May 12, 2024

Bhavana Tv

Its Your Channel

ಐನಾತಿ ಮೋಟಾರ್ ಬೈಕ್ ಕಳ್ಳನ ಬಂಧನ; ಸಚಿವ ಡಾ.ನಾರಾಯಣಗೌಡರ ಅಂಗರಕ್ಷಕ ಮತ್ತು ಆಪ್ತಸಹಾಯಕನಿಂದ ಕಳ್ಳನ ಬಗ್ಗೆ ಮಾಹಿತಿ, ಸಾರ್ವಜನಿಕರ ಶ್ಲಾಘನೆ.

ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಹೆಮ್ಮನಹಳ್ಳಿ ಗ್ರಾಮದ ವಾಸಿ ರಾಜಣ್ಣ ಅವರ ಮಗ ರಾಕೇಶ್ ಮನೆಯ ಮುಂದೆ ನಿಲ್ಲಿಸಿದ್ದ ಬೆಲೆ ಬಾಳುವ ಮೋಟಾರ್ ಬೈಕುಗಳನ್ನು ಕದ್ದು ಮಾರಾಟ ಮಾಡುತ್ತಿದ್ದುದು ಪೋಲಿಸರ ವಿಚಾರಣೆಯ ಸಮಯದಲ್ಲಿ ಬೆಳಕಿಗೆ ಬಂದಿದೆ.
ಬೈಕ್ ಕಳ್ಳತನ ನಡೆಸುವ ದಂಧೆ ಮಾಡುತ್ತಿರುವ ರಾಕೇಶನ ಮೇಲೆ ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆಯಲ್ಲಿ ಮೊ.ಸಂ.226/2020 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ರಾಕೇಶ್ ನನ್ನು ಘನ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ…ಚನ್ನರಾಯಪಟ್ಟಣ ಟೌನಿನಲ್ಲಿ KA53EK7915 ಬಜಾಜ್ ಪಲ್ಸರ್, ಮೈಸೂರಿನ ವಿದ್ಯಾರಣ್ಯಪುರಂ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ KA09HH3700 ರಾಯಲ್ ಎನ್ ಫೀಲ್ಡ್ ಬುಲೆಟ್, KA53EK7915 ಹೀರೋಹೋಂಡಾ, KA18EB9082 ಡೆಸ್ಟಿನಿ ಮತ್ತು KA54E8712 ಹೀರೋ ಹೋಂಡ ಬೈಕುಗಳನ್ನು ಕಳ್ಳತನ ಮಾಡಿರುತ್ತಾನೆ. ರಾಕೇಶ ತನ್ನ ಮೊಬೈಲ್ ನಲ್ಲಿ OLX ಅಪ್ಲಿಕೇಷನ್ ಜಾಹಿರಾತು ಮೂಲಕ ದ್ವಿಚಕ್ರ ವಾಹನಗಳ ಮಾರಾಟದ ಬಗ್ಗೆ ನೋಡಿಕೊಂಡು ಅವರಿಗೆ ತನ್ನ ಮೊಬೈಲ್ ನಿಂದ ಕರೆ ಮಾಡದೇ ಬೇರೆಯವರ ನಂಬರಿನಿಂದ ಕರೆ ಮಾಡಿ ಅಲ್ಲಿಗೆ ಹೋಗಿ ತಾನು ಬೈಕ್ ಎಷ್ಟೇ ಬೆಲೆಯಾದರೂ ಖರೀದಿಸುವುದಾಗಿ ಅವರನ್ನು ನಂಬಿಸಿ ಬೈಕ್ ಅನ್ನು ಟ್ರಯಲ್ ನೋಡುವುದಾಗಿ ಹೇಳಿ ತೆಗೆದುಕೊಂಡು ಸ್ವಲ್ಪದೂರ ಬಂದು ವಂಚಿಸಿ ಕಳವುಮಾಡುವ ಪ್ರವೃತ್ತಿಯುಳ್ಳವನಾಗಿರುತ್ತಾನೆ .


ಮೊನ್ನೆ ಪ್ರೀತಂ ರೆಸ್ಟೋರೆಂಟ್ ನಲ್ಲಿ ತಂಗಿದ್ದ ಸಚಿವ ನಾರಾಯಣಗೌಡರ ಅಂಗರಕ್ಷಕ ಭುವನೇಶ್ವರ ಮತ್ತು ಆಪ್ತಸಹಾಯಕರಾದ ಪ್ರಶಾಂತ್ ಚನ್ನರಾಯಪಟ್ಟಣದಲ್ಲಿ ಕಳ್ಳತನವಾಗಿದ್ದ ಬಜಾಜ್ ಪಲ್ಸರ್ ಬೈಕಿನ ಮಾಹಿತಿಯು ಪೇಸ್ ಬುಕ್ ನಲ್ಲಿದ್ದುದನ್ನು ಗಮನಿಸಿ ಬೈಕ್ ಕಳ್ಳ ರಾಕೇಶ್ ನನ್ನು ಮಾಲು ಸಮೇತ ಹಿಡಿದು ಕೆ.ಆರ್.ಪೇಟೆ ಪಟ್ಟಣ ಪೋಲಿಸರಿಗೆ ಒಪ್ಪಿಸಿ ಬೈಕ್ ಕಳ್ಳತನದ ಜಾಲವನ್ನು ಬಯಲಿಗೆಳೆದಿದ್ದಾರೆ.ರಾಕೇಶ್ ನಿಂದ ಹೆಚ್ಚುವರಿ ಬೈಕುಗಳನ್ನು ವಶಪಡಿಸಿಕೊಳ್ಳುವ ಪ್ರಕರಣದಲ್ಲಿ ಕ್ರೈಂವಿಭಾಗದ ಮುಖ್ಯಪೇದೆ ನಾಗರಾಜು, ಪೇದೆಗಳಾದ ಜಯವರ್ಧನ ಮತ್ತು ಮನು ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ಅವರಿಗೆ ಸಹಕಾರ ನೀಡಿದ್ದಾರೆ.ಬೈಕ್ ಕಳ್ಳನನ್ನು ಬಂಧಿಸಿದ ಕೆ.ಆರ್.ಪೇಟೆ ಪಟ್ಟಣ ಪೋಲಿಸರ ಕಾರ್ಯದಕ್ಷತೆಯನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಅಭಿನಂದಿಸಿದ್ದಾರೆ. ನಾಗಮಂಗಲ ಡಿವೈಎಸ್ ಪಿ ನವೀನ್ ಕುಮಾರ್ ಅವರಿಗೆ ಪೋಲಿಸ್ ಗೌರವದೊಂದಿಗೆ ಆತ್ಮೀಯ ಸ್ವಾಗತ.
ಈ ಸಂದರ್ಭದಲ್ಲಿ ನಾಗಮಂಗಲ ಉಪವಿಭಾಗಕ್ಕೆ ಪೋಲಿಸ್ ಉಪಾಧೀಕ್ಷ ಅಧಿಕಾರಿಯಾಗಿ ವರ್ಗಾವಣೆಗೊಂಡು ಪ್ರಥಮ ಬಾರಿಗೆ ಕೆ.ಆರ್.ಪೇಟೆಗೆ ಆಗಮಿಸಿದ ನಾಗಮಂಗಲ ಡಿವೈಎಸ್ ಪಿ ನವೀನ್ ಕುಮಾರ್ ಅವರನ್ನು ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ ಪೋಲಿಸ್ ಗೌರವ ನೀಡಿ ಸ್ವಾಗತಿಸಿದರು. ವೃತ್ತ ಆರಕ್ಷಕ ನಿರೀಕ್ಷಕರಾದ ಕೆ.ಎನ್.ಸುಧಾಕರ್ ಮತ್ತು ಪಟ್ಟಣ ಪೋಲಿಸ್ ಠಾಣೆಯ ಸಿಬ್ಬಂಧಿಗಳು ಉಪಸ್ಥಿತರಿದ್ದರು..

ವರದಿ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.

error: