May 11, 2024

Bhavana Tv

Its Your Channel

ಕೃಷ್ಣರಾಜಪೇಟೆ ತಾಲೂಕು ಬ್ರಾಹ್ಮಣ ಮಹಾಸಭಾ ಹಾಗೂ ಕೆ.ಆರ್.ಪೇಟೆ ತಾಲೂಕು ಬ್ರಾಹ್ಮಣ ಪುರೋಹಿತರ ಅರ್ಚಕರ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಉದ್ಘಾಟಿಸಿದ ;ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರಾದ ಡಾ.ಭಾನುಪ್ರಕಾಶಶರ್ಮ

ಮಂಡ್ಯ: ಬ್ರಾಹ್ಮಣ ಎನ್ನವುದು ಕೇವಲ ಒಂದು ಜಾತಿಯ ಹೆಸರಲ್ಲ..ಬ್ರಾಹ್ಮಣ ಎನ್ನುವುದು ನಮ್ಮ ಸಂಸ್ಕೃತಿ ಪರಂಪರೆಯ ಪ್ರತಿಬಿಂಬವಾಗಿದೆ. ತ್ರಿಮಸ್ಥ ಬ್ರಾಹ್ಮಣರು ಒಂದಾಗಿ ಸಂವಿಧಾನಬದ್ಧ ಸವಲತ್ತುಗಳನ್ನು ಪಡೆದುಕೊಂಡು ಅಭಿವೃದ್ಧಿಯ ಪಥದತ್ತ ಸಾಗಬೇಕು.. ಬ್ರಾಹ್ಮಣರ ಕಲ್ಯಾಣ ಹಾಗೂ ಅಭಿವೃದ್ಧಿಗಾಗಿ ಸರ್ಕಾರವು ಬ್ರಾಹ್ಮಣ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಿದೆ ಎಂದು ಶ್ರೀರಂಗಪಟ್ಟಣದ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿಯ ಅಧ್ಯಕ್ಷ ಹಾಗೂ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರಾದ ಡಾ.ಭಾನುಪ್ರಕಾಶಶರ್ಮ ಹೇಳಿದರು .ಅವರು ಕೃಷ್ಣರಾಜಪೇಟೆ ಪಟ್ಟಣದಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾ ಹಾಗೂ ಕೆ.ಆರ್.ಪೇಟೆ ತಾಲೂಕು ಬ್ರಾಹ್ಮಣ ಪುರೋಹಿತರ ಅರ್ಚಕರ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಪದಾಧಿಕಾರಿಗಳ ಪದಗ್ರಹಣ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಕೆ.ಆರ್.ಪೇಟೆ ತಾಲೂಕು ಬ್ರಾಹ್ಮಣ ಮಹಾಸಭಾದ ವತಿಯಿಂದ ತಮಗೆ ನೀಡಿದ ಆತ್ಮೀಯ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

ರಾಜ್ಯದಾದ್ಯಂತ ಮೂರು ಗುಂಪುಗಳಾಗಿರುವ ತ್ರಿಮತಸ್ಥರಾಗಿರುವ ಬ್ರಾಹ್ಮಣ ಸಮಾಜದ ಬಂಧುಗಳು ಸರ್ಕಾರದಿಂದ ಸೌಲಭ್ಯಗಳನ್ನು ಪಡೆಯಲು ನಾವೆಲ್ಲರೂ ಬ್ರಾಹ್ಮಣರು, ನಾವೆಲ್ಲರೂ ಒಂದು ಎಂಬ ಭಾವನೆಯನ್ನು ಬೆಳೆಸಿಕೊಂಡು ಜಾತಿ ಕಾಲಂನಲ್ಲಿ ಬ್ರಾಹ್ಮಣರು ಎಂದೇ ನಮೂದಿಸಿ ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡು ಸಂಘಟಿತರಾಗಬೇಕು ಎಂದು ಮನವಿ ಮಾಡಿದ ಡಾ.ಭಾನುಪ್ರಕಾಶಶರ್ಮ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಬ್ರಾಹ್ಮಣ ಸಮಾಜದ ಅಭಿವೃದ್ಧಿಗೆ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು ಅನುಷ್ಠಾನಗೊಳಿಸಲು ಬದ್ಧವಾಗಿದೆ. ಬ್ರಾಹ್ಮಣರು ಆಗಮ ಹಾಗೂ ವೇದ ಮಂತ್ರವನ್ನು ಕಲಿತು ಶಾಸ್ತ್ರೋಕ್ತವಾಗಿ ಪೂಜೆ ಪುರಸ್ಕಾರಗಳನ್ನು ಮಾಡುವುದನ್ನು ಕಲಿಯಬೇಕು.. ಈ ದಿಕ್ಕಿನಲ್ಲಿ ಬ್ರಾಹ್ಮಣರಿಗೆ ಪೂಜೆ ಪುರಸ್ಕಾರಗಳು ಹಾಗೂ ಆಗಮವನ್ನು ಕಲಿಸಿಕೊಡಲು ಒಂದು ತಿಂಗಳ ಅರ್ಚಕ ತರಬೇತಿ ಶಿಬಿರವನ್ನು ನಡೆಸಲು ಮುಂದಾಗಿದೆ ಎಂದು ವಿವರಿಸಿದರು.ವೃತ್ತಿ ಕೌಶಲ್ಯ ಹಾಗೂ ಹಪ್ಪಳ ಸಂಡಿಗೆ, ಉಪ್ಪಿನಕಾಯಿ ತಯಾರಿಕೆ ಸೇರಿದಂತೆ ಗುಡಿಕೈಗಾರಿಕೆಯ ಬಗ್ಗೆ ಅನುಭವ ಹೊಂದಿರುವ ಬ್ರಾಹ್ಮಣ ಮಹಿಳೆಯರಿಗೆ ನಿಗಮದಿಂದ ಸಾಲಸೌಲಭ್ಯವನ್ನು ನೀಡಲಾಗುವುದು. ಸಮಾಜದ ಮಕ್ಕಳು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದಿರುವವರನ್ನು ಗುರ್ತಿಸಿ ನಗಧು ಬಹುಮಾನ ನೀಡಿ ಸನ್ಮಾನಿಸಿ ಗೌರವಿಸಲಾಗುವುದು. ಐಎಎಸ್, ಐಪಿಎಸ್ ಮತ್ತು ಕೆಎಎಸ್ ಪರೀಕ್ಷೆಯನ್ನು ಎದುರಿಸಲು ಸಿದ್ಧರಿರುವ ಪ್ರತಿಭಾವಂತರನ್ನು ಗುರುತಿಸಿ ತರಬೇತಿ ಕೊಡಿಸಲಾಗುವುದು. ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ನಾಡಿನ ಸಮಸ್ತ ಬ್ರಾಹ್ಮಣ ಬಂಧುಗಳ ಕಲ್ಯಾಣ ಹಾಗೂ ಅಭಿವೃದ್ಧಿಗೆ ಬದ್ಧವಾಗಿದೆ. ಆದ್ದರಿಂದ ಬ್ರಾಹ್ಮಣ ಸಮುದಾಯದ ಬಂಧುಗಳು ಸಾಮಾಜಿಕ ಕಟ್ಟುಪಾಡುಗಳು ಹಾಗೂ ಮೌಡ್ಯದಿಂದ ಹೊರಬಂದು ತಮ್ಮ ಜೀವನದಲ್ಲಿ ಉತ್ತಮವಾದ ಸಂಸ್ಕಾರವನ್ನು ಅಳವಡಿಸಿಕೊಂಡು ಅಭಿವೃದ್ಧಿಯ ಪಥದತ್ತ ಸಾಗಬೇಕು ಎಂದು ಕರೆ ನೀಡಿದರು.

ಮಂಡ್ಯ ಜಿಲ್ಲಾ ಬ್ರಾಹ್ಮಣ ಅರ್ಚಕರು ಹಾಗೂ ಪುರೋಹಿತರ ಪರಿಷತ್ ಅಧ್ಯಕ್ಷ ಉಪೇಂದ್ರಶರ್ಮ, ಕೆ.ಆರ್.ಪೇಟೆ ತಾಲೂಕು ಘಟಕದ ಅಧ್ಯಕ್ಷ ಅನಿಲ್ ಶಾಸ್ತ್ರಿ, ಸಾಂಸ್ಕೃತಿ ಸಂಘಟಕರಾದ ಗೋಪಾಲಕೃಷ್ಣ ಅವಧಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿನಂದನೆಯನ್ನು ಸ್ಬೀಕರಿಸಿ ಮಾತನಾಡಿದರು..

ಬ್ರಾಹ್ಮಣರಿಗೆ ಅಸಂಘಟಿತ ಕಾರ್ಮಿಕರ ಗುರುತಿನ ಚೀಟಿ,ಜಾತಿ ಪ್ರಮಾಣ ಪತ್ರ. ರಾಜ್ಯದಲ್ಲಿ ೭೦ಲಕ್ಷಕ್ಕೂ ಹೆಚ್ಚಿರುವ ಬ್ರಾಹ್ಮಣ ಸಮಾಜದ ಬಂಧುಗಳಿಗೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಮನವಿಯ ಮೇರೆಗೆ ಕಾರ್ಮಿಕ ಇಲಾಖೆಯ ವತಿಯಿಂದ ಅಸಂಘಟಿತ ಕಾರ್ಮಿಕರೆಂದು ಗುರುತಿಸಿ ಗುರುತಿನ ಚೀಟಿಯನ್ನು ನೀಡಿ ಕಾರ್ಮಿಕ ಇಲಾಖೆಯ ವತಿಯಿಂದ ದೊರೆಯುವ ಸೌಲಭ್ಯಗಳನ್ನು ನೀಡಲು ಕಾರ್ಮಿಕ ಸಚಿವ ಅರೆಬೈಲ್ ಶಿವರಾಮಹೆಗಡೆ ಒಪ್ಪಿದ್ದಾರೆ..ಅಸಂಘಟಿತ ಕಾರ್ಮಿಕರ ಗುರುತಿನ ಚೀಟಿ ಹಾಗೂ ಬ್ರಾಹ್ಮಣ ಸಮಾಜಕ್ಕೆ ಆಧಾಯ ಜಾತಿ ಪ್ರಮಾಣ ಪತ್ರ ಕೊಡಿಸಲು ಮಂಡಳಿಯು ಮುಂದಾಗಿದೆ ಎಂದು ಡಾ.ಭಾನುಪ್ರಕಾಶಶರ್ಮ ಹೇಳಿದರು..

ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅರವಿಂದ ಕಾರಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.. ಎಸ್.ಎಸ್.ಎಲ್.ಸಿ, ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿ ಸಾಧನೆ ಮಾಡಿರುವ ಸಮಾಜದ ಮಕ್ಕಳನ್ನು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಿಸಲಾಯಿತು. ಎಂಜಿನಿಯರಿAಗ್ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿನಿ ಅಮೃತವರ್ಷಿಣಿಗೆ ಸಮಾಜದ ವತಿಯಿಂದ ೩೪ಸಾವಿರ ನಗಧು ಹಣನೀಡಲಾಯಿತು..

ಇದೇ ಸಂದರ್ಭದಲ್ಲಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಡಾ.ಭಾನುಪ್ರಕಾಶಶರ್ಮ, ಜಿಲ್ಲಾ ಬ್ರಾಹ್ಮಣ ಪುರೋಹಿತರು ಅರ್ಚಕರ ಪರಿಷತ್ ಅಧ್ಯಕ್ಷ ಉಪೇಂದ್ರ ಶರ್ಮ, ತಾಲೂಕು ಅಧ್ಯಕ್ಷ ಅನಿಲ್ ಶಾಸ್ತ್ರಿ, ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅರವಿಂದಕಾರAತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು ..

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪರಿಷತ್ ಜಿಲ್ಲಾ ಕಾರ್ಯದರ್ಶಿ ಚಂದ್ರು, ತಾಲೂಕು ಕಾರ್ಯದರ್ಶಿ ರೋಹಿತ್ ಶರ್ಮಾ , ತಾಲೂಕು ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ರಘುರಾಮನಾಡಿಗ್, ಕಾರ್ಯದರ್ಶಿ ಸುಬ್ಬನರಸಿಂಹ, ಕುಪ್ಪಳ್ಳಿ ಸುಬ್ರಹ್ಮಣ್ಯ, ಕೆ.ಆರ್.ಹರೀಶ್,ಸಂಧ್ಯಮಾತಾoಡ, ಬಲ್ಲೇನಹಳ್ಳಿ ಶಶಿಧರ್, ಸುಮಾಶ್ರೀನಿವಾಸ್, ಎನ್.ವಿಶ್ವನಾಥ್, ಮುರುಗೇಶ್, ಜಯಸಿಂಹ, ಅಕ್ಕಿಹೆಬ್ಬಾಳು ರಾಮಕೃಷ್ಣ, ಶಿವಪ್ರಸಾದ್, ಮಾದಾಪುರ ಶ್ರೀಕಾಂತ್, ಬೇಲದಕೆರೆ ಸುಬ್ರಹ್ಮಣ್ಯ, ಆರ್ ಮೋದೂರು ಶ್ರೀಧರ, ಸಾಹಿತಿಗಳಾದ ಬಲ್ಲೇನಹಳ್ಳಿ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.

error: