May 15, 2024

Bhavana Tv

Its Your Channel

ಕೊರೋನಾ ಯುದ್ಧದಲ್ಲಿ ಗೆದ್ದು ಕೊರೋನಾ ಸೋಂಕಿನಿAದ ಮುಕ್ತಗೊಂಡ ಪೌರಕಾರ್ಮಿಕರಿಗೆ ಪುರಸಭೆ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಕಛೇರಿ ವತಿಯಿಂದ ಹೃದಯಸ್ಪರ್ಶಿ ಸ್ವಾಗತ

ಕೃಷ್ಣರಾಜಪೇಟೆ ಪುರಸಭೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ 6ಜನರಿಗೆ ಕೊರೋನಾ ಪಾಸಿಟಿವ್ ಸೋಂಕು ಕಂಡುಬAದಿದ್ದು ಪುರಸಭೆ ಕಾರ್ಯಾಲಯವನ್ನು ಸೀಲ್ ಡೌನ್ ಮಾಡಿ ಆರು ಜನ ಪೌರಕಾರ್ಮಿಕರಿಗೆ ಮಂಡ್ಯದ ಮಿಮ್ಸ್ ಐಸೋಲೇಷನ್ ವಾರ್ಡಿನಲ್ಲಿ ಸೂಕ್ತವಾದ ಚಿಕಿತ್ಸೆಯನ್ನು ಕೊಡಿಸಿದ ಹಿನ್ನೆಲೆಯಲ್ಲಿ ಎಲ್ಲರೂ ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ.
ಪಟ್ಟಣದ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಹಾಗೂ ಪುರಸಭೆಯ ಕಾರ್ಯಾಲಯದ ಆವರಣದಲ್ಲಿ ಗುಣಮುಖರಾಗಿ ಹಿಂದಿರುಗಿದ ಪೌರಕಾರ್ಮಿಕರಿಗೆ ಪುಷ್ಪವೃಷ್ಠಿ ಮಾಡಿ, ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಮನೆಗೆ ಕಳಿಸಿಕೊಡಲಾಯಿತು.
ಕೊರೋನಾ ಸೋಂಕಿತರನ್ನು ಕೀಳಾಗಿ ಕಾಣಬೇಡಿ..
ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್ ಮಾತನಾಡಿ ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ತಮ್ಮ ಜೀವದ ಹಂಗುತೊರೆದು ದುಡಿಯುತ್ತಿರುವ ಪೌರಕಾರ್ಮಿಕರ ಸೇವೆಯು ಅಪಾರವಾಗಿದೆ. ಕ್ವಾರಂಟೈನ್ ಸ್ಥಾನಿಕ ಕೇಂದ್ರಗಳ ಸ್ವಚ್ಛತೆ, ಸ್ಯಾನಿಟೈಸರ್ ಸಿಂಪಡಣೆ ಸೇರಿದಂತೆ ಕೊರೋನಾ ಪೀಡಿತರ ಸೇವೆಯನ್ನು ಮಾಡುವ ಪೌರಕಾರ್ಮಿಕರಿಗೆ ಆಕಸ್ಮಿಕವಾಗಿ ಕೊರೋನಾ ಸೋಂಕು ತಗುಲಿದೆ. ಪೌರಕಾರ್ಮಿಕರು ಚಿಕಿತ್ಸೆಯನ್ನು ಪಡೆದುಕೊಂಡು ಗುಣಮುಖರಾಗಿ ಹಿಂದಿರುಗಿದ್ದಾರೆ. ಮನೆಗೆ ಮರಳಿರುವ ಪೌರಕಾರ್ಮಿಕರನ್ನು ಹೀಯಾಳಿಸಿ ಅಪಮಾನಿಸಿ, ಕೀಳಾಗಿಕಂಡು ಅವರ ಬದುಕುವ ಹಕ್ಕಿಗೆ ಧಕ್ಕೆ ತಂದರೆ ನಿರ್ಧಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸತೀಶ್ ಕುಮಾರ್ ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೌಳಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಿವಪ್ಪ, ತಾಲ್ಲೂಕು ಸಮಾಜಕಲ್ಯಾಣಾಧಿಕಾರಿ ಡಾ.ಮನುಕುಮಾರ್, ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್, ಸಚಿವ ನಾರಾಯಣಗೌಡರ ಆಪ್ತಸಹಾಯಕರಾದ ದಯಾನಂದ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಿವಮ್ಮ, ಹಿರಿಯ ಆರೋಗ್ಯ ಪರಿವೀಕ್ಷಕ ಶೀಳನೆರೆ ಸತೀಶ್ ಮತ್ತಿತರರು ಉಪಸ್ಥಿತರಿದ್ದರು..

ವರದಿ. ಕೆ.ಆರ್.ನೀಲಕಂಠ.
ಕೃಷ್ಣರಾಜಪೇಟೆ. ಮಂಡ್ಯ.

error: