May 12, 2024

Bhavana Tv

Its Your Channel

ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಯ ಅಡಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಸಚಿವ ಡಾ.ನಾರಾಯಣಗೌಡ .

ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಸಾರಂಗಿ, ಜಾಗಿನಕೆರೆ ಗ್ರಾಮಗಳಲ್ಲಿ ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಯ ಅಡಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ರಾಜ್ಯದ ತೋಟಗಾರಿಕೆ, ರೇಷ್ಮೆ, ಪೌರಾಡಳಿತ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ..

ನಾನು ಕೈಗೋನಹಳ್ಳಿ ಗ್ರಾಮದಲ್ಲಿ ಜನಿಸಿದ್ದರೂ ನನ್ನ ಬಾಲ್ಯ ಕಳೆದಿದ್ದು ಸಾರಂಗಿ ಮತ್ತು ಜಾಗಿನಕೆರೆಯಲ್ಲಿ ಆದ್ದರಿಂದ ಗ್ರಾಮಸ್ಥರ ಬೇಡಿಕೆಯಂತೆ ಬಾಲ್ಯದ ಸವಿನೆನಪಿಗಾಗಿ ಸಾರಂಗಿ ಗ್ರಾಮಕ್ಕೆ ಪಶುವೈದ್ಯ ಆಸ್ಪತ್ರೆಯನ್ನು ಮಂಜೂರು ಮಾಡಿಸಿದ್ದೇನೆ ಎಂದು ಹೇಳಿದರು.

ಸಾರಂಗಿ ಮತ್ತು ಜಾಗಿನಕೆರೆ ಗ್ರಾಮದ ಜನತೆಗೆ ಮೂಲಭೂತ ಸೌಲಭ್ಯವನ್ನು ಕಲ್ಪಿಸಲು ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯ ಅಡಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಸಾರಂಗಿ ಗ್ರಾಮದಲ್ಲಿ ೧೫ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿಶಾಲೆಯ ಭವ್ಯ ಕಟ್ಟಡವು ನಿರ್ಮಾಣವಾಗಿದೆ. ವಿದ್ಯೆಯ ಜ್ಞಾನದ ಬೆಳಕಿನ ಶಕ್ತಿಯು ಯಾರೂ ಕದಿಯಲಾಗದ ಆಸ್ತಿಯಾಗಿರುವುದರಿಂದ ಗ್ರಾಮೀಣ ಪ್ರದೇಶದ ಜನರು ಹೆಣ್ಣುಗಂಡು ಎಂದು ಬೇಧಭಾವ ಮಾಡದೇ ನಿಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿ ಮಾಡಿಸಿ ಸಾಧನೆ ಮಾಡುವಂತೆ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು..

ಬರಪೀಡಿತ ಸಂತೇಬಾಚಹಳ್ಳಿ ಹೋಬಳಿಯ ಕೆರೆ ಕಟ್ಟೆಗಳನ್ನು ಹೇಮಾವತಿ ನದಿಯ ಪಕ್ಕದಲ್ಲಿರುವ ಗೂಡೆಹೊಸಳ್ಳಿ ಏತನೀರಾವರಿ ಯೋಜನೆಯ ಮೂಲಕ ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನವೊಲಿಸಿ ೨೧೨ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸಿ ೪೦ ವರ್ಷಗಳ ಹೋಬಳಿಯ ಸಮಸ್ಯೆಗೆ ಪರಿಹಾರ ಕಂಡುಹಿಡಿದಿದ್ದೇನೆ ಎಂದು ಸಚಿವ ನಾರಾಯಣಗೌಡ ಹೇಳಿದರು.
ಗ್ರಾಮಾಭಿವೃದ್ಧಿಗೆ ಒಂದಾಗಿ ಕೆಲಸ ಮಾಡೋಣ, ನೆನಗುದಿಗೆ ಬಿದ್ದಿರುವ ಸಾರಂಗಿ ಗ್ರಾಮದ ಸಮುದಾಯ ಭವನವನ್ನು ಇನ್ನಾರು ತಿಂಗೆ ಸಂಪೂರ್ಣಗೊಳಿಸಿ ಲೋಕಾರ್ಪಣೆ ಮಾಡಿಸುತ್ತೇನೆ. ಗ್ರಾಮದ ಅಭಿವೃದ್ಧಿಯ ವಿಚಾರದಲ್ಲಿ ರಾಜಕಾರಣ ಮಾಡುವುದು ಬೇಡ, ನಾನು ಮತಕೇಳಲು ನಿಮ್ಮ ಬಳಿ ಬಂದಿಲ್ಲ..ನನ್ನದು ಅಭಿವೃದ್ಧಿಯ ಮೂಲಮಂತ್ರವಾಗಿದೆ. ಕಳೆದ ಉಪಚುನಾವಣೆಯ ಸಂದರ್ಭದಲ್ಲಿ ನನ್ನನ್ನು ಬಯ್ದವರು, ಸೋಲಿಸಲು ಪ್ರಯತ್ನಪಟ್ಟವರು ಈಗ ನನ್ನ ಬಳಿ ಬಂದು ಕೆಲಸ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಮಾತ್ರ ರಾಜಕಾರಣ ಮಾಡಿ ಉಳಿದಂತೆ ಎಲ್ಲರೂ ಭಿನ್ನಮತ ಮರೆತು ಪಕ್ಷಾತೀತವಾಗಿ ಗ್ರಾಮದ ಅಭಿವೃದ್ಧಿಗೆ ದುಡಿಯೋಣ ಎಂದು ಸಚಿವ ಡಾ.ನಾರಾಯಣಗೌಡ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿಸದಸ್ಯ ಅಘಲಯಮಂಜುನಾಥ್, ಸಾರಂಗಿ ಗ್ರಾಮ ಪಂಚಾಯತಿ ಮಾಜಿಅಧ್ಯಕ್ಷ ನಂಜುAಡೇಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್, ತಾಲೂಕು ಪಂಚಾಯತಿ ಮಾಜಿಸದಸ್ಯ ಬಿಲ್ಲೇನಹಳ್ಳಿ ಕುಮಾರ್, ರೈತಮೋರ್ಚಾ ಅಧ್ಯಕ್ಷ ಶಿವರಾಮೇಗೌಡ, ಓಬಿಸಿ ಮೋರ್ಚಾ ಅಧ್ಯಕ್ಷ ಸಾರಂಗಿನಾಗರಾಜು, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಕುಮಾರ್, ಮುಖಂಡರಾದ ಮಂಜೇಗೌಡ, ಮುದ್ದೇಗೌಡ, ಸಾರಂಗಿ ಗ್ರಾಮ ಪಂಚಾಯತಿ ಆಡಳಿತಾಧಿಕಾರಿ ಮಂಜುನಾಥ್, ಪಿಡಿಓ ಯೋಗೇಶ್, ಮಾಮಪ್ರವೀಣ್, ಜಾಲತಾಣ ವಿಭಾಗದ ಸಂಚಾಲಕ ಮಂಜುನಾಥಗೌಡ, ಪ್ರಥಮದರ್ಜೆ ಗುತ್ತಿಗೆದಾರರಾದ ಮರೀಗೌಡ, ನಾರಾಯಣಗೌಡ ಕಾಂತರಾಜು, ಸಚಿವರ ಆಪ್ತಸಹಾಯಕರಾದ ದಯಾನಂದ, ಪ್ರಭು, ಭುವನೇಶ್ವರ ಸೇರಿದಂತೆ ನೂರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.

error: