನು ಬಂದ್ ಮಾಡುವ ಜೊತೆಗೆ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸಿ ಕೈಗಳನ್ನು ತೊಳೆದುಕೊಳ್ಳುವುದು ಸೇರಿದಂತೆ ಅಗತ್ಯ ಆರೋಗ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಜನಜಾಗೃತಿ ಮೂಡಿಸಬೇಕು ಎಂದು ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ ಮನವಿ ಮಾಡಿದರು…

ಸಭೆಯಲ್ಲಿ ಪಿ.ಎಸ್.ಐ ತೊಳಜನಾಯಕ್, ಪುರಸಭೆಯ ಸದಸ್ಯರಾದ ಡಿ.ಪ್ರೇಮಕುಮಾರ್, ಹೆಚ್.ಡಿ.ಅಶೋಕ್, ಕೆ.ಆರ್.ರವೀಂದ್ರಬಾಬು, ಗಿರೀಶ್, ಶ್ರೀನಿವಾಸ್ ಕೇಸರಿ, ಶೋಭಾದಿನೇಶ್, ಗಿರೀಶ್, ಶಾಮಿಯಾನತಿಮ್ಮೇಗೌಡ, ಮುಖ್ಯಾಧಿಕಾರಿ ಸತೀಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ವರದಿ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ. ಮಂಡ್ಯಜಿಲ್ಲೆ.

error: