May 12, 2024

Bhavana Tv

Its Your Channel

ಪುರಾಣ ಪ್ರಸಿದ್ಧವಾದ ಶ್ರೀರಂಗಪಟ್ಟಣದ ಗಂಜಾOನ ಶ್ರೀ ನಿಮಿಷಾಂಬ ದೇವಸ್ಥಾನ ಹಾಗೂ ಶ್ರೀರಂಗಪಟ್ಟಣದ ಐತಿಹಾಸಿಕ ಸುಲ್ತಾನ್ ಬತೇರಿಗೆ ಸಚಿವ ಡಾ.ನಾರಾಯಣಗೌಡ ಭೇಟಿ

ಮಂಡ್ಯ: ಜಿಲ್ಲೆಯ ಪುರಾಣ ಪ್ರಸಿದ್ಧವಾದ ಶ್ರೀರಂಗಪಟ್ಟಣದ ಗಂಜಾAನ ಶ್ರೀ ನಿಮಿಷಾಂಬ ದೇವಸ್ಥಾನ ಹಾಗೂ ಶ್ರೀರಂಗಪಟ್ಟಣದ ಐತಿಹಾಸಿಕ ಸುಲ್ತಾನ್ ಬತೇರಿಗೆ ರಾಜ್ಯದ ಪೌರಾಡಳಿತ, ರೇಷ್ಮೆ, ತೋಟಗಾರಿಕೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಭೇಟಿ.ಸುಲ್ತಾನ್ ಬತೇರಿಯ ಮೇಲಿಂದ ನಗರದ ಸೌಂದರ್ಯವನ್ನು ಕಣ್ತುಂಬಿಕೊoಡ ಸಚಿವರು ಹಾಗೂ ಜಿಲ್ಲಾಧಿಕಾರಿ ಡಾ.ವೆಂಕಟೇಶ್.

ಅಕ್ಟೋಬರ್ ೨೩ರಿಂದ ಶ್ರೀರಂಗಪಟ್ಟಣದಲ್ಲಿ ಐತಿಹಾಸಿಕ ಪಾರಂಪರಿಕ ದಸರಾ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಸಂಕಷ್ಠಗಳು ಎದುರಾಗದೇ ನಿರ್ವಿಘ್ನವಾಗಿ ದಸರಾ ನಡೆಯಲಿ ಎಂದು ತಾಯಿ ನಿಮಿಷಾಂಬ ದೇವಿಯನ್ನು ಪ್ರಾರ್ಥಿಸಿದ ಸಚಿವ ಡಾ.ನಾರಾಯಣಗೌಡ ಕೊರೋನಾ ಸಂಕಷ್ಠದ ಹಿನ್ನೆಲೆಯಲ್ಲಿ ಸರಳವಾಗಿ ದಸರಾ ಆಚರಿಸುವ ನಿರ್ಧಾರವನ್ನು ಕೈಗೊಂಡರು.

ಸುಲ್ತಾನ್ ಬತೇರಿಯ ಮೇಲೆ ಒಂದು ದಿನ ನಾಡಿನ ಖ್ಯಾತ ಗಾಯಕರಾದ ರಘು ದೀಕ್ಷಿತ್ ನೇತೃತ್ವದ ತಂಡದಿAದ ಸುಗಮ ಸಂಗೀತ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲು ಸುಲ್ತಾನ್ ಬತೇರಿಯನ್ನು ಹತ್ತಿದ ಸಚಿವ ನಾರಾಯಣಗೌಡ ಐತಿಹಾಸಿಕ ಬತೇರಿಯ ಮೇಲೆ ನಡೆಯುವ ಕಾರ್ಯಕ್ರಮವನ್ನು ಪಟ್ಟಣದ ಜನರು ಅವರ ಮನೆಯ ಮೇಲೆಯೆ ನಿಂತು ನೋಡಿ ಆಹ್ವಾದಿಸಲು ಅವಕಾಶವಿರುವುದರಿಂದ ನಾಡಿನ ಖ್ಯಾತ ಗಾಯಕ ರಘು ದೀಕ್ಷಿತ್ ಅವರನ್ನು ಕರೆಸಿ ಸುಗಮಸಂಗೀತ ಕಾರ್ಯಕ್ರಮ ನಡೆಸೋಣ, ಕೊರೋನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿ ಸರಳವಾಗಿ ದಸರಾ ಆಚರಿಸೋಣ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆAಕಟೇಶ್ ಅವರಿಗೆ ಸೂಚನೆ ನೀಡಿದರು …

ಈ ಸಂದರ್ಭದಲ್ಲಿ ದಸರಾ ಸಮಿತಿಯ ಅಧ್ಯಕ್ಷರು ಹಾಗೂ ಪಾಂಡವಪುರ ಉಪವಿಭಾಗಾಧಿಕಾರಿಗಳಾದ ಶಿವಾನಂದಮೂರ್ತಿ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಸಂಸ್ಕೃತಿ ಸಂಘಟಕ ಶ್ರೀರಂಗಪಟ್ಟಣದ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿಯ ಅಧ್ಯಕ್ಷ ವೇದಬ್ರಹ್ಮ ಡಾ.ಭಾನುಪ್ರಕಾಶಶರ್ಮ, ತಹಶೀಲ್ದಾರ್ ರೂಪ, ಸರ್ಕಲ್ ಇನ್ಸ್ ಪೆಕ್ಟರ್ ಡಿ.ಯೋಗೇಶ್, ನಿಮಿಷಾಂಬ ದೇವಸ್ಥಾನದ ಆಡಳಿತಾಧಿಕಾರಿ ಗಂಗಯ್ಯ ಮತ್ತಿತರರು ಉಪಸ್ಥಿತರಿದ್ದರು…
ವರದಿ: ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.

error: