May 16, 2024

Bhavana Tv

Its Your Channel

ಕೃಷ್ಣರಾಜಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಭೂವೈಕುಂಠ ವರಹನಾಥ ಕಲ್ಲಹಳ್ಳಿಯಲ್ಲಿ ವಿಶೇಷ ಪೂಜೆ ಪುರಸ್ಕಾರಗಳು ನಡೆದವು.

ಕೃಷ್ಣರಾಜಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಭೂವೈಕುಂಠ ವರಹನಾಥ ಕಲ್ಲಹಳ್ಳಿಯಲ್ಲಿ ವಿಶೇಷ ಪೂಜೆ ಪುರಸ್ಕಾರಗಳು ನಡೆದವು.

ಮೈಸೂರಿನ ಬ್ರಹ್ಮತಂತ್ರ ಸ್ವತಂತ್ರ ಪರಕಾಲಸ್ವಾಮಿ ಮಠದ ಸ್ವಾಮೀಜಿಗಳ ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.
ಮಹಾಮಾರಿ ಕೊರೋನಾ ಅಟ್ಟಹಾಸವನ್ನು ಮಟ್ಟಹಾಕಿ ಆರೋಗ್ಯವಂತ ಸಮಾಜವು ನಿರ್ಮಾಣವಾಗಲಿ, ಲೋಕಕಲ್ಯಾಣವಾಗಲಿ ಎಂದು ಭೂದೇವಿಸಮೇತನಾಗಿ ನೆಲೆನಿಂತು ಬೇಡಿಬಂದ ಭಕ್ತರನ್ನು ಹರಸಿ ಸಲಹುತ್ತಿರುವ ವರಹನಾಥಸ್ವಾಮಿಗೆ ಪ್ರಾರ್ಥನೆ ಸಲ್ಲಿಸಲಾಯಿತು…
ದೇಶದಲ್ಲಿಯೇ ಅಪರೂಪದ್ದಾಗಿರುವ 16ಅಡಿ ಎತ್ತರದ ಸಾಲಿಗ್ರಾಮ ಕೃಷ್ಣಶಿಲೆಯ ಭೂವರಾಹಸ್ವಾಮಿಯ ವಿಗ್ರಹವು ಅಪೂರ್ವವಾಗಿದ್ದು ಭಕ್ತರ ಪ್ರಮುಖ ಆಕರ್ಷಕ ಶ್ರದ್ಧಾ ಕೇಂದ್ರವಾಗಿದೆ.
ರೇವತಿ ನಕ್ಷತ್ರದಲ್ಲಿ ಭೂವರಾಹಸ್ವಾಮಿಯು ಜನಿಸಿದ್ದರಿಂದ ಸ್ವಾಮಿಗೆ ಒಂದು ಸಾವಿರ ಲೀಟರ್ ಹಾಲು, ಐನೂರು ಲೀಟರ್ ಕಬ್ಬಿನ ಹಾಲು, ಐನೂರು ಲೀಟರ್ ಎಳನೀರು, ಪವಿತ್ರ ಗಂಗಾಜಲ, ಜೇನುತುಪ್ಪ, ಶ್ರೀಗಂಧ, ಅರಿಶಿನ ಸೇರಿದಂತೆ ತಾವರೆ, ಮಲ್ಲಿಗೆ, ಜಾಜಿ, ಗುಲಾಬಿ, ಲಿಲ್ಲಿ, ಸಂಪಿಗೆ, ಕನಕಾಂಬರ, ಸುಗಂಧರಾಜ, ಪವಿತ್ರ ಸಸ್ಯಗಳ ಎಲೆಗಳು, ತುಳಸಿ, ಪತ್ರೆಗಳು ಸೇರಿದಂತೆ 58ಬಗೆಯ ಅಪರೂಪದ ಪುಷ್ಪಗಳಿಂದ ಭಕ್ತಿನಮನ ಸಲ್ಲಿಸಲಾಯಿತು.
ತಮ್ಮ ಇಳಿವಯಸ್ಸಿನಲ್ಲೂ ನವಯುವಕರು ನಾಚುವಂತೆ ಪರಕಾಲಮಠದ ಶ್ರೀಗಳು ಭೂವರಾಹಸ್ವಾಮಿಯನ್ನು ಹದಿನಾರು ಸುತ್ತು ಪ್ತದಕ್ಷಣೆ ಹಾಕಿ ವಿಶೇಷವಾಗಿ ಪೂಜಿಸಿ ಪ್ರಾರ್ಥನೆ ಸಲ್ಲಿಸಿದ್ದು ವಿಶೇಷವಾಗಿತ್ತು.

ರಾಜ್ಯದ ಮಾಜಿಸಚಿವ ಅರವಿಂದಲಿAಬಾವಳಿ ದಂಪತಿಗಳು, ಗ್ರಾಮಾಂತರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಡಿ.ಲಕ್ಷ್ಮಣ್, ಸರ್ಕಲ್ ಇನ್ಸ್ ಪೆಕ್ಟರ್ ಸುಧಾಕರ್, ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್, ತಾಲ್ಲೂಕು ಸಮಾಜಕಲ್ಯಾಣಾಧಿಕಾರಿ ಡಾ.ಮನುಕುಮಾರ್, ಜಿ.ಪಂ ಮಾಜಿಅಧ್ಯಕ್ಷ ಆರ್.ಕೆ.ಕುಮಾರ್, ತಾಲ್ಲೂಕು ಬಿಜೆಪಿ ಮುಖಂಡ ಕೆ.ಆರ್.ಹೇಮಂತಕುಮಾರ್, ಈ ಭಾಗದ ಮುಖಂಡರಾದ ಗಂಜಿಗೆರೆ ಶಿವಣ್ಣ, ಬೂಕಹಳ್ಳಿ ಚಂದ್ರಪ್ಪ, ಚಲನಚಿತ್ರ ನಿರ್ಮಾಪಕ ಸೂರಪ್ಪಬಾಬು, ಉದ್ಯಮಿ ರವಿತೇಜ, ನವೀನ್ ಸೇರಿದಂತೆ ಭಕ್ತಸಾಗರವೇ ಶ್ರೀ ಕ್ಷೇತ್ರಕ್ಕೆ ಹರಿದುಬಂದಿತ್ತು. ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಭಕ್ತರ ಮುಖಕ್ಕೆ ಮಾಸ್ಕ್ ಹಾಕಿಸಿದ ನಂತರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮ್ಯಾನೇಜಿಂಗ್ ಟ್ರಸ್ಟಿಗಳಾದ ಶ್ರೀನಿವಾಸರಾಘವನ್, ನಾಗೇಶರಾವ್ ಪೂಜಾವಿಧಿವಿಧಾನಗಳ ನೇತೃತ್ವ ವಹಿಸಿದ್ದರು. ವೇದಬ್ರಹ್ಮ ಗೋಪಾಲಕೃಷ್ಣ ಅವಧಾನಿಗಳು ಮತ್ತು ಶ್ರೀನಿಧಿ ತಂಡದ ನೇತೃತ್ವದಲ್ಲಿ ಆಗಮಿಕರು ಪೂಜೆ ಸಲ್ಲಿಸಿದರು.

ಶ್ರಾವಣ ಮಾಸದಲ್ಲಿ ಸಚಿವ ಡಾ.ನಾರಾಯಣಗೌಡರ ನೇತೃತ್ವದಲ್ಲಿ ಶ್ರೀಕ್ಷೇತ್ರದಲ್ಲಿ ಒಂದುಲಕ್ಷ ಜಪಯಜ್ಞ ಹಾಗೂ ನರಸಿಂಹ ಹೋಮ ನಡೆಸಿ ಕೊರೋನಾ ನಿರ್ಮೂಲನೆಗಾಗಿ ಲೋಕ ಕಲ್ಯಾಣಾರ್ಥವಾಗಿ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ಶ್ರೀನಿವಾಸರಾಘವನ್ ತಿಳಿಸಿದರು.
ಶ್ರೀಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ವರದಿ. ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.

error: