May 12, 2024

Bhavana Tv

Its Your Channel

ಸಾಲದ ಬಾಧೆ ತಾಳಲಾರದೆ ವಿಷಕುಡಿದು ರೈತ ಆತ್ಮಹತ್ಯೆ

ಮಂಡ್ಯ: ಸಾಲದ ಬಾಧೆ ತಾಳಲಾರದೆ ವಿಷ ಕುಡಿದು ಪ್ರಗತಿಪರ ರೈತನಾದ ಪುಟ್ಟಸ್ವಾಮಿಗೌಡ ಸಾವಿಗೆ ಶರಣಾದ ಘಟನೆಯು ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಆಲೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು,.ಕೆ.ಆರ್.ಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಲೇನಹಳ್ಳಿ ಗ್ರಾಮದ ಪುಟ್ಟೇಗೌಡರ ಮಗನಾದ ರೈತ ಪುಟ್ಟಸ್ವಾಮಿಗೌಡ(೬೮) ೩ಎಕರೆ ಹೊಲವನ್ನು ಹೊಂದಿದ್ದು, ಆಲೇನಹಳ್ಳಿ ಗ್ರಾಮದ ಕಾವೇರಿ ಗ್ರಾಮೀಣ ಬ್ಯಾಂಕಿನಿAದ ೩ಲಕ್ಷರೂ ಹಾಗೂ ಸಾರ್ವಜನಿಕರಿಂದ ಎರಡು ಲಕ್ಷರೂ ಕೈಸಾಲ ಮಾಡಿ ಎರಡು ಬೋರ್ ವೆಲ್ ಗಳನ್ನು ಕೊರೆಸಿ ಕಬ್ಬು ಮತ್ತು ಬಾಳೆ ಬೆಳೆಯ ಬೇಸಾಯ ಮಾಡಿದ್ದರು.. ಬೋರ್ ವೆಲ್ ಗಳಲ್ಲಿ ಅಂತರ್ಜಲ ಕುಸಿದು ನೀರಿಲ್ಲದೇ ಬಾಳೆ ಮತ್ತು ಕಬ್ಬಿನ ಬೆಳೆಯು ಒಣಗಿ ನಷ್ಠವಾದ ಹಿನ್ನೆಲೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡ ಪುಟ್ಟಸ್ವಾಮಿಗೌಡ ತಮ್ಮ ಜಮೀನಿನ ಬಳಿ ವಿಷ ಕುಡಿದು ಸಾವಿಗೆ ಶರಣಾಗಿದ್ದಾರೆ…ಮೃತರು ಪತ್ನಿ ರಂಗಮ್ಮ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಸಾಲದ ಬಾಧೆ ತಾಳಲಾರದೆ ವಿಷ ಕುಡಿದು ತನ್ನ ಪತಿ ಸಾವಿಗೆ ಶರಣಾಗಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ರಂಗಮ್ಮ ಕೆ.ಆರ್.ಪೇಟೆ ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.. ಕೆ.ಆರ್.ಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತ ರೈತ ಪುಟ್ಟಸ್ವಾಮಿಗೌಡರ ದೇಹದ ಮರಣೋತ್ತರ ಪರೀಕ್ಷೆಯು ನಡೆಯಿತು..

ಪ್ರಗತಿಪರ ರೈತರಾದ ಪುಟ್ಟಸ್ವಾಮಿಗೌಡರ ಅಕಾಲಿಕ ನಿಧನಕ್ಕೆ ಎಪಿಎಂಸಿ ಮಾಜಿಅಧ್ಯಕ್ಷ ಆಲೇನಹಳ್ಳಿ ಮಹೇಶ್ ತೀವ್ರ ಸಂತಾಪ ಸೂಚಿಸಿದ್ದು ತಾಲೂಕು ಆಡಳಿತ ಹಾಗೂ ರಾಜ್ಯ ಸರ್ಕಾರವು ಮೃತರ ಕುಟುಂಬಕ್ಕೆ ಪರಿಹಾರ ನೀಡಿ ನೊಂದ ಕುಟುಂಬಕ್ಕೆ ಸಹಾಯ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ವರದಿ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: